Advertisment

ಸೇತುವೆ ಶಿಥಿಲ, ನದಿಗೆ ಬಿದ್ದ ಕಾರು, ಗೋಡೆ ಬಿದ್ದು ವೃದ್ಧೆ ಸಾವು.. ರಾಜ್ಯದಲ್ಲಿ ಮಳೆಯ ಅವಾಂತರ ಒಂದಾ.. ಎರಡಾ..

author-image
AS Harshith
Updated On
ಸೇತುವೆ ಶಿಥಿಲ, ನದಿಗೆ ಬಿದ್ದ ಕಾರು, ಗೋಡೆ ಬಿದ್ದು ವೃದ್ಧೆ ಸಾವು.. ರಾಜ್ಯದಲ್ಲಿ ಮಳೆಯ ಅವಾಂತರ ಒಂದಾ.. ಎರಡಾ..
Advertisment
  • ಇನ್ನೊಂದು ವಾರ ಭಾರಿ ಮಳೆಯ ಮುನ್ಸೂಚನೆ
  • ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರಿ ಅವಾಂತರ
  • ದಕ್ಷಿಣ ಕನ್ನಡ ರೆಡ್ ಅಲರ್ಟ್, ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ರಾಜ್ಯದ ಹಲವೆಡೆ ವರುಣ ತನ್ನ ಆರ್ಭಟ ಮುಂದುವರೆಸಿದ್ದಾನೆ. ಮುಂಗಾರು ಮಳೆಯ ಆಟಕ್ಕೆ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ನಿರಂತರ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಸಂತೋಷದ ಜೊತೆಜೊತೆಗೆ ವರುಣ ಸಾವು-ನೋವಿಗೂ ಕಾರಣವಾಗ್ತಿದ್ದಾನೆ.

Advertisment

ವರುಣನ ಆಟ ಬಲ್ಲವರಾರು ಅನ್ನೋ ರೀತಿ. ವರುಣ ಅಬ್ಬರಿಸಿ ಬೊಬ್ಬಿರಿಯೋದಕ್ಕೆ ಶುರು ಮಾಡಿದ್ದಾನೆ. ಅದರಲ್ಲೂ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸುರಿದ ಭಾರಿ ಮಳೆ ಅವಾಂತರಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಮನೆಗಳು ಸಮುದ್ರ ಪಾಲಾಗ್ತಿವೆ. ರಸ್ತೆಗಳು ನದಿ ಪಾಲಾಗ್ತಿವೆ. ಮರುಗಳು ರಸ್ತೆ ಪಾಲಾಗ್ತಿವೆ. ಮನೆಗಳು ನೆಲದ ಪಾಲಾಗ್ತಿವೆ. ಜನಜೀವನ ಬೀದಿ ಪಾಲಾಗ್ತಿದೆ.

ಕರುನಾಡಲ್ಲಿ ಮುಂದುವರಿದ ವರುಣನ ಆರ್ಭಟ!

ರಾಜ್ಯದಲ್ಲಿ ಮುಂಗಾರುಮಳೆ ಅಬ್ಬರ ಮುಂದುವರಿದಿದೆ. ಹವಾಮಾನ ಇಲಾಖೆ ಮುಂದಿನ ಒಂದು ವಾರಗಳ ಕಾಲ ಭಾರಿ ವರ್ಷಧಾರೆಯ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅತ್ತ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜಧಾನಿ ಬೆಂಗಳೂರಲ್ಲಿ ಇನ್ನೆರೆಡು ದಿನಗಳು ಜಿಟಿಜಿಟಿ ಮಳೆಯಾಗಲಿದೆ

[caption id="attachment_71847" align="alignnone" width="800"]ಮಳೆಗೆ ಮಣ್ಣಿನ ಗೋಡೆ ಕುಸಿದು ವೃದ್ಧೆ ಸಾವು ಮಳೆಗೆ ಮಣ್ಣಿನ ಗೋಡೆ ಕುಸಿದು ವೃದ್ಧೆ ಸಾವು[/caption]

Advertisment

ಕಾರವಾರ

ಕಾರವಾರದ ಅಸ್ನೋಟಿಯ ಆರವ ಗ್ರಾಮದ ತೋರ್ಲೆಭಾಗದಲ್ಲಿ ವರುಣ ಒಂದು ಜೀವವನ್ನೇ ಬಲಿ ಪಡೆದಿದ್ದಾನೆ. ಮಳೆಗೆ ನೆನೆದ ಮಣ್ಣಿನ ಗೋಡೆ ಮೈಮೇಲೆ ಕುಸಿದು ಬಿದ್ದು ವೃದ್ಧೆ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಒಂಟಿಯಾಗಿ ವಾಸವಿದ್ದ 70 ವರ್ಷದ ಗುಲಾಬಿ ರಾಮಚಂದ್ರ ಮಾಂಜ್ರೇಕರ್ ಮೃತಪಟ್ಟಿದ್ದಾರೆ.

[caption id="attachment_71849" align="alignnone" width="800"]publive-image ಬೈಕ್ ಮೇಲೆ ಮರ ಬಿದ್ದು ಸವಾರ ಗಂಭೀರ[/caption]

ಹೊನ್ನಾವರ, ಉತ್ತರಕನ್ನಡ

ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಮುಂದುವರಿದಿದೆ. ಹೊನ್ನಾವರದ ನಗರಬಸ್ತಿಕೇರಿಯಲ್ಲಿ ಬೈಕ್ ಮೇಲೆ ಮರ ಬಿದ್ದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಬೈಕ್​​ನಲ್ಲಿ ಪತ್ನಿ ಜೊತೆ ತೆರಳುವಾಗ ದುರಂತ ಸಂಭವಿಸಿದೆ. ಸದ್ಯ ಗಾಯಗೊಂಡಿದ್ದ ಬೈಕ್ ಸವಾರನನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ

Advertisment

[caption id="attachment_71851" align="alignnone" width="800"]publive-image ಅಂಗಡಿ ಒಳ ಭಾಗಕ್ಕೆ ನೀರು ನುಗ್ಗಿ ಅವಾಂತರ[/caption]

ಚಿಕ್ಕಮಗಳೂರು

ಮಲೆನಾಡಿನಲ್ಲಿ ವರುಣನಬ್ಬರ ಜೋರಾಗಿದೆ. ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶದಲ್ಲಿ ನೀರು ಹರಿಯುತ್ತಿದೆ. ಕೊಟ್ಟಿಗೆಹಾರದಲ್ಲಿ ಅಂಗಡಿಯೊಂದರ ಒಳ ಭಾಗಕ್ಕೆ ನೀರು ನುಗ್ಗಿದ್ರಿಂದ ಅವಾಂತರ ಸೃಷ್ಟಿಯಾಗಿತ್ತು.

[caption id="attachment_71853" align="alignnone" width="800"]ನಿಯಂತ್ರಣ ತಪ್ಪಿ ಹೇಮಾವತಿ ನದಿಗೆ ಬಿದ್ದ ಕಾರು ನಿಯಂತ್ರಣ ತಪ್ಪಿ ಹೇಮಾವತಿ ನದಿಗೆ ಬಿದ್ದ ಕಾರು[/caption]

Advertisment

ಚಿಕ್ಕಮಗಳೂರು

ಮಳೆಯ ಪರಿಣಾಮ ನಿಯಂತ್ರಣ ತಪ್ಪಿದ ಕಾರೊಂದು ಹೇಮಾವತಿ ನದಿಗೆ ಬಿದ್ದಿರೋ ಘಟನೆ ಕೊಟ್ಟಿಗೆಹಾರ ಹಾಗೂ ಬಣಕಲ್ ನಡುವೆ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿತ್ತು. ಈ ವೇಳೆ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆ ಹಾರಿ ಕಾರು ನದಿಗೆ ಬಿದ್ದಿದೆ. ಅದೃಷ್ಟವಶಾತ್ ಕಾರ್​ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

[caption id="attachment_71854" align="alignnone" width="800"]ಸೇತುವೆ ಶಿಥಿಲ, ಡಿಸಿ ಭೇಟಿ ಕೊಟ್ಟು ಪರಿಶೀಲನೆ ಸೇತುವೆ ಶಿಥಿಲ, ಡಿಸಿ ಭೇಟಿ ಕೊಟ್ಟು ಪರಿಶೀಲನೆ[/caption]

ಪುತ್ತೂರು, ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಸೇತುವೆಗೆ ಮಳೆಯಿಂದಾಗಿ ಶಿಥಿಲಗೊಂಡಿದೆ. ಈ ಬ್ರಿಡ್ಜ್​ ಪರಿಸ್ಥಿತಿಯನ್ನ ಖುದ್ದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಪರಿಶೀಲಿಸಿದ್ರು. ಬಳಿಕ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ ಘನವಾಹನ ಸಂಚಾರವನ್ನ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisment

ಒಟ್ಟಾರೆ, ಮುಂಗಾರು ಮಳೆ ಆಗಮನದಿಂದ ಅನ್ನದಾತರಿಗೆ ಸಂತಸ ಮೂಡಿಸಿದ್ರೆ ಮತ್ತೊಂದೆಡೆ ಭಾರಿ ಮಳೆ ಅವಾಂತರಗಳನ್ನು ಸೃಷ್ಟಿಸ್ತಿದೆ. ಸಾವಿಗೂ ಕಾರಣವಾಗ್ತಿರೋದು ದುರಂತ.

Advertisment
Advertisment
Advertisment