/newsfirstlive-kannada/media/post_attachments/wp-content/uploads/2025/05/CORONA-1.jpg)
ಬೆಂಗಳೂರು: ಹೋದ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಎಂದು ಕೊರೊನಾ ರಾಕ್ಷಸಿ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಮತ್ತೆ ಹೆಚ್ಚಾಗುತ್ತಿವೆ. 47 ಇದ್ದ ಕೋವಿಡ್ ಪ್ರಕರಣಗಳು ಇಂದು ರಾಜ್ಯದಲ್ಲಿ 80ಕ್ಕೆ ಏರಿಕೆ ಆಗಿವೆ.
ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 47 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಇದರೊಂದಿಗೆ ಇದೀಗ ಸೋಂಕಿತರ ಸಂಖ್ಯೆ 80ಕ್ಕೆ ಹೆಚ್ಚಳವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಮಾತ್ರ 73 ಪ್ರಕರಣ ದಾಖಲು ಆಗಿವೆ. ಒಟ್ಟು 183 ಜನರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 73 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ.
ಇದನ್ನೂ ಓದಿ: 4, 4, 4, 4, 4, 4, 6, 6; ಸೂರ್ಯಕುಮಾರ್ ಮತ್ತೆ ಅಬ್ಬರ.. ಎದುರಾಳಿಗೆ ಸಾಧಾರಣ ಟಾರ್ಗೆಟ್
ಬೆಂಗಳೂರು ನಗರ ಬಿಟ್ಟರೇ ಬೆಂಗಳೂರು ಗ್ರಾಮಾಂತರದಲ್ಲಿ ಇಬ್ಬರಿಗೆ ಪಾಸಿಟಿವ್ ಆಗಿದೆ. ದಕ್ಷಿಣ ಕನ್ನಡದಲ್ಲಿ ಒಂದು ಪಾಸಿಟಿವ್, ಮೈಸೂರು ಭಾಗದಲ್ಲಿ 3 ಪಾಸಿಟಿವ್ ಹಾಗೂ ವಿಜಯನಗರದಲ್ಲಿ ಒಂದು ಪಾಸಿಟಿವ್ ಆಗಿದೆ. ಈ ಕೊರೊನಾ ಅಂತಹ ಅಂತಹ ಅಪಾಯಕಾರಿ ಅಲ್ಲವೆಂದು ಸರ್ಕಾರ ಹೇಳಿದರೂ ಸಾರ್ವಜನಿಕರು ಆದಷ್ಟು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಮುನ್ನೆಚ್ಚರಿಕೆಯಾಗಿ ಮಾಸ್ಕ್, ಹ್ಯಾಂಡ್ ಸ್ಯಾನಿಟೈಝರ್ ಬಳಕೆ ಮಾಡಬೇಕು.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಮೈಸೂರು, ಹಾಗೂ ವಿಜಯನಗರದಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಉಳಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಆದಷ್ಟು ಜನರು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಗಮನ ಹರಿಸಬೇಕು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ