Advertisment

ಕಾಫಿನಾಡ ಜನರಿಗೆ ಭುವನೇಶ್ವರಿ ಗ್ಯಾಂಗ್‌ನಿಂದ ಸಂಕಷ್ಟ.. ಕೊನೆಗೂ ಕಾಡಾನೆಗಳ ಸೆರೆಗೆ ಸಜ್ಜಾದ ಅರಣ್ಯ ಇಲಾಖೆ

author-image
AS Harshith
Updated On
ಕಾಫಿನಾಡ ಜನರಿಗೆ ಭುವನೇಶ್ವರಿ ಗ್ಯಾಂಗ್‌ನಿಂದ ಸಂಕಷ್ಟ.. ಕೊನೆಗೂ ಕಾಡಾನೆಗಳ ಸೆರೆಗೆ ಸಜ್ಜಾದ ಅರಣ್ಯ ಇಲಾಖೆ
Advertisment
  • ಕಾಫಿನಾಡಿನಲ್ಲಿ ಹೆಚ್ಚಾಯ್ತು ಕಾಡಾನೆಗಳ ಹಾವಳಿ
  • 6 ಕಾಡಾನೆಗಳ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಆದೇಶ
  • 2 ತಿಂಗಳಲ್ಲಿ ಮೂವರನ್ನ ಬಲಿ ಪಡೆದಿರೋ ಒಂಟಿ ಸಲಗ

2 ತಿಂಗಳಲ್ಲಿ ಮೂವರನ್ನ ಬಲಿ ಪಡೆದಿರೋ ಒಂಟಿ ಸಲಗ. ಕಾಫಿನಾಡ ಜನ್ರಿಗೆ ಭುವನೇಶ್ವರಿ ಆ್ಯಂಡ್‌ ಗ್ಯಾಂಗ್‌ ಹೆಸ್ರು ಕೇಳಿದ್ರೆ ಭಯಪಡುವಂತಾಗಿದೆ. ಕೂಲಿ ಕಾರ್ಮಿಕರ ಸಾವು. ಅಪಾರ ಪ್ರಮಾಣದ ಬೆಳೆ ನಾಶಕ್ಕೆ ಕಾರಣವಾಗಿರೋ ಕಾಡಾನೆಗಳ ಸೆರೆಗೆ ಇದೀಗ ಅರಣ್ಯ ಇಲಾಖೆ ಸಜ್ಜಾಗಿದೆ.

Advertisment

ಆನೆ ನಡೆದಿದ್ದೇ ದಾರಿ ಅನ್ನೋ ಗಾದೆ ಮಾತಿದೆ. ಆದ್ರೆ ಕಾಫಿನಾಡಿನಲ್ಲಿ ಅದ್ಯಾಕೋ ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ ಕಮ್ಮಿ ಆಗೋ ಲಕ್ಷಣ ಕಾಣ್ತಿಲ್ಲ. ಕಳೆದ ಮೂರು ತಿಂಗಳಿನಿಂದ ದಾಂಧಲೆ ಎಬ್ಬಿಸಿ ಮೂವರ ಸಾವಿಗೆ ಕಾರಣವಾಗಿರೋ ಭುವನೇಶ್ವರಿ ಗ್ಯಾಂಗ್‌ ಆ್ಯಂಡ್‌ ಒಂಟಿ ಸಲಗ ಕೋಟ್ಯಾಂತರ ಮೌಲ್ಯದ ಕಾಫಿ, ಬಾಳೆ, ತೆಂಗು ಸೇರಿದಂತೆ ಅಪಾರ ಪ್ರಮಾಣದ ಬೆಳೆಯನ್ನೇ ನಾಶ ಮಾಡಿವೆ.

[caption id="attachment_29037" align="alignnone" width="800"]ಕಾಡಾನೆಕಾಡಾನೆ[/caption]

ಭುವನೇಶ್ವರಿ ಗ್ಯಾಂಗ್‌ನಿಂದ ಜನರಿಗೆ ಸಂಕಷ್ಟ

ಮತ್ತಾವರ ಗ್ರಾಮದಲ್ಲಿ 6 ಕಾಡಾನೆಗಳು ಹಿಂಡು ಬೀಡುಬಿಟ್ಟಿದ್ದು ರಾತ್ರಿ ಗ್ರಾಮಕ್ಕೆ ಎಂಟ್ರಿ ಕೊಟ್ಟು ಬೆಳೆ ನಾಶ ಮಾಡಿ ಬೆಳಗಾಗುತ್ತಿದ್ದಂತೆ ಕಾಡು ಸೇರ್ತಿವೆ. ಕಳೆದ 2 ತಿಂಗಳಲ್ಲಿ ಇಬ್ಬರನ್ನ ಬಲಿ ಪಡೆದಿರುವ ಭುವನೇಶ್ವರಿ ಗ್ಯಾಂಗ್‌ನಿಂದ ಬೇರ್ಪಟ್ಟಿರುವ ಒಂಟಿ ಸಲಗ ನಿನ್ನೆ ಹೆಡದಾಳು ಗ್ರಾಮದ ಕಾರ್ಮಿಕ ಮಹಿಳೆ ಮೀನಾ ಮೇಲೆ ದಾಳಿ ಮಾಡಿ ಹತ್ಯೆ ಮಾಡಿತ್ತು. ಇದ್ರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ರು.

Advertisment

[caption id="attachment_29040" align="alignnone" width="800"]ಕಾಡಾನೆಗಳುಕಾಡಾನೆಗಳು[/caption]

ಸಕ್ರೇಬೈಲಿನಿಂದ ಬಂದ ಆನೆಗಳಿಂದ ಕೂಂಬಿಂಗ್

ಸಕ್ರೇಬೈಲು ಆನೆ ಶಿಬಿರದಿಂದ ಸೋಮಣ್ಣ, ಆಲೆ, ಬಹದ್ದೂರ್ ಕುಮ್ಕಿ ಆನೆಗಳು ಮತ್ತಾವರ ಗ್ರಾಮಕ್ಕೆ ಆಗಮಿಸಿದ್ದಾವೆ. ಕಾಟ ಕೊಡ್ತಿರೋ ಭುವನೇಶ್ವರಿ ಗ್ಯಾಂಗ್‌ನಲ್ಲಿರುವ ಹೆಣ್ಣಾನೆ ಮರಿ ಹಾಕಿದ್ದು, ಇದ್ರಿಂದ ಕಾರ್ಯಾಚರಣೆ ವಿಳಂಬವಾಗಿದೆ. ಸದ್ಯ ಮೂರು ಆನೆಗಳಿಗೆ ಪೂಜೆ ಸಲ್ಲಿಸಿ ಭುವನೇಶ್ವರಿ ಗ್ಯಾಂಗ್‌ಗೆ ಸರ್ಚ್‌ ಶುರು ಮಾಡಿದೆ. ಇನ್ನೂ ನಾಲ್ಕು ಕಾಡಾನೆಗಳು ಕೊಡಗಿನ ದುಬಾರೆ ಶಿಬಿರದಿಂದ ಆಗಮಿಸಬೇಕಿದ್ದು ಎರಡು ತಂಡಗಳಾಗಿ ಕಾರ್ಯಚರಣೆ ನಡೆಯಲಿದೆ.

[caption id="attachment_29035" align="alignnone" width="800"]ಕೂಂಬಿಂಗ್ ಕಾರ್ಯಚರಣೆಕೂಂಬಿಂಗ್ ಕಾರ್ಯಚರಣೆ[/caption]

Advertisment

‘ಸಾಕಾನೆಗಳಿಂದ ಕಾರ್ಯಾಚರಣೆ’

ಒಟ್ಟಿನಲ್ಲಿ ಕಾರ್ಮಿಕ ಮಹಿಳೆಯನ್ನ ಕೊಂದ ಸ್ಥಳದಿಂದ ಒಂಟಿಸಲಗ 50 ಕಿಲೋಮೀಟರ್ ದೂರ ಇರುವ ಮಾಹಿತಿ ಇದೆ. ಅಲ್ದೂರು, ಅರೆ‌ನೂರು, ಕಣತಿ.ಕಂಚಿಕಲ್ ದುರ್ಗಾ ಸುತ್ತಮುತ್ತ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದೆ. ದುಬಾರೆ ಆನೆ ಶಿಬಿರದಿಂದ ಮತ್ತೆ ನಾಲ್ಕು ಆನೆಗಳು ಆಗಮಿಸಿದ್ರೆ ಭುವನೇಶ್ವರಿ ಗ್ಯಾಂಗ್‌ನ ಎಡೆಮುರಿಕಟ್ಟಿ ಕಾಡಿಗಟ್ಟೋದು ಪಕ್ಕಾ.

[caption id="attachment_29038" align="alignnone" width="800"]ಕೂಂಬಿಂಗ್ ಕಾರ್ಯಚರಣೆಕೂಂಬಿಂಗ್ ಕಾರ್ಯಚರಣೆ[/caption]

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment