/newsfirstlive-kannada/media/post_attachments/wp-content/uploads/2024/05/KL-Rahul-next-captain.jpg)
ಮುಂದಿನ ಸಲ ಕಪ್ ನಮ್ಮದೇ ಎಂದು ಆರ್ಸಿನಿ ಫ್ಯಾನ್ಸ್ಗಳು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಇದುವರೆಗೂ ಆರ್ಸಿಬಿಗೆ ಕಪ್ ಗೆಲ್ಲೋಕೆ ಸಾಧ್ಯವಾಗಿಲ್ಲ. ಕಳೆದ 17 ವರ್ಷಗಳಿಂದಲೂ ಕಳಪೆ ಪ್ರದರ್ಶನ ನೀಡುತ್ತಿರುವ ಆರ್ಸಿಬಿ ತಂಡ ಈ ಬಾರಿ ಕಪ್ ಗೆಲ್ಲಲೇ ಬೇಕು ಎನ್ನುವ ಛಲಕ್ಕೆ ಬಿದ್ದಿದೆ. ಹಾಗಾಗಿ ವರ್ಷದ ಕೊನೆಗೆ ನಡೆಯಲಿರೋ ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಸಜ್ಜಾಗಿದೆ. ಇದಕ್ಕೂ ಮುನ್ನವೇ ಕನ್ನಡಿಗ ಮನೀಶ್ ಪಾಂಡೆ ಆರ್ಸಿಬಿ ಪರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತಾಡಿರೋ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮನೀಶ್ ಪಾಂಡೆ, ನಾನು ಕನ್ನಡಿಗ. ಕರ್ನಾಟಕದ ಪ್ರತಿಯೊಬ್ಬ ಆಟಗಾರನಿಗೂ ಆರ್ಸಿಬಿ ಪರ ಆಡುವ ಆಸೆ ಇರುತ್ತದೆ. ನನಗೂ ಅವಕಾಶ ಸಿಕ್ಕರೆ ಆರ್ಸಿಬಿ ತಂಡದ ಪರ ಆಡುತ್ತೇನೆ ಎಂದಿದ್ದಾರೆ.
ಇಷ್ಟೇ ಅಲ್ಲ, ನಾನು ಈ ಹಿಂದೆ ಆರ್ಸಿಬಿ ಪರ ಆಡಿದ್ದೇನೆ. ಬಳಿಕ ಅನಿವಾರ್ಯ ಕಾರಣಗಳಿಂದ ಬೇರೆ ಫ್ರಾಂಚೈಸಿಗಳಿಗಾಗಿ ಆಡಿದ್ದೇನೆ. ಮತ್ತೆ ನಮ್ಮನ್ನು ಖರೀದಿ ಮಾಡಿದ್ರೆ ಆರ್ಸಿಬಿಗೆ ಮರಳುವ ಆಸೆ ಇದೆ. ಆದರೆ, ನಮ್ಮ ಕೈಯಲ್ಲಿ ಏನು ಇಲ್ಲ. ಕರ್ನಾಟಕದ ಎಲ್ಲಾ ಲೋಕಲ್ ಬಾಯ್ಸ್ಗೂ ತಮ್ಮ ತವರಿನ ಫ್ರಾಂಚೈಸಿಗೆ ಆಡಬೇಕು ಎಂದು ಇದ್ದೇ ಇರುತ್ತದೆ ಎಂದರು.
ಮನೀಷ್ ಪಾಂಡೆ ಟೀಂ ಇಂಡಿಯಾದಲ್ಲಿ ಮಿಂಚಿದವರು. ಮೊದಲಿನಿಂದಲೂ ಅವರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಟಿಂ ಇಂಡಿಯಾದಲ್ಲಿ ಮತ್ತೆ ಸ್ಥಾನ ಸಂಪಾದಿಸಬೇಕು ಅನ್ನೋದಾದ್ರೆ ಮನೀಶ್ ಐಪಿಎಲ್ನಲ್ಲಿ ಮಿಂಚಲೇ ಬೇಕಾದ ಅಗತ್ಯ ಇದೆ. ಹಾಗಾಗಿ ಈ ಸಲ ಆರ್ಸಿಬಿಗೆ ಬಂದ್ರೆ ಮನೀಶ್ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಆರ್ಸಿಬಿ ತಂಡಕ್ಕೆ ಸ್ಟಾರ್ ಫಿನಿಶರ್ ಎಂಟ್ರಿ.. ಸ್ಫೋಟಕ ಸುಳಿವು ಬಿಚ್ಚಿಟ್ಟ ಇಂಡಿಯನ್ ಬ್ಯಾಟರ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್