newsfirstkannada.com

ಮಳೆಯಬ್ಬರಕ್ಕೆ ಬೆಟ್ಟದಲ್ಲಿ ಜಲಪಾತ ಸೃಷ್ಟಿ! ಹೊಲ, ಗದ್ದೆ ಜಲಾವೃತ.. ರಾಜ್ಯದಲ್ಲಿ ವರಣಾರ್ಭಟಕ್ಕೆ ಜನರು ತತ್ತರ

Share :

Published May 19, 2024 at 6:56am

Update May 19, 2024 at 6:59am

    ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಆರ್ಭಟ ಮುಂದುವರಿಕೆ

    ಬೆಂಗಳೂರಿನಲ್ಲಿ ಎರಡು ದಿನ ಭಾರೀ ಮಳೆಯ ಮುನ್ಸೂಚನೆ

    ಮಲೆನಾಡಿನಲ್ಲಿ ಮಳೆರಾಯನ ಆರ್ಭಟ ಕೊಂಚ ಜೋರು

ರಾಜ್ಯದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಕಲವೆಡೆ ಕೆಂಡದಂತಾಗಿದ್ದ ಧರೆ ತಂಪಾಗ್ತಿದೆ. ಇನ್ನೂ ಕೆಲವು ಕಡೆ ಮಳೆಯಾರ್ಭಟದಿಂದ ಅವಾಂತರಗಳೂ ಸೃಷ್ಟಿಯಾಗ್ತಿವೆ. ಈ ಮಧ್ಯೆ ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆಯ ಮುನ್ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯಬ್ಬರ ಜೋರಾಗೇ ಇದೆ. ಈಗಾಗಲೆ ಬೆಂಗಳೂರಿನಲ್ಲಿ ಎರಡು ದಿನ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಆರೆಂಜ್ ಅಲರ್ಟ್​ ಕೂಡ ಘೋಷಿಸಲಾಗಿದೆ.

ಮುಂದಿನ ಎರಡು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ

ಬೆಂಗಳೂರಿನಲ್ಲಿ ನಿನ್ನೆ ಮುಂಜಾನೆಯಿಂದ ತಗ್ಗಿದ್ದ ಮಳೆಯಬ್ಬರ ಸಂಜೆಯಾಗುತ್ತಲೇ ಮತ್ತೆ ಶುರುವಾಗಿತ್ತು. ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಎಂಟ್ರಿ ಕೊಟ್ಟಿದ್ದ. ಕೆಲವು ಕಡೆ ಅವಾತರಗಳನ್ನೂ ಸೃಷ್ಟಿ ಮಾಡಿದ್ದ.

ಮಲೆನಾಡಿನಲ್ಲಿ ಮಳೆಯಬ್ಬರಕ್ಕೆ ಪರದಾಡಿದ ವಾಹನ ಸವಾರರು

ಮಲೆನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಕೊಂಚ ಜೋರಾಗಿಯೇ ಇದೆ.. ಚಿಕ್ಕಮಗಳೂರು ಜಿಲ್ಲೆಯ ಎನ್.ಅರ್ ಪುರ ತಾಲೂಕಿನ ಮಾಗುಂಡಿಯಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳ ಮೇಲೆ ನೀರು ಹರಿದು ಬಂದಿತ್ತು.. ಮಾಗುಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದು ಗಂಟೆ ಸುರಿದ ಮಳೆಗೆ ರಸ್ತೆಗಳೆಲ್ಲಾ ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿತ್ತು..

ಹಾವೇರಿಯಲ್ಲಿ ಮಳೆಯಾರ್ಭಟಕ್ಕೆ ಹೊಲ-ಗದ್ದೆ ಜಲಾವೃತ

ಬಿಸಿಲಿನಿಂದ ಕೆಂಗೆಟ್ಟಿದ್ದ ಹಾವೇರಿ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಆದ್ರೆ, ಒಂದು ಗಂಟೆ ಸುರಿದ ಧಾರಾಕಾರ ಮಳೆಗೆ ಶಿಗ್ಗಾಂವ್ ಸವಣೂರು ತಾಲೂಕಿನಲ್ಲಿ ಹೊಲ-ಗದ್ದೆಗಳು ಜಲಾವೃತವಾಗಿದೆ.. ಹೊಲ-ಗದ್ದೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ರಿಂದ, ಮಳೆ ನೀರು ರಸ್ತೆಗೆ ನುಗ್ಗಿತ್ತು.. ಮತ್ತೊಂದೆಡೆ ಮೆಕ್ಕೆಜೋಳದ ರಾಶಿ ನೀರಿನಲ್ಲಿ ಕೊಚ್ಚಿ ಹೋಗಿ ರೈತ ಪರದಾಡಿದ ದೃಶ್ಯವೂ ಕಂಡು ಬಂತು.

ಮಳೆಯಬ್ಬರಕ್ಕೆ ಚಿಕ್ಕಬಳ್ಳಾಪುರದ ಬೆಟ್ಟದಲ್ಲಿ ಜಲಪಾತ ಸೃಷ್ಟಿ

ವರುಣನ ಆರ್ಭಟಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸುರಸದ್ಮಗಿರಿ ಬೆಟ್ಟದಲ್ಲಿ ಜಲಪಾತವೇ ಸೃಷ್ಟಿಯಾಗಿದೆ.. ಗುಡಿಬಂಡೆ ಪಟ್ಟಣಕ್ಕೆ ಹೊಂದಿಕೊಂಡಿರುವ ಸುರಸದ್ಮಗಿರಿ ಬೆಟ್ಟದಲ್ಲಿ ತುಂಬಿ ಹರಿದ ಜಲಪಾತಕ್ಕೆ ಜನ ಮನಸೋತಿದ್ರು.. ಸುಂದರ ಜಲಪಾತವನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ರು.. ಇತ್ತ ಭಾರೀ ಮಳೆಗೆ ನಗರದ ಬಿಬಿ ರಸ್ತೆ, ಎಂ.ಜಿ ರಸ್ತೆಯಲ್ಲಿ ವಾಹನ ಸವಾರರು ಪರದಾಟ ನಡೆಸಿದ್ರು.

ರಾಯಚೂರಿನ ರಸ್ತೆಗಳಲ್ಲಿ ಮೊಳಕಾಲುದ್ದ ಹರಿದ ಮಳೆ ನೀರು

ರಾಯಚೂರಿನ ಸಿಂಧನೂರು ನಗರದಲ್ಲಿ ಮಳೆಯಬ್ಬರ ಹೇಳತೀರದ್ದಾಗಿದೆ.. ಧಾರಾಕಾರ ಸುರಿದ ಮಳೆಗೆ ರಸ್ತೆ ಮೇಲೆಯೇ ಮಳೆ ನೀರು ಹರಿದಿದೆ.. ಮೊಳಕಾಲುದ್ದ ಹರಿದ ಮಳೆ ನೀರಿಗೆ ವಾಹನ ಸವಾರರು ಪರದಾಟ ನಡೆಸಿದ್ರು.. ಮಳೆ ನೀರಿನಿಂದ ನದಿಯಂತಾಗಿದ್ದ ರಸ್ತೆಯಲ್ಲಿ ನಿಯಂತ್ರಣ ಸಿಗದೆ ಬೈಕ್ ಸವಾರರು ಪರದಾಡಿದ್ರು.. ಇನ್ನು ಒಳ ಚರಂಡಿ ವ್ಯವಸ್ಥೆ ಸಂಪೂರ್ಣ ಬ್ಲಾಕ್ ಆಗಿದ್ರಿಂದ ನೀರು ಹೋಗದೆ ಸಮಸ್ಯೆ ಉಂಟಾಗಿದೆ.. ಇದ್ರಿಂದ ನಗರಸಭೆ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಪವಿತ್ರಾ ಜಯರಾಂ ನೆನಪಲ್ಲೇ ಸಾವಿಗೆ ಶರಣಾದ ಕಿರುತೆರೆ ನಟ; ಸಾವಿಗೂ ಮುನ್ನ ಆ ಒಂದು ಪೋಸ್ಟ್ ಮಾಡಿದ ಚಂದು!

ಕಲ್ಪತರು ನಾಡಿನಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆ

ಕಲ್ಪತರು ನಾಡು ತುಮಕೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಮಳೆರಾಯ ಎಂಟ್ರಿ ಕೊಟ್ಟಿದ್ದ. ಗುಡುಗು, ಸಿಡಿಲು, ಬಿರುಗಾಳಿ ಸಹಿತ ವರುಣ ಆರ್ಭಟಿಸಿದ್ದು, ತುಮಕೂರು ನಗರ, ಗ್ರಾಮಾಂತರ, ಗುಬ್ಬಿ ಸೇರಿದಂತೆ ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದೆ. ವರುಣನ ಅಬ್ಬರಕ್ಕೆ ನಗರದ ರಸ್ತೆ ಮೇಲೆ ಮಳೆ ನೀರು ಹಳ್ಳದಂತೆ ಹರಿದು ವಾಹನ ಸವಾರರು ಪರದಾಟ ನಡೆಸಿದ್ರು. ಮಳೆಯ ಅವಾಂತರಕ್ಕೆ ಇನ್ನೂ ಹಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ಗೆ ಟ್ವಿಸ್ಟ್​​.. ಕಾಂಗ್ರೆಸ್​​ ಸರ್ಕಾರವನ್ನೇ ಅಲ್ಲಾಡಿಸುತ್ತಾ ಈ ಅಕ್ರಮ?

ಒಟ್ಟಾರೆ, ರಾಜ್ಯದ ಹಲವೆಡೆ ಈಗಾಗಲೆ ಉತ್ತಮ ಮಳೆಯಾಗ್ತಿದೆ.. ಪೂರ್ವ ಮುಂಗಾರಿನಲ್ಲಿ ಮಳೆರಾಯನ ಎಂಟ್ರಿಯಿಂದ ಜನ ಕೂಲ್ ಆಗ್ತಿದ್ದಾರೆ.. ಇನ್ನೂ ಮುಂದುವರೆದು ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಎಚ್ಚರಿಕೆ ಕೊಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆಯಬ್ಬರಕ್ಕೆ ಬೆಟ್ಟದಲ್ಲಿ ಜಲಪಾತ ಸೃಷ್ಟಿ! ಹೊಲ, ಗದ್ದೆ ಜಲಾವೃತ.. ರಾಜ್ಯದಲ್ಲಿ ವರಣಾರ್ಭಟಕ್ಕೆ ಜನರು ತತ್ತರ

https://newsfirstlive.com/wp-content/uploads/2024/05/Falls.jpg

Load More