newsfirstkannada.com

ಸರ್ಕಾರಿ ಆಸ್ಪತ್ರೆಯಲ್ಲಿ ಗ್ಲುಕೋಸ್ ಹಾಕಿಸಿಕೊಂಡವ್ರಿಗೆ ಕಣ್ಣಿನ ಸಮಸ್ಯೆ; ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ!

Share :

Published March 27, 2024 at 5:35pm

Update March 27, 2024 at 6:03pm

  20 ಕೋಟಿ ರೂ. ಕೊಟ್ಟು ಖರೀದಿಸಿದ್ದ ಗ್ಲುಕೋಸ್ ಸದ್ಯ ಮಣ್ಣು ಪಾಲು

  ಆದರೆ ಅಕ್ರಮದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಆರೋಗ್ಯ ಸಚಿವ

  ಈ ಲಕ್ಷಣ ಇದ್ದವರು ಜಿಲ್ಲಾ ಆರೋಗ್ಯಧಿಕಾರಿ ಭೇಟಿ ಮಾಡಲು ಸೂಚನೆ

ಬೆಂಗಳೂರು: ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ಬಹುದೊಡ್ಡ ಯಡವಟ್ಟು ಮಾಡಿದ್ದು 20 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದ ಗ್ಲುಕೋಸ್​ನಿಂದ ರೋಗಿಗಳಲ್ಲಿ ಸೈಡ್​ ಎಫೆಕ್ಟ್​ ಕಾಣುತ್ತಿವೆ. KSMSCL ಪೂರೈಕೆ ಮಾಡಿದ್ದ ಐವಿ ಫ್ಲ್ಯೂಯಿಡ್ಸ್ ಗ್ಲುಕೋಸ್​ನಿಂದ ರೋಗಿಗಳಲ್ಲಿ ನಡುಕ & ಕಿರಿಕಿರಿ ಪತ್ತೆಯಾಗಿದೆ. ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಯ ರೋಗಿಗಳಲ್ಲಿ ಸೈಡ್ ಎಫೆಕ್ಟ್ ಕಂಡು ಬಂದರೂ ಈ ಬಗ್ಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ಯಡವಟ್ಟುನಿಂದ ಚಾಮರಾಜನಗರ ಮತ್ತು ಚಿತ್ರದುರ್ಗದಲ್ಲಿ ಗ್ಲುಕೋಸ್ ಹಾಕಿಸಿಕೊಂಡವರಲ್ಲಿ ಹೆಚ್ಚಾಗಿ ಪರಿಣಾಮ ಬೀರಿದೆ. ರೋಗಿಗಳಿಗಾಗಿ ಈ ಗ್ಲೂಕೋಸ್ ಅನ್ನು ಉಚಿತವಾಗಿ ಪೂರೈಕೆ ಮಾಡಲಾಗುತ್ತದೆ. ಸದ್ಯ ಇದನ್ನು ಹಾಕಿಸಿಕೊಂಡವರಲ್ಲಿ ಕಣ್ಣಿನ ಸಮಸ್ಯೆ ಕೂಡ ಕಾಣಿಸಿರುವುದು ಆತಂಕಕ್ಕೆ ಗುರಿ ಮಾಡಿದೆ.

KSMSCL ಸಲಹೆಗಾರ ರಘುನಂದನ್ ಮತ್ತು ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್

ಇದನ್ನೂ ಓದಿ: ಕೊಯಮತ್ತೂರು ಅಗ್ನಿ ಪರೀಕ್ಷೆಗಿಳಿದ ಅಣ್ಣಾಮಲೈ; ಲೋಕಸಭಾ ಕದನಕ್ಕೆ ಮೆಗಾ ಟ್ವಿಸ್ಟ್‌!

KSMSCL ಎಂಡಿ ಚಿದಾನಂದ ವಟಾರೆ, ಸಲಹೆಗಾರ ರಘುನಂದನ್ ಅವರು ಅರ್ಹತೆ ಇಲ್ಲದ ಪಶ್ಚಿಮ್ ಬಂಗಾ ಫಾರ್ಮಾಸೂಟಿಕಲ್ಸ್ ಕಂಪನಿಗೆ ಟೆಂಡರ್ ನೀಡಿದ್ದಾರೆ. ಈ ವೇಳೆ ಖರೀದಿ ಮಾಡುವಾಗ ಕಳಪೆ ಔಷಧಿಗಳನ್ನು ತೆಗೆದುಕೊಂಡಿದ್ದಾರೆ. ಇನ್ನು ಈ ಸಂಬಂಧ ಆರೋಗ್ಯ ಇಲಾಖೆಯ ಆಯುಕ್ತ ಡಿ.ರಂದೀಪ್ ವಿರುದ್ಧ ಲೋಕಾಯುಕ್ತ ಮತ್ತು ಸಿಎಂ ಸಿದ್ದರಾಮಯ್ಯರಿಗೆ ವಕೀಲ ಮಹೇಂದ್ರ ಜವರಯ್ಯ ದೂರು ನೀಡಿದ್ದಾರೆ. ಈಗಾಗಲೇ ಪೂರೈಕೆಯಾದ ಗ್ಲುಕೋಸ್ ಕಳಪೆ ಎಂದು ಔಷಧ ನಿಯಂತ್ರಣ ಇಲಾಖೆ ವರದಿ ನೀಡಿದೆ.

ಸಚಿವರು ಸೈಲೆಂಟ್​?

 • ಫೆಬ್ರವರಿ & ಮಾರ್ಚ್​ನಲ್ಲಿ ಗ್ಲುಕೋಸ್ ಹಾಕಿಸಿಕೊಂಡವರಲ್ಲಿ ಸಮಸ್ಯೆ
 • ಕಣ್ಣು ಮಂಜಾಗುವುದು, ಕಣ್ಣಿನಲ್ಲಿ ಉರಿ, ಊತ, ದೇಹದಲ್ಲಿ ನಡುಕ
 • ಈ ಲಕ್ಷಣ ಇದ್ದವರು ಜಿಲ್ಲಾ ಆರೋಗ್ಯಧಿಕಾರಿ ಭೇಟಿ ಮಾಡಲು ಸೂಚನೆ
 • ಆರೋಗ್ಯ ಇಲಾಖೆಯ ಕೆಲ ಪ್ರಮಾಣಿಕ ಅಧಿಕಾರಿಗಳಿಂದ ಮಾಹಿತಿ
 • ಆದರೆ ಅಕ್ರಮದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಆರೋಗ್ಯ ಸಚಿವ
 • ಯಾವ ಕ್ರಮಕ್ಕೂ ಮುಂದಾಗದ ಸಚಿವ ದಿನೇಶ್ ಗುಂಡೂರಾವ್
KSMSCL ಎಂಡಿ ಚಿದಾನಂದ ವಟಾರೆ

ಅಧಿಕಾರಿಗಳ ಹೈಡ್ರಾಮಾ!

ದೂರು ದಾಖಲಾದ ತಕ್ಷಣ ಕಳಪೆ ವರದಿ ಬರುತ್ತಿದ್ದಂತೆ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಮತ್ತು ಟೀಮ್​ನವರು ತಪ್ಪು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದು ಹೈಡ್ರಾಮಾ ಮಾಡುತ್ತಿದ್ದಾರೆ. ಸದ್ಯ ತಾವೇ ಪೂರೈಕೆ ಮಾಡಿರುವ ಗ್ಲುಕೋಸ್ ಅನ್ನು ಜನರಿಗೆ ನೀಡದಂತೆ ಅಧಿಕಾರಿಗಳು ಇ-ಮೇಲ್ ಮಾಡುತ್ತಿದ್ದಾರೆ. ರಾಜ್ಯದ ಎಲ್ಲಾ ಡಿಹೆಚ್ಒ ಮತ್ತು ವೈದ್ಯರು ಹಾಗೂ ಉಗ್ರಾಣಗಳ ಸಿಬ್ಬಂದಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿ ರೋಗಿಗಳಿಗೆ ನೀಡದಂತೆ ಹೇಳುತ್ತಿದ್ದಾರೆ. ಇದರಿಂದ 20 ಕೋಟಿ ಹಣ ಕೊಟ್ಟು ಖರೀದಿ ಮಾಡಿರುವ ಗ್ಲುಕೋಸ್ ಮಣ್ಣು ಪಾಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಆಸ್ಪತ್ರೆಯಲ್ಲಿ ಗ್ಲುಕೋಸ್ ಹಾಕಿಸಿಕೊಂಡವ್ರಿಗೆ ಕಣ್ಣಿನ ಸಮಸ್ಯೆ; ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ!

https://newsfirstlive.com/wp-content/uploads/2024/03/Glucose.jpg

Load More