ವಿದ್ಯಾರ್ಥಿಗಳೇ ಗಮನಿಸಿ.. SSLC ಫಲಿತಾಂಶ ಪ್ರಕಟಿಸಲು ದಿನಾಂಕ ನಿಗದಿ; ಯಾವಾಗ?

author-image
admin
Updated On
BREAKING: 5, 8, 9, 11 ತರಗತಿ ಬೋರ್ಡ್‌ ಪರೀಕ್ಷೆ ಫಿಕ್ಸ್‌.. ಹೈಕೋರ್ಟ್ ಮಹತ್ವದ ತೀರ್ಪು
Advertisment
  • ಮಾರ್ಚ್‌ 25 ರಿಂದ ಏಪ್ರಿಲ್ 6, 2024ರವರೆಗೆ ನಡೆದ SSLC ಪರೀಕ್ಷೆ
  • ಫಲಿತಾಂಶಕ್ಕಾಗಿ ಕಾದು ಕುಳಿತಿರುವ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು
  • ನಾಳೆ ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಮತದಾನ

ಬೆಂಗಳೂರು: 2023-24ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ದಿನಗಣನೆ ಶುರುವಾಗಿದೆ. ಕರ್ನಾಟಕ ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ವಾರವೇ ರಾಜ್ಯದಲ್ಲಿ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.

2023-24ನೇ ಸಾಲಿನ SSLC ಪರೀಕ್ಷೆ-1 ಕಳೆದ ಮಾರ್ಚ್‌ 25 ರಿಂದ ಏಪ್ರಿಲ್ 6, 2024ರವರೆಗೆ ನಡೆದಿತ್ತು. ಪರೀಕ್ಷೆ-1 ಬರೆದಿರುವ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಕೊನೆಗೂ ಕಾಯುವಿಕೆಯ ಸಮಯ ಕೊನೆಯಾಗುತ್ತಿದೆ.

ಈ ಬಾರಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗುವುದು ತಡವಾಗಿದೆ. SSLC ಮೌಲ್ಯಮಾಪನ ಈಗಾಗಲೇ ಸಂಪೂರ್ಣವಾಗಿದ್ದು, ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲು ಸರ್ವ ಸಿದ್ಧತೆಯನ್ನು ಮಾಡಿಕೊಂಡಿದೆ.

publive-image

ಇದನ್ನೂ ಓದಿ:11 ವರ್ಷದ ಬಾಲಕನ ಖಾಸಗಿ ಅಂಗಕ್ಕೆ ಬಿದ್ದ ಬಾಲ್‌.. ಕ್ರಿಕೆಟ್ ಆಡುತ್ತಿದ್ದಾಗ ದುರಂತ ಅಂತ್ಯ; ವಿಡಿಯೋ! 

ನಾಳೆ ಅಂದ್ರೆ ಮೇ 7ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮತದಾನ ಮುಗಿದ ಎರಡು ದಿನದಲ್ಲಿ SSLC ಫಲಿತಾಂಶ ಪ್ರಕಟಿಸಲು ಪರೀಕ್ಷಾ ಮಂಡಳಿ ಮೂಲಗಳಿಂದ ಖಚಿತ ಮಾಹಿತಿ ಲಭ್ಯವಾಗಿದೆ. ಇದೇ ಮೇ 8 ಬುಧವಾರ ಇಲ್ಲವೇ ಮೇ 9ರ ಗುರುವಾರ SSLC ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಮೇ 10 ಬಸವ ಜಯಂತಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದೆ. ಹೀಗಾಗಿ ಮೇ 9ರೊಳಗೆ SSLC ಫಲಿತಾಂಶ ಪ್ರಕಟ ಮಾಡಲು ಪರೀಕ್ಷಾ ಮಂಡಳಿ ಮೂಲಗಳಿಂದ ಖಚಿತ ಮಾಹಿತಿ ಸಿಕ್ಕಿದೆ.

ನಾಳೆ ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದೆ. ಇದಾದ ಬಳಿಕ SSLC ಫಲಿತಾಂಶ ಮೇ 8 ಇಲ್ಲವೇ 9ರಂದು ಫಲಿತಾಂಶ ಪ್ರಕಟವಾಗೋದು ನಿಶ್ಚಿತ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಈ ಲಿಂಕ್‌ಗಳನ್ನ ಕ್ಲಿಕ್ ಮಾಡುವ ಮೂಲಕ ಸಂಪರ್ಕಿಸಬಹುದಾಗಿದೆ.
https://kseab.karnataka.gov.in 

https://sslc.karnataka.gov.in

https://karresults.nic.in

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment