/newsfirstlive-kannada/media/post_attachments/wp-content/uploads/2024/11/RCB.jpg)
ಇದೇ ತಿಂಗಳು ನವೆಂಬರ್ 24 ಮತ್ತು 25ನೇ ತಾರೀಕು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ನಡೆಯಲಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರೋ ಹರಾಜಿನಲ್ಲಿ ಬರೋಬ್ಬರಿ 574 ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಸುಮಾರು 1574 ಆಟಗಾರರು ರಿಜಿಸ್ಟರ್ ಮಾಡಿದ್ರು. ಬಳಿಕ 1574 ಆಟಗಾರರ ಆರಂಭಿಕ ಪಟ್ಟಿಯನ್ನು 574ಕ್ಕೆ ಇಳಿಸಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಪೈಕಿ 366 ಭಾರತೀಯರು ಮತ್ತು 208 ವಿದೇಶಿ ಕ್ರಿಕೆಟಿಗರು ಇದ್ದಾರೆ.
ಕನ್ನಡಿಗನ ಕರಿಯರ್ ಮುಗಿಯಿತಾ?
ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕರ್ನಾಟಕದ ಈ ಕ್ರಿಕೆಟರ್ ಬಿಡ್ ಆಗೋದು ಡೌಟ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಎಲ್ಲಾ ಐಪಿಎಲ್ ತಂಡಗಳನ್ನು ಈ ಆಟಗಾರರನ್ನು ಖರೀದಿ ಮಾಡುವ ಸಾಧ್ಯತೆ ಕಡಿಮೆ ಇದೆ. ಅದು ಬೇರೆ ಯಾರು ಅಲ್ಲ, ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಮನೀಶ್ ಪಾಂಡೆ.
ಕೊನೆಗೊಳ್ಳುವ ಹಂತದಲ್ಲಿ ಐಪಿಎಲ್ ಕರಿಯರ್
ಇಂಟರ್ ನ್ಯಾಷನಲ್ ಕ್ರಿಕೆಟ್ ರೀತಿಯೇ ಸ್ಟಾರ್ ಬ್ಯಾಟರ್ ಮನೀಶ್ ಪಾಂಡೆ ಐಪಿಎಲ್ ವೃತ್ತಿಜೀವನ ಕೊನೆಗೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಕಳೆದ ಹಲವು ಸೀಸನ್ಗಳಲ್ಲಿ ಮನೀಶ್ ಪಾಂಡೆ ನೀಡುತ್ತಿರೋ ತೀರಾ ಕಳಪೆ ಪ್ರದರ್ಶನ.
2024ರ ಸೀಸನ್ನಲ್ಲಿ ಅವಕಾಶವೇ ಸಿಕ್ಕಿರಲಿಲ್ಲ!
ಮನೀಶ್ ಪಾಂಡೆ ಐಪಿಎಲ್ 2024 ರಲ್ಲಿ ಕೇವಲ ಒಂದು ಪಂದ್ಯ ಆಡಿದ್ದು, 42 ರನ್ ಗಳಿಸಿದ್ರು. ಇದಕ್ಕೂ ಮುನ್ನ ನಡೆದ 2023ರ ಐಪಿಎಲ್ ಸೀಸನ್ನಲ್ಲಿ ತಾನು ಆಡಿದ 10 ಪಂದ್ಯಗಳಲ್ಲಿ ಕೇವಲ 160 ರನ್ ಕಲೆ ಹಾಕಿ ಕಳಪೆ ಪ್ರದರ್ಶನ ನೀಡಿದ್ರು. 2022ರ ಸೀಸನ್ನಲ್ಲಿ ಕೇವಲ 88 ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ ಸಿಕ್ಕ ಸುವರ್ಣಾವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಮನೀಶ್ ಪಾಂಡೆ ತನ್ನ ಕ್ರಿಕೆಟರ್ ಕರಿಯರ್ ಅನ್ನೇ ಹಾಳು ಮಾಡಿಕೊಂಡಿದ್ದಾರೆ.
ಶತಕ ಬಾರಿಸಿದ ಮೊದಲ ಭಾರತೀಯ
ಮನೀಶ್ ಪಾಂಡೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರ್ಸಿಬಿಯಿಂದ ಶುರು ಮಾಡಿದ್ರು. 2009ರಲ್ಲಿ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಡೆಕ್ಕನ್ ಚಾರ್ಜರ್ಸ್ ವಿರುದ್ಧ ಆರ್ಸಿಬಿ ಪರ ಮನೀಶ್ ಪಾಂಡೆ 73 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 114 ರನ್ ಗಳಿಸಿದ್ದರು. ಹಾಗಾಗಿ ಇವರನ್ನು ಆರ್ಸಿಬಿ ಸೆಂಚೂರಿ ಸ್ಟಾರ್ ಎಂದೇ ಕರೆಯಲಾಗುತ್ತಿತ್ತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್