Advertisment

ನಡುರಸ್ತೆಯಲ್ಲೇ ತಪಸ್ಸಿಗೆ ಕುಳಿತ ವ್ಯಕ್ತಿ! ಹೊಳೆಯಂತಾದ ರೋಡ್​, ಮನೆಗೆ ನುಗ್ಗಿದ ನೀರು, ಹೊಲಗಳು ಜಲಾವೃತ

author-image
AS Harshith
Updated On
ನಡುರಸ್ತೆಯಲ್ಲೇ ತಪಸ್ಸಿಗೆ ಕುಳಿತ ವ್ಯಕ್ತಿ! ಹೊಳೆಯಂತಾದ  ರೋಡ್​, ಮನೆಗೆ ನುಗ್ಗಿದ ನೀರು, ಹೊಲಗಳು ಜಲಾವೃತ
Advertisment
  • ರಾಜ್ಯದಲ್ಲಿ ಅವಾಂತರಗಳನ್ನು ಸೃಷ್ಟಿಸಿದ ವರುಣ
  • ಮಳೆಗೆ ಹೊಲಗದ್ದೆಗಳಿಗೆ ನುಗ್ಗಿದ ಬೆಳೆಗಳು ನೀರುಪಾಲು
  • ಮುಂದಿನ 5 ದಿನ ಭಾರೀ ಗಾಳಿ ಸಹಿತ ಮಳೆ ಮುನ್ಸೂಚನೆ

ಮಳೆ ಯಾವಾಗ ಬರುತ್ತೋ ಅಂತ ಬಿಸಿಲಿನ ಬೇಗೆಯಲ್ಲಿ ಬೆಂದು ಬಸವಳಿದ್ದ ಜನ ಇದೀಗ ರೈನ್​ ಕೋಟ್. ಅಂಬ್ರೆಲ್ಲಾ ಅಂತ ಹಿಡ್ಕೊಂಡು ಹೊರಗೆ ಬರೋ ವಾತಾವರಣ ಸೃಷ್ಟಿಸಿದೆ. ಅಂದ್ಹಾಗೆ ಇದೀಗ ರಾಜ್ಯದಲ್ಲಿ ಮುಂಗಾರು ಅಬ್ಬರ ಶುರುವಾಗಿದೆ..

Advertisment

ಠಾಣೆಯಲ್ಲೇ ಪೊಲೀಸರಿಗೆ ದಿಗ್ಬಂಧನ ಹಾಕಿದ ಮಳೆ ನೀರು

ವರುಣನ ಅಬ್ಬರಕ್ಕೆ ಕಲಬುಗಿಯ ಆಳಂದ‌ ತಾಲೂಕಿನ‌ ನಿಂಬರ್ಗಾ ಗ್ರಾಮದ ಯಲ್ಲಮ್ಮನ ಹಳ್ಳ ತುಂಬಿ ಹರಿದಿದೆ. ಪರಿಣಾಮ ಹಳ್ಳ ದಾಟಲು ವಾಹನ ಸವಾರರ ಪರದಾಡಿದ್ದಾರೆ. ಇತ್ತ ಸೇಡಂ ಠಾಣೆ ಪೊಲೀಸರಿಗೆ ಮಳೆ ನೀರು ದಿಗ್ಬಂಧನ ಹಾಕಿದೆ.

publive-image

ಬಿತ್ತನೆ ಮಾಡಿದ್ದ ಹೊಲಗದ್ದೆಗಳಿಗೆ ಮಳೆ ನೀರು ನುಗ್ಗಿ ಅವಾಂತರ

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅಸುಂಡಿ ಹಾಗೂ ಸರವಂದ ಗ್ರಾಮದಲ್ಲಿ ಮೊನ್ನೆ ತಾನೇ ಬಿತ್ತನೆ ಮಾಡಿದ್ದ ಹೊಲಗದ್ದೆಗಳಿಗೆ ಮಳೆ ನೀರು ನುಗ್ಗಿ ಬೆಳೆಗಳು ಹಾಳಾಗಿವೆ.. ನಗರದ ಪಿ.ಬಿ ರೋಡ್ ಹಾಗೂ ಪ್ರವಾಸಿ ಮಂದಿರದ ಮುಖ್ಯ ದ್ವಾರ ಜಲವೃತವಾಗಿ ಸವಾರರು ಪರದಾಡಿದ್ರು.

publive-image

ಸಿಡಿಲಬ್ಬರದ ಮಳೆಗೆ ಹೊಳೆಯಂತಾದ ರಸ್ತೆ, ಜನಜೀವನ ಅಸ್ತವ್ಯಸ್ತ

ಗುಂಡ್ಲುಪೇಟೆ ಭಾಗದಲ್ಲಿ ಭಾರೀ ಮಳೆ ಸುರಿದಿದೆ. ತಾಲೂಕಿನ ಹಂಗಳ, ದೇವರಹಳ್ಳಿ, ವೀರನಪುರ ಮಾದಾಪಟ್ಟಣ ಸೇರಿದಂತೆ ಭಾರಿ ಮಳೆ ಆಗಿದೆ. ರಸ್ತೆ, ಹೊಲಗದ್ದೆಗಳು ಕೆರೆಗಳಂತೆ ಭಾಸವಾದ್ವು.

Advertisment

publive-image

ಸುಮಾರು 15ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ಮಳೆ ನೀರು

ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನಲ್ಲೂ ಜೋರು ಮಳೆ ಆಗಿದೆ.. ಗೋಲಗೇರಿ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ರಾತ್ರಿಯಿಡಿ ಜನ ಕಂಗಾಲಾದ್ರು.
publive-image

ಗಣಿನಾಡಲ್ಲಿ ಮಳೆ ಅವಾಂತರ, ಮನೆಗಳಿಗೆ ನುಗ್ಗಿದ ನೀರು

ಗಣಿನಾಡು ಬಳ್ಳಾರಿಯಲ್ಲಿ ಮಳೆ ನರ್ತನ ಶುರುವಾಗಿದೆ.. ಬಳ್ಳಾರಿ ನಗರ ಬಂಡಿಮೋಟ್, ಕೌಲಬಜಾರ ದೋಬಿಘಟ್ ಪ್ರದೇಶ ಐವತ್ತಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ.. ಅಂಡರ್ ಪಾಸ್ ಮತ್ತು ಚರಂಡಿ ಬ್ಲಾಕ್ ಆಗಿ ಜನ ಹಿಡಿಶಾಪ ಹಾಕಿದ್ರು..

publive-image

ಅಂಕೋಲಾದಲ್ಲಿ ಪಟ್ಟಣದ ರಸ್ತೆಯಲ್ಲೆಲ್ಲಾ ನೀರೋ ನೀರು

ಇತ್ತ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ಮುಂದಿನ 5 ದಿನ ಭಾರೀ ಗಾಳಿ ಸಹಿತ ಮಳೆ ಮುನ್ಸೂಚನೆ ಇದೆ. ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ..

Advertisment

publive-image

ಮಳೆ ಬರುವಾಗ ರಸ್ತೆಯಲ್ಲಿಯೇ ತಪಸ್ಸಿಗೆ ಕುಳಿತ ವ್ಯಕ್ತಿ

ಧಾರವಾಡದಲ್ಲಿ ಜೋರು ಮಳೆ ಸುರಿಯುತ್ತಿತ್ತು.. ಈ ವೇಳೆ, ಸಿಬಿಟಿ ಬಸ್ ನಿಲ್ದಾಣದ ಎದುರು ನಟ್ಟ ನಡು ರಸ್ತೆಯಲ್ಲೆ ಕಣ್ಣು ಮುಚ್ಚಿ ವೃದ್ಧ ತಪಸ್ಸಿಗೆ ಕುಳಿತು ಬಿಟ್ಟಿದ್ದ..

Advertisment
Advertisment
Advertisment