ದ್ವಿತೀಯ PU ಫಲಿತಾಂಶ.. ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಪಾಸ್‌! ಯಾವ ಜಿಲ್ಲೆಗೆ ಪ್ರಥಮ ಸ್ಥಾನ?

author-image
admin
Updated On
ದ್ವಿತೀಯ PU ಫಲಿತಾಂಶ.. ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಪಾಸ್‌! ಯಾವ ಜಿಲ್ಲೆಗೆ ಪ್ರಥಮ ಸ್ಥಾನ?
Advertisment
  • 2024-25ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟ
  • ಈ ವರ್ಷವೂ ಪಿಯು ಪರೀಕ್ಷೆಯಲ್ಲಿ ಬಾಲಕಿಯರದ್ದೇ ಮೇಲುಗೈ
  • ದ್ವಿತೀಯ ಪಿಯು ಫಲಿತಾಂಶದಲ್ಲಿ ಮೊದಲ ಸ್ಥಾನ, ಕೊನೆ ಸ್ಥಾನ ಯಾವ ಜಿಲ್ಲೆ?

2024-25ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ವರ್ಷವೂ ರಾಜ್ಯದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇಕಡಾ 68.20ರಷ್ಟು ಬಾಲಕರು ಉತ್ತೀರ್ಣರಾಗಿದ್ರೆ, ಶೇಕಡಾ 77.88ರಷ್ಟು ಬಾಲಕಿಯರು ಪಾಸ್ ಆಗಿದ್ದಾರೆ. ಒಟ್ಟು 73.45 ರಷ್ಟು ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ.

ಇದನ್ನೂ ಓದಿ:Newsfirst ಜ್ಞಾನ ಸಂಗಮಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಏನು ಉಪಯೋಗ?

ಯಾವ ವಿಭಾಗದಲ್ಲಿ ಎಷ್ಟು ಪಾಸ್‌?
ಕಲಾ : 53.29 ಪರ್ಸೆಂಟ್
ವಾಣಿಜ್ಯ : 76.07 ಪರ್ಸೆಂಟ್
ವಿಜ್ಞಾನ : 82.54 ಪರ್ಸೆಂಟ್

publive-image

ಈ ಸಾಲಿನ ದ್ವಿತೀಯ ಪಿಯು ಫಲಿತಾಂಶದಲ್ಲಿ ಮೊದಲ ಸ್ಥಾನ ಉಡುಪಿ ಜಿಲ್ಲೆಗೆ ಸಿಕ್ಕಿದೆ. ಉಡುಪಿಯಾಲ್ಲಿ ಶೇಕಡಾ 93.90ರಷ್ಟು ಮಕ್ಕಳು ಪಾಸ್ ಆಗಿದ್ದು ಪಿಯು ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ ಪಡೆದಿದ್ದು, ಕೊನೆ ಸ್ಥಾನ ಶೇಕಡಾ 48.45 ರಷ್ಟು ಪಡೆದಿರುವ ಯಾದಗಿರಿ ಜಿಲ್ಲೆ ಪಡೆದಿದೆ.

ಇದನ್ನೂ ಓದಿ: BREAKING: ದ್ವಿತೀಯ PU ಫಲಿತಾಂಶ ಪ್ರಕಟ.. ಈ ಬಾರಿ ರಾಜ್ಯಕ್ಕೆ ಪ್ರಥಮ ಯಾರು? 

ಶಿಕ್ಷಣ ಸಚಿವ ಮಧು ಬಂಗಾರಪ್ಪ ದ್ವಿತೀಯ ಪಿಯು ಫಲಿತಾಂಶ ಪ್ರಕಟ ಮಾಡಿದ್ದಾರೆ. ಏಪ್ರಿಲ್ 24 ದ್ವಿತೀಯ ಪಿಯು ಪರೀಕ್ಷಾ -2 ಆರಂಭ ಆಗಲಿದೆ. ಏಪ್ರಿಲ್ 24 ರಿಂದ ಮೇ 8ರವರೆಗೆ ದ್ವಿತೀಯ ಪಿಯು ಪರೀಕ್ಷೆ 2 ನಡೆಯುತ್ತೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment