Advertisment

ಭಾರೀ ಮಳೆಯ ಮುನ್ಸೂಚನೆ.. ಜೂನ್ 11ರವರೆಗೆ ಅಲರ್ಟ್​ ಆಗಿರುವಂತೆ ಖಡಕ್ ವಾರ್ನಿಂಗ್

author-image
Bheemappa
Updated On
ಭಾರೀ ಮಳೆಯ ಮುನ್ಸೂಚನೆ.. ಜೂನ್ 11ರವರೆಗೆ ಅಲರ್ಟ್​ ಆಗಿರುವಂತೆ ಖಡಕ್ ವಾರ್ನಿಂಗ್
Advertisment
  • ರಾಜ್ಯದಲ್ಲಿ ಮುಂಗಾರಿನ ಆರಂಭದಲ್ಲೇ ಸಾಲು ಸಾಲು ಅವಾಂತರಗಳು
  • ಭಾರೀ ಮಳೆಗೆ ಹಿರೇಹಳ್ಳಿಯಲ್ಲಿ ಅಪಾರ ಪ್ರಮಾಣದ ಶುಂಠಿ ಬೆಳೆ ನಾಶ
  • ಮನೆಗೆ ನುಗ್ಗಿದ ನೀರನ್ನ ಹೊರಹಾಕಲು ಹರಸಾಹಸ ಪಟ್ಟ ಕುಟುಂಬಸ್ಥರು

ಜೂನ್‌ ಮೊದಲ ವಾರದಲ್ಲಿಯೇ ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ಕೊಟ್ಟು ಅಬ್ಬರಿಸ್ತಿದ್ದಾನೆ. ಈಗಾಗ್ಲೇ ಇದೇ ಅಟಾಟೋಪ ಎರಡನೇ ವಾರದಲ್ಲೂ ಮುಂದುವರೆದಿದೆ. ಮುಂಗಾರು ಮಳೆಯಿಂದಾಗಿ ಸಾಲು ಸಾಲು ಅವಾಂತರ ಸೃಷ್ಠಿಯಾಗಿದೆ.

Advertisment

publive-image

ಬೆಳಗಾವಿ
ನಿಪ್ಪಾಣಿಯ ವಿವಿಧ ರಸ್ತೆ, ಹಳ್ಳದ ಸೇತುವೆಗಳು ಜಲಾವೃತ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕು ಸೇರುವ ಗಡಿ ಭಾಗದ ಕಡೆ ಭಾರಿ ಮಳೆ ಸತತ ಮೂರು ಗಂಟೆಗೂ ಅಧಿಕ ಸಮಯ ಸುರಿದಿದೆ. ಮಳೆಯಿಂದ ರಸ್ತೆಗಳು‌ ಜಲಾವೃತವಾಗಿ ಹಳ್ಳ, ಕೊಳ್ಳಗಳು ತುಂಬಿ ಹರಿದಿದೆ. ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ಥವಾಗಿತ್ತು.

ಬೆಳಗಾವಿ
ಮನೆಗಳಿಗೆ ನುಗ್ಗಿದ ಮಳೆ ನೀರು, ಜನ ಜಾಗರಣೆ

ಮಳೆರಾಯನ ಅರ್ಭಟಕ್ಕೆ ಬೆಳಗಾವಿಯ ವಡಗಾಂವ ಆನಂದ ನಗರದಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನುಗ್ಗಿದ ನೀರನ್ನ ಹೊರಹಾಕಲು ಕುಟುಂಬಸ್ಥರ ಹರಸಾಹಸ ಪಟ್ರು..

ಬಾಗಲಕೋಟೆ
ಬೀಳಗಿ ಭಾಗದಲ್ಲಿ ಧಾರಾಕಾರ ಮಳೆ, ನದಿಯಂತಾದ ರಸ್ತೆ!

ಬಾಗಲಕೋಟೆ ಜಿಲ್ಲೆಯ ಬೀಳಗಿ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಗಂಟೆಗಟ್ಟಲೆ ಸುರಿದ ಮಳೆರಾಯ ರಸ್ತೆ ‌ಮೇಲೆ‌ ನದಿಯಂತೆ ಪ್ರವಹಿಸಿದ್ದಾನೆ. ವಾಹನ ಸವಾರರು ಮಾತ್ರ ಪರದಾಡಿದ್ರು.

Advertisment

ಕಲಬುರಗಿ
ಜೇವರ್ಗಿ ಪಟ್ಟಣದಲ್ಲಿ ಸುರಿದ ಅಬ್ಬರದ ಮಳೆ!

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಸುರಿದ ಅಬ್ಬರದ ಮಳೆಗೆ ಬಹುತೇಕ ಪ್ರಮುಖ ರಸ್ತೆಗಳು ಜಲಾವೃತವಾಗಿವೆ. ಜೇವರ್ಗಿ ಪಟ್ಟಣದ ಬಸ್ ಸ್ಟ್ಯಾಂಡ್ ಮುಂಭಾಗದ ರಸ್ತೆ, ವಿಜಯಪುರ ರಸ್ತೆ, ಶಹಾಪುರ, ಕಲಬುರಗಿ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡಿದ್ರು. ಇನ್ನೂ ಹವಾಮಾನ ಇಲಾಖೆಯಿಂದ 3 ದಿನಗಳ ಕಾಲ ಅಂದ್ರೆ 11 ರವರೆಗೆ ರೆಡ್ ಅಲರ್ಟ್​ ನೀಡ್ಲಾಗಿದೆ.

ಇದನ್ನೂ ಓದಿ:T20 World Cup; ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆಯಲಿರೋ ಕಿಂಗ್ ಕೊಹ್ಲಿ.. ರೆಕಾರ್ಡ್ ಯಾವುದು?

publive-image

ಮೈಸೂರು ಭಾಗದಲ್ಲೂ ಮುಂದುವರಿದ ವರುಣನ ಅಬ್ಬರ

ಮೈಸೂರು ಭಾಗದ ಹೆಚ್​ಡಿ ಕೋಟೆಯ ಹಿರೇಹಳ್ಳಿ ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಶುಂಠಿ ಬೆಳೆ ಕೊಚ್ಚಿ ಹೋಗಿ ನಾಶವಾಗಿದೆ.

Advertisment

ಇದನ್ನೂ ಓದಿ: T20 World Cup; ಉಗ್ರರ ಬೆದರಿಕೆ.. ಇಂಡಿಯಾ- ಪಾಕ್ ಮ್ಯಾಚ್​ ನಡೆಯೋದೆ ಡೌಟ್!

ಮುಂಗಾರಿನ ಪ್ರಾರಂಭದಲ್ಲಿಯೇ ರಾಜ್ಯದಲ್ಲಿ ಅವಾಂತರಗಳು ಸಾಲುಗಟ್ಟಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂಗಾರು ಮಳೆಯಿಂದಾಗುವ ಸಮಸ್ಯೆ ಬಗ್ಗೆ ಗಮನ ಹರಿಸಿದ್ರೆ ಮುಂದಾಗೋ ಅನಾಹುತ ತಪ್ಪಿಸಬಹುದು ಎನ್ನುವುದು ಜನರ ಸಲಹೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment