Advertisment

ಕರ್ನಾಟಕದ ರೆವಿನ್ಯೂ ಇಲಾಖೆಯಲ್ಲಿ ಬೃಹತ್ ಹುದ್ದೆಗಳ ನೇಮಕಾತಿ.. ಅರ್ಜಿ ಆರಂಭ, ಕೊನೆ ದಿನಾಂಕ?

author-image
Bheemappa
Updated On
ONGC; ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.. SSLC, PUC, ಐಟಿಐ ಸೇರಿ ಪದವೀಧರರಿಗೂ ಅವಕಾಶ
Advertisment
  • ಈ ಹುದ್ದೆಗೆ ಅರ್ಜಿ ಶುಲ್ಕ ಎಷ್ಟು, ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತೆ?
  • ವಯೋಮಿತಿ ಸಡಿಲಿಕೆ, ಅರ್ಜಿ ಹಾಕದಿರುವವರು ಸಲ್ಲಿಕೆ ಮಾಡಿ
  • 18-40 ವರ್ಷದ ಒಳಗಿನ ಅಭ್ಯರ್ಥಿಗಳು ಅಪ್ಲೇ ಮಾಡಬಹುದು

ಕರ್ನಾಟಕ ಆದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಈಗಾಗಲೇ ಇದರ ಅಧಿಸೂಚನೆಯನ್ನು ಪ್ರಕಟ ಮಾಡಲಾಗಿತ್ತು. ಹಲವು ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಕೂಡ ಸಲ್ಲಿಕೆ ಮಾಡಿದ್ದರು. ಆದರೆ ಸರ್ಕಾರದ ಆದೇಶದಂತೆ ವಯೋಮಿತಿ ಸಡಿಲಿಕೆ ಮಾಡಿದ್ದರಿಂದ ಅಪ್ಲೇ ಮಾಡಿರದ ಅಭ್ಯರ್ಥಿಗಳು ಈಗ ಆನ್​​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

Advertisment

ಇದನ್ನೂ ಓದಿ:ಡಿಗ್ರಿ ಮಾಡಿದವರಿಗೆ ಗುಡ್​ನ್ಯೂಸ್​​; ಕೆನರಾ ಬ್ಯಾಂಕ್​​ನಲ್ಲಿ 3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ಮಾಹಿತಿ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಪ್ರಮುಖ ದಿನಾಂಕ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣ ವಿವರ ಇಲ್ಲಿ ಕೊಡಲಾಗಿದೆ. ಇದೆಲ್ಲವನ್ನು ಅಭ್ಯರ್ಥಿಗಳು ತಿಳಿದುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಈ ಹುದ್ದೆಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 20/02/2024ರಂದು ಅಧಿಸೂಚನೆ ಪ್ರಕಟಿಸಿತ್ತು. 05/04/2024ರಿಂದ ಅರ್ಜಿಗಳು ಆರಂಭ ಮಾಡಿ ಪೂರ್ಣಗೊಳಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ವಯೋಮಿತಿ ಸಡಿಲಿಕೆ ಮಾಡಿದ್ದರಿಂದ ಅರ್ಜಿ ಸಲ್ಲಿಕೆ ಮಾಡಲು ಇನ್ನಷ್ಟು ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ: EXAMS: ಪೊಲೀಸ್​​, ವಿಲೇಜ್​ ಅಕೌಂಟೆಂಟ್​​, ಕೆಸೆಟ್​​ ಸೇರಿ ಹಲವು ಪರೀಕ್ಷೆಗಳ ವೇಳಾಪಟ್ಟಿ ಔಟ್

Advertisment

publive-image

ವೇತನಶ್ರೇಣಿ; ಮಾಸಿಕ ₹21,400 ರಿಂದ ₹42,000

ಶೈಕ್ಷಣಿಕ ಅರ್ಹತೆ; ಅಭ್ಯರ್ಥಿಗಳು 12ನೇ ತರಗತಿ ಪೂರ್ಣಗೊಳಿಸಿರಬೇಕು
ಡಿಪ್ಲೋಮಾ, 2 ವರ್ಷದ ಐಟಿಐ, ಜೆಎಲ್​ಡಿಸಿ ಮುಗಿಸಿದವರು ಅರ್ಜಿ ಹಾಕಬಹುದು
ಅರ್ಜಿ ಸಲ್ಲಿಕೆ ಮಾಡುವ ವಿಧಾನ; ಆನ್​ಲೈನ್ ಮಾತ್ರ

ಹುದ್ದೆಯ ಹೆಸರು- ಗ್ರಾಮ ಆಡಳಿತ ಅಧಿಕಾರಿ
ಒಟ್ಟು ಹುದ್ದೆಗಳು ಎಷ್ಟು; 1,000

ವಯೋಮಿತಿ; 18 ವರ್ಷದಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು ಅಪ್ಲೇ ಮಾಡಬಹುದು.
ಎಸ್​ಸಿ, ಎಸ್​​​ಟಿ, ಪ್ರವರ್ಗ- 1 ಅಭ್ಯರ್ಥಿಗಳು- 40 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 38 ವರ್ಷ
ಸಾಮಾನ್ಯ ಅಭ್ಯರ್ಥಿಗಳು- 35 ವರ್ಷ ಮಾತ್ರ

ಅರ್ಜಿ ಶುಲ್ಕ;
ಎಸ್​ಸಿ, ಎಸ್​​​ಟಿ, ಪ್ರವರ್ಗ- 1 ಅಭ್ಯರ್ಥಿಗಳು- ₹500
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- ₹750
ಮಾಜಿ ಸೈನಿಕ, ವಿಕಲ ಚೇತನರಿಗೆ- ₹500

Advertisment

ಆಯ್ಕೇ ಪ್ರಕ್ರಿಯೆ ಹೇಗೆ ಇರುತ್ತದೆ..?
ರಾಜ್ಯಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ

ಪ್ರಮುಖವಾದ ದಿನಾಂಕಗಳು ಇಲ್ಲಿವೆ

ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 28/09/2024
ಶುಲ್ಕ ಪಾವತಿಸಲು ಕೊನೆ ದಿನಾಂಕ- 29/09/2024

ಹಳೆ ನೋಟಿಫಿಕೇಶನ್ ಲಿಂಕ್- https://drive.google.com/file/d/1oYQjumkMlJAK6fUbL67FC3mtDngapMhf/view

Advertisment

ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈ ಲಿಂಕ್ ಕ್ಲಿಕ್ ಮಾಡಿ- https://cetonline.karnataka.gov.in/kea/vacrec24

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment