newsfirstkannada.com

ಮತ್ತೊಂದು ಹಂತಕ್ಕೆ ತಿರುಗಿದ ‘ಅನುದಾನ ಕದನ‘; ಕೇಂದ್ರದ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ..!

Share :

Published February 23, 2024 at 7:25am

    ಸ್ಪೀಕರ್ ಯುಟಿ ಖಾದರ್​ ನಡೆ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ನಾಯಕರು

    ಎರಡು ನಿರ್ಣಯಗಳನ್ನ ಮಂಡಿಸಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್

    ಕೇಂದ್ರದಿಂದ ಅನುದಾನ ಮತ್ತು ತೆರಿಗೆ ಪಾಲಿನಲ್ಲಿ ತಾರತಮ್ಯ ಮಾಡಲಾಗ್ತಿದೆ

ಕೇಂದ್ರದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಏಕಾಏಕಿ ವಿಧಾನಸಭೆಯಲ್ಲಿ 2 ನಿರ್ಣಯಗಳನ್ನ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಂಡನೆ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇವತ್ತು ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದೆ.

ಕೇಂದ್ರದ ಅನುದಾನ ಕದನ ಮತ್ತೊಂದು ಹಂತಕ್ಕೆ ಹೋಗಿದೆ. ಡೆಲ್ಲಿಯಲ್ಲಿ ಪ್ರತಿಭಟನೆ ತೆರಿಗೆ ಫೈಟ್​​​ ನಡೆಸಿದ್ದ ಸರ್ಕಾರ, ಈಗ ಕೇಂದ್ರದ ವಿರುದ್ಧ ನಿರ್ಣಯ ಮಂಡಿಸಿದೆ. ಅನುದಾನ ಮತ್ತು ತೆರಿಗೆ ಪಾಲಿನಲ್ಲಿ ತಾರತಮ್ಯ ಮಾಡ್ಲಾಗ್ತಿದೆ ಅಂತ ಕೇಂದ್ರದ ವಿರುದ್ಧ ನಿರ್ಣಯ ಪಾಸ್​​​ ಮಾಡಲಾಗಿದೆ.

ಮತ್ತೊಂದು ಹಂತಕ್ಕೆ ತಿರುಗಿದ ಅನುದಾನ ತಾರತಮ್ಯ ಕದನ!

ರಾಜ್ಯಕ್ಕೆ 68 ಸಾವಿರ 200 ಕೋಟಿ ತೆರಿಗೆ ನಷ್ಟ ಆಗಿದೆ ಅಂತ ಸರ್ಕಾರ ಆರೋಪಿಸಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್​ ಸರ್ಕಾರ ನಿರ್ಣಯ ಮಂಡಿಸಿದೆ. ಬಿಜೆಪಿ ಸದಸ್ಯರ ಆಕ್ಷೇಪದ ನಡುವೆ ಸಚಿವ ಹೆಚ್.ಕೆ ಪಾಟೀಲ್ ನಿರ್ಣಯದ ಪ್ರತಿ ಓದಿದರು. ಕರ್ನಾಟಕಕ್ಕೆ ಅನ್ಯಾಯ ಆಗಿದೆ. ನಮ್ಮ ಹಕ್ಕು ಕಸಿದುಕೊಳ್ಳಲಾಗಿದೆ ಅಂತ ಸದನ ಸರ್ವಾನುಮತದಿಂದ ಒಪ್ಪಬೇಕು ಅಂತ ಮನವಿ ಮಾಡಿದರು.

ಕೇಂದ್ರ ಸರ್ಕಾರವು ಬರ ಪರಿಹಾರದ ಮಾನದಂಡಗಳ ಪ್ರಕಾರ ಕೇಂದ್ರದ ಪಾಲು ನೀಡುತ್ತಿಲ್ಲ. ಹಣಕಾಸು ಆಯೋಗವು ಶಿಫಾರಸು ಮಾಡಿದ ಅನುದಾನ ನೀಡುವಲ್ಲಿ ಪಕ್ಷಪಾತ ಮಾಡುತ್ತಿದೆ. ಇದು ರಾಜ್ಯದ ಜನರ ಗಮನಕ್ಕೆ ಬಂದಿದೆ.

ಹೆಚ್​.ಕೆ.ಪಾಟೀಲ್​, ಕಾನೂನು ಸಚಿವ

ಇದಷ್ಟೇ ಅಲ್ಲ, ಎಂ.ಎಸ್ ಸ್ವಾಮಿನಾಥನ್ ವರದಿ ಶಿಫಾರಸುಗಳು ಜಾರಿಗೂ ನಿರ್ಣಯ ಮಂಡನೆ ಆಯ್ತು. ಇದರಿಂದ ಮತ್ತಷ್ಟು ಕೆರಳಿದ ಬಿಜೆಪಿ, ಸದನದಲ್ಲಿ ಗದ್ದಲ, ಕೋಲಾಹಲ ಸೃಷ್ಟಿಸಿತು. ಈ ವೇಳೆ, ಬಿಜೆಪಿ ಮತ್ತು ಕಾಂಗ್ರೆಸ್​​ ನಡುವೆ ವಾಕ್ಸಮರವೇ ಏರ್ಪಟ್ಟಿತು. ಸದನದ ಬಾವಿಗಿಳಿದು ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಧರಣಿ ನಡೆಸಿ, ವಿಷಜಂತು ಸರ್ಕಾರ ಅಂತ ಧಿಕ್ಕಾರದ ಘೋಷಣೆ ಕೂಗಿದವು.

ಸದನದಲ್ಲಿ ಪರಿಸ್ಥಿತಿ ಕೈಮಿರ್ತಿದ್ದಂತೆ ಕಲಾಪ ಮುಂದೂಡಲಾಯ್ತು. ಸ್ಪೀಕರ್​​​ ತಮ್ಮ ಕಚೇರಿಗೆ ಕರೆಸಿ ಸಂಧಾನಕ್ಕೆ ಯತ್ನಿಸಿದ್ರು. ಸಭೆಯಲ್ಲಿ ಬಿಜೆಪಿ ನಾಯಕರು ಜೋರು ಧ್ವನಿಯಲ್ಲಿ ಆಕ್ಷೇಪಿಸಿ, ಸ್ಪೀಕರ್ ವಿರುದ್ಧ ಕಿಡಿಕಾರಿದ್ರು. ನಂತ್ರ ಸಂಧಾನ ವಿಫಲವಾಗಿ ವಿಧಾನಸಭಾ ಕಲಾಪವೂ ಬೆಳಗ್ಗೆಗೆ ಮುಂದೂಡಿಕೆ ಆಯ್ತು.

‘ಮೆದುಳು ವಿಷಪೂರಿತವಾಗಿದೆ’

ಕಾಂಗ್ರೆಸ್​​ನವರು ಹೊಸ ಸಂಸ್ಕೃತಿಯನ್ನು ಹೊಸದಾಗಿ ಹುಟ್ಟು ಹಾಕಿದ್ದಾರೆ. ಕಾಂಗ್ರೆಸ್​​ನವರ ಮೆದುಳೆ ವಿಷಪೂರಿತವಾಗಿದೆ. ದ್ವೇಷವಿದೆ ಅವರಲ್ಲಿ.

ಆರ್​.ಅಶೋಕ್​, ವಿಪಕ್ಷ ನಾಯಕ

ವಿಚಾರ ಹೊನ್ನಾರ ಇಟ್ಟುಕೊಂಡು ಶಿಫಾರಸು ಮಾಡಿರುವುದು ವಿಧಾನಸಭೆಯ ಇತಿಹಾಸದಲ್ಲಿ ಅತ್ಯಂತ ದ್ರೋಹದ ಕೆಲಸವನ್ನು ಕಾಂಗ್ರೆಸ್​​ನವರು ಮಾಡಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ.

ಬಸವರಾಜ್​​​ ಬೊಮ್ಮಾಯಿ, ಮಾಜಿ ಸಿಎಂ

ಸ್ಪೀಕರ್ ನಡೆ ವಿರುದ್ಧ ಸಿಡಿದೆದ್ದಿರುವ ಬಿಜೆಪಿ, ಜೆಡಿಎಸ್ ನಾಯಕರು ಇವತ್ತು ರಾಜಭವನಕ್ಕೆ ತೆರಳಲು ನಿರ್ಧರಿಸಿದ್ದಾರೆ. ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದ್ದಾರೆ. ಲೋಕಸಭೆ ಎಲೆಕ್ಷನ್​​ನಲ್ಲೂ ಅನುದಾನ ತಾರತಮ್ಯ ಪ್ರತಿಧ್ವನಿಸೋದು ನಿಶ್ಚಿತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೊಂದು ಹಂತಕ್ಕೆ ತಿರುಗಿದ ‘ಅನುದಾನ ಕದನ‘; ಕೇಂದ್ರದ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ..!

https://newsfirstlive.com/wp-content/uploads/2024/02/SIDDU_MODI.jpg

Load More