ವಿಪರೀತ ಮಳೆ, ಹಳ್ಳದಂತಾದ ಬಸ್ ನಿಲ್ದಾಣ.. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

author-image
AS Harshith
Updated On
ವಿಪರೀತ ಮಳೆ, ಹಳ್ಳದಂತಾದ ಬಸ್ ನಿಲ್ದಾಣ.. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Advertisment
  • ಮಳೆಯಿಂದಾಗಿ ರಸ್ತೆಗೆ ಮಣ್ಣು ಕುಸಿದು ಸಂಚಾರಕ್ಕೆ ಅಡ್ಡಿ
  • ತುಂಗಾ ನದಿ ಹರಿವಿನಲ್ಲಿ ಭಾರಿ ಪ್ರಮಾಣದ ಏರಿಕೆ
  • ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿ ಬಿದ್ದ ಬಸ್

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ರಾಜ್ಯದ ಕರಾವಳಿ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ಮಳೆ ಧರಣಿ ಕುಳಿತಿದೆ. ಮಳೆ ಆಟಕ್ಕೆ ಹಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿ ಆಗಿವೆ. 

ಸಂಜೆ ಬಳಿಕ ಕಾಫಿನಾಡು ಮಲೆನಾಡಲ್ಲಿ ವರ್ಷಧಾರೆ

ಮಲೆನಾಡಿನಲ್ಲಿ ಮಳೆ ಹಾಡು ಗುನುಗುತ್ತಿದೆ. ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರು, ಜಾವಳಿ, ಸಬ್ಬೇನಹಳ್ಳಿ, ಭಾರತಿಬೈಲ್ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಕಳಸ ತಾಲೂಕಿನ ಗಾಳಿಗಂಡಿ ಬಳಿ ರಸ್ತೆಗೆ ಮಣ್ಣು ಕುಸಿದು ಸಂಚಾರಕ್ಕೆ ಅಡ್ಡಿ ಆಗಿದೆ.

publive-image

ಮಳೆಗೆ ತುಂಗಾ ನದಿ ಹರಿವಿನಲ್ಲಿ ಭಾರಿ ಪ್ರಮಾಣದ ಏರಿಕೆ

ಇನ್ನು, ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ ತುಂಗಾ ನದಿ ಹರಿವಿನಲ್ಲಿ ಕ್ಷಣ ಕ್ಷಣಕ್ಕೂ ಏರಿಕೆ ಆಗ್ತಿದೆ.. ಈ ಹರಿವು ಇನ್ನಷ್ಟು ಹೆಚ್ಚಳವಾದ್ರೆ, ಶೃಂಗೇರಿಯ ಗಾಂಧಿ ಮೈದಾನ ಜಲಾವೃತವಾಗಲಿದೆ..

publive-image

ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿ ಬಿದ್ದ ಬಸ್

ದಕ್ಷಿಣ ಕನ್ನಡದಲ್ಲಿ ವರುಣ ವಿಶ್ರಾಂತಿಯೇ ಪಡೆದಿಲ್ಲ. ವಿಪರೀತ ಮಳೆಯ ಕಾರಣದಿಂದ ರಸ್ತೆ ಕಾಣಿಸ್ತಿಲ್ಲ. ಅದೆಷ್ಟರ ಮಟ್ಟಿಗೆ ಅಂದ್ರೆ ದಾರಿ ಕಾಣದೇ ಬಸ್​​ವೊಂದು ಗದ್ದೆಗೆ ಉರುಳಿಸಿದೆ. ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜದಲ್ಲಿ ಘಟನೆ ನಡೆದಿದೆ.

ಕಾವೇರಿ ಪಾತ್ರದಲ್ಲಿ ಮಳೆ.. ಕೆಆರ್‌ಎಸ್​ಗೆ ಜೀವಕಳೆ

ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಆಗ್ತಿದೆ. ಇದರಿಂದ ಕೆಆರ್‌ಎಸ್ ಡ್ಯಾಂಗೆ 25 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರ್ತಿದೆ. ಸದ್ಯ 108 ಅಡಿಗೆ ಕೆಆರ್‌ಎಸ್ ಡ್ಯಾಂನ ನೀರಿನಮಟ್ಟ ತಲುಪಿದೆ.

publive-image

ಶ್ರೀಗುರು ದತ್ತಾತ್ರೇಯ ದೇಗುಲ ಮುಂಭಾಗದ ರಸ್ತೆ ಜಲಾವೃತ

ಇತ್ತ, ಮಲೆನಾಡು ಅಷ್ಟೇ ಅಲ್ಲ, ಬಯಲುಸೀಮೆಯಲ್ಲೂ ಮಳೆ ಅಬ್ಬರಿಸಿದೆ. ಕಲಬುರಗಿ ಜಿಲ್ಲೆ ಅಫ್ಜಲ್​ಪುರ ತಾಲೂಕಿನ ದೇವರ ಗಾಣಗಾಪುರದ ಗುರು ದತ್ತಾತ್ರೇಯ ದೇವಸ್ಥಾನಕ್ಕೆ ಮಳೆರಾಯನ ದರ್ಶನವಾಗಿದೆ. ದೇಗುಲದ ಆವರಣವೆಲ್ಲಾ ಜಲಮಯವಾಗಿದೆ.

publive-image

ಹಳ್ಳದಂತಾದ ಬಸ್ ನಿಲ್ದಾಣ.. ಜೀವಭಯದಲ್ಲೇ ಸಂಚಾರ

ಇತ್ತ, ರಾಯಚೂರು ಜಿಲ್ಲೆ ದೇವದುರ್ಗದಲ್ಲೂ ಮಳೆ ಆರ್ಭಟಿಸಿದೆ. ದೇವದುರ್ಗದ ಬಸ್ ನಿಲ್ದಾಣ ಹಳ್ಳದಂತಾಗಿದ್ದು, ಪಾರ್ಕಿಂಗ್ ಮಾಡಿದ್ದ ವಾಹನಗಳು ಅರ್ಧದಷ್ಟು ಮುಳುಗಡೆ ಆಗಿವೆ.
publive-image

ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜೆ ಹಾಕಿಸಿದ ಮಳೆ

ಮಳೆ ಏಟಿಗೆ ಹಲವು ಜಿಲ್ಲೆಗಳು ತತ್ತರಿಸಿವೆ. ಜುಲೈ 16ರ ವರೆಗೆ ದಕ್ಷಿಣ ಒಳನಾಡು, ಕರಾವಳಿ ಭಾಗಕ್ಕೆ ರೆಡ್ ಅಲರ್ಟ್ ಮುಂದುವರಿದಿದೆ. ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ಹಾಸನ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment