newsfirstkannada.com

ಬೆಂಗಳೂರಿಗರೇ ಹುಷಾರ್‌.. ಇಂದಿನಿಂದ ಎಷ್ಟು ದಿನ ರಣ ಬಿಸಿಲು; ಹವಮಾನ ಇಲಾಖೆ ಎಚ್ಚರಿಕೆ ಏನು?

Share :

Published April 23, 2024 at 3:53pm

Update April 23, 2024 at 4:05pm

    ಬೆಂಗಳೂರು ಸೇರಿ ದೇಶದ ಹಲವು ಭಾಗಗಳಲ್ಲಿ ಬಿಸಿಲಿನಿಂದ ಹೈರಾಣಾದ ಜನ

    ಇಂದು ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ 38 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲು

    ಉರಿ ಬಿಸಿಲಿನ ಪರಿಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೇಗೆ ವಹಿಸಬೇಕು?

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿರು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಹೊರ ಬರೋದಕ್ಕೂ ಜನರು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಕೇವಲ ರಾಜ್ಯದಲ್ಲಿ ಅಲ್ಲದೇ ದೇಶದ ಹಲವು ಭಾಗಗಳಲ್ಲಿ ಉರಿ ಬಿಸಿಲಿನಿಂದ ಜನ ಹೈರಾಣಾಗುತ್ತಿದ್ದಾರೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ 38 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಇದನ್ನೂ ಓದಿ: Heatwave: ಬೆಂಗಳೂರಿಗೆ ಮತ್ತೊಂದು ಶಾಕಿಂಗ್ ಸುದ್ದಿ.. 15 ವರ್ಷಗಳಲ್ಲೇ ಬಿಸಿಲಲ್ಲಿ ಹೊಸ ದಾಖಲೆ; ಮುಂದೇನು?

ಇಂತಹ ಬಿಸಿಲಿನ ವಾತಾವರಣ ಆರೋಗ್ಯಕ್ಕೆ ಒಳ್ಳೆಯದಲ್ಲ. ಉರಿ ಬಿಸಿಲು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರವು ವಿಡಿಯೋ ಕ್ಲಿಪ್ ಶೇರ್​ ಮಾಡುವ ಮೂಲಕ ಈ ಉರಿ ಬಿಸಿಲಿನಿಂದ ಆದಷ್ಟು ತಪ್ಪಿಸಿಕೊಳ್ಳಲು ಸೂಚನೆ ನೀಡಿದೆ.

    • ತಾಪಮಾನ ಉಷ್ಣಾಂಶ ಏರಿಕೆಯಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ, ಅಪಾಯಕ್ಕೆ ಸಿಲುಕುವ ಸಂಭವ ಹೆಚ್ಚು. ಹೆಚ್ಚು ನೀರು ಮಜ್ಜಿಗೆ ಸೇವಿಸಿ, ದೇಹವನ್ನು ತಂಪಾಗಿರಿಸಿ.
    • ಬಿಸಿಲಿನಲ್ಲಿ ಹೆಚ್ಚು ಕಾಲ ಕಳೆಯುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು. ಸುಡು ಬಿಸಿಲಿನಲ್ಲಿ ಆಗಾಗ ನೆರಳಿನಡಿ ಆಶ್ರಯ, ನಿಮ್ಮ ಆರೋಗ್ಯಕ್ಕೆ ಅಭಯ.
    • ಸೂರ್ಯನ ಶಾಖ, ಬಳಲಿಕೆ, ಬೆವರು ಮತ್ತು ದುರ್ಬಲ ನಾಡಿಗೆ ಕಾರಣವಾಗಿ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು. ತಿಳಿ ಬಣ್ಣದ ಸಡಿಲವಾದ ಬಟ್ಟೆ ಧರಿಸಿ, ನಿಮ್ಮ ದೇಹಕ್ಕೆ ತಗಲುವ ಶಾಖ ಕಡಿತಗೊಳಿಸಿ.
    • ಮಧ್ಯಾಹ್ನ 12ರಿಂದ 4ರವರೆಗೆ ಬಿಸಿಲಿನಿಂದ, ದೈಹಿಕ ಒತ್ತಡ ಮತ್ತು ದಣಿವಾಗಿ ಆರೋಗ್ಯಕ್ಕೆ ಮಾರಕವಾಗಬಹುದು. ಬಿರು ಬಿಸಿಲಿನಲ್ಲಿ ನಿಮ್ಮ ಕೆಲಸಗಳಿಗೆ ವಿರಾಮ ನೀಡಿ, ನಿಮ್ಮ ಆರೋಗ್ಯ ರಕ್ಷಿಸಿ.
    • ಬೇಸಿಗೆಯಲ್ಲಿ ಮನೆ ವಾತಾವರಣ ತಂಪಾಗಿರಿಸಿ, ಕುಟುಂಬದ ಅರೋಗ್ಯ ರಕ್ಷಿಸಿ. ಕಿಟಕಿ ಪರದೆ, ಮೇಲ್ಟಾವಣಿಗೆ ನೀರು, ತಂಪಾಗುವುದು ಸೂರು.
    • ಬಿರು ಬಿಸಿಲಿನಲ್ಲಿ ದೇಹದ ಉಷ್ಣಾಂಷ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು. ಉಷ್ಣ ಹೊಡೆತದಿಂದ ಪಾರಾಗಲು ಮನೆಯಲ್ಲಿಯೇ ವಿರಮಿಸಿ.

ಇದರ ಜೊತೆಗೆ ಇಂದಿನಿಂದ 5 ದಿನಗಳ ಕಾಲ ರಾಜ್ಯದಲ್ಲಿ ಭಯಂಕರ ಬಿಸಿಲು ಇರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಎಚ್ಚರಿಕೆ ನೀಡಿದೆ. ಬೆಂಗಳೂರು ಸೇರಿದಂತೆ ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ, ಕೋಲಾರ, ತುಮಕೂರು, ಮತ್ತು ಚಿತ್ರದುರ್ಗದಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ಬಿಸಿ ಗಾಳಿಯಿಂದ ಸೇಫ್ ಆಗಲು ಏನು ಮಾಡಬೇಕು ಎಂದು ಸಲಹೆ ಕೂಡ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರೇ ಹುಷಾರ್‌.. ಇಂದಿನಿಂದ ಎಷ್ಟು ದಿನ ರಣ ಬಿಸಿಲು; ಹವಮಾನ ಇಲಾಖೆ ಎಚ್ಚರಿಕೆ ಏನು?

https://newsfirstlive.com/wp-content/uploads/2024/04/HEAT-WAVE.jpg

Load More