/newsfirstlive-kannada/media/post_attachments/wp-content/uploads/2023/06/SSLC_RESULT.jpg)
ರಾಜ್ಯದಲ್ಲಿ ಇಂದಿನಿಂದ 10ನೇ ತರಗತಿ ಪರೀಕ್ಷೆ ಆರಂಭವಾಗಲಿವೆ. ರಾಜ್ಯದ ವಿವಿಧ ಜಿಲ್ಲೆಗಳ 15 ಸಾವಿರದ 881 ಶಾಲೆಗಳಲ್ಲಿ ಒಟ್ಟು 8 ಲಕ್ಷದ 42 ಸಾವಿರದ 817 ವಿದ್ಯಾರ್ಥಿಗಳು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಇದನ್ನೂ ಓದಿ:ಡಯೆಟ್ ಪ್ಲ್ಯಾನ್ ಫಾಲೋ ಮಾಡೋರೇ ಎಚ್ಚರ.. 23 ವರ್ಷದ ಯುವತಿ ಜೀವಕ್ಕೆ ಕುತ್ತು; ಆಗಿದ್ದೇನು?
ಪುನರಾವರ್ತಿತ ಮತ್ತು ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 8 ಲಕ್ಷದ 96 ಸಾವಿರದ 447 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 3 ಲಕ್ಷದ 35 ಸಾವಿರದ 468 ಬಾಲಕರು, 3 ಲಕ್ಷದ 78 ಸಾವಿರದ 389 ಬಾಲಕಿಯರು ಮತ್ತು ಐವರು ತೃತೀಯ ಲಿಂಗಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಒಟ್ಟು 2 ಸಾವಿರದ 818 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹೀಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೇ ಇವತ್ತಿಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಕೊನೆಗೊಂಡಿದೆ.
ಇಂದು ಮಾರ್ಚ್ 21 ರಿಂದ ಎಸ್ಎಸ್ಎಲ್ಸಿ ಪರೀಕ್ಷೆ- 01 ನಡೆಯಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್ 21 ರಿಂದ ಏಪ್ರಿಲ್ 4ರ ತನಕ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಧೈರ್ಯದಿಂದ ಪರೀಕ್ಷೆ ಎದುರಿಸಬೇಕು. ಯಾವ ದಿನ ಯಾವ ವಿಷಯದ ಪರೀಕ್ಷೆ ಇದೆ ಎನ್ನುವುದನ್ನ ಮನೆಯಲ್ಲೇ ಒಂದು ದಿನ ಮುನ್ನವೇ ಮೊದಲೇ ತಿಳಿದುಕೊಂಡು ಪರೀಕ್ಷೆಗೆ ತೆರಳಬೇಕು.
ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ
- ಮಾರ್ಚ್- 21 ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಪರಾಠಿ, ತಮಿಳು, ಉರ್ದು, ಇಂಗ್ಲಿಷ್, (ಎನ್ಸಿಆರ್ಟಿ) ಸಂಸ್ಕೃತ
- ಮಾರ್ಚ್- 24 ಗಣಿತ
- ಮಾರ್ಚ್- 26 ದ್ವಿತೀಯ ಭಾಷೆ- ಇಂಗ್ಲಿಷ್, ಕನ್ನಡ
- ಮಾರ್ಚ್- 29- ಸಮಾಜ ವಿಜ್ಞಾನ
- ಏಪ್ರಿಲ್- 01- ಅರ್ಥಶಾಸ್ತ್ರ, ಎಂಜಿನಿಯರಿಂಗ್ ವಿಷಯಗಳು
- ಏಪ್ರಿಲ್- 02- ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ
- ಏಪ್ರಿಲ್- 04- ತೃತೀಯ ಭಾಷೆಗಳು- ಕನ್ನಡ, ಇಂಗ್ಲಿಷ್, ಅರೇಬಿಕ್, ಹಿಂದಿ, ಪರ್ಷಿಯನ್, ಉರ್ದು, ಸಂಶ್ಕೃತ, ಕೊಂಕಣಿ, ತುಳು ಹಾಗೂ ಎನ್ಎಸ್ಕ್ಯೂಎಫ್ ವಿಷಯಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ