Advertisment

ರಾಜ್ಯದಲ್ಲಿ ವರುಣಾಘಾತ; ಸಾಲು ಸಾಲು ಅವಾಂತರ; 88 ಸ್ಥಳಗಳನ್ನ ಡೇಂಜರ್​ ಸ್ಪಾಟ್ ಎಂದು ಗುರುತಿಸಿದ ಜಿಲ್ಲಾಡಳಿತ

author-image
AS Harshith
Updated On
ರಾಜ್ಯದಲ್ಲಿ ವರುಣಾಘಾತ; ಸಾಲು ಸಾಲು ಅವಾಂತರ; 88 ಸ್ಥಳಗಳನ್ನ ಡೇಂಜರ್​ ಸ್ಪಾಟ್ ಎಂದು ಗುರುತಿಸಿದ ಜಿಲ್ಲಾಡಳಿತ
Advertisment
  • ನೀರು ನುಗ್ಗಿ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿ
  • ಚಿಕ್ಕಮಗಳೂರು ಪ್ರವಾಸ ಹೋಗುವವರೇ ಎಚ್ಚರ
  • ಕೊಡಗು, ಉತ್ತರ ಕನ್ನಡದಲ್ಲಿ ಮಳೆಯ ನರ್ತನ.. ಸಂಕಷ್ಟದಲ್ಲಿ ಜನ

ಬೆಂಗಳೂರು ಮಾತ್ರವಲ್ಲ ರಾಜ್ಯದ ಬಾಕಿ ಜಿಲ್ಲೆಗಳಲ್ಲೂ ವರುಣ ದೇವ ಅತಿಥಿಯಾಗಿದ್ದಾನೆ.. ಚಿಕ್ಕಮಗಳೂರು, ದಾವಣಗೆರೆ, ಮೈಸೂರು ಸೇರಿದಂತೆ ಹಲವೆಡೆ ರೌಂಡ್ಸ್ ಹಾಕ್ತಿದ್ದಾನೆ.

Advertisment

ಕೋಡಿ ಬಿದ್ದ ಕೆರೆ, ಗ್ರಾಮಕ್ಕೆ ನುಗ್ಗಿದ ನೀರು

ನಿರಂತರ ಮಳೆಗೆ ನ್ಯಾಮತಿ ತಾಲೂಕಿನ ಯರಗನಾಳ್ ಗ್ರಾಮದ ಗೌಡನ ಕೆರೆ ತುಂಬಿದ್ದು, ಕೋಡಿ ಬಿದ್ದಿದೆ. ಪರಿಣಾಮ ಗೌಡನ ಕೆರೆ ನೀರು 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿ, ಗ್ರಾಮಸ್ಥರನ್ನ ಆತಂಕದಲ್ಲಿ ದೂಡಿದೆ.

publive-image

1 ವಾರ ಟೂರಿಸ್ಟ್ ಬ್ಯಾನ್ ಮಾಡಿ ಜಿಲ್ಲಾಡಳಿತ ಆದೇಶ

ಚಿಕ್ಕಮಗಳೂರಿನಲ್ಲಿ ವರುಣಾಘಾತದಿಂದ 88 ಸ್ಥಳಗಳನ್ನ ಡೆಂಜರ್ ಸ್ಪಾಟ್ ಅಂತ ಗುರುತಿಸಿದ್ದು, ಎಚ್ಚೆತ್ತ ಜಿಲ್ಲಾಡಳಿತ ಒಂದು ವಾರ ಪ್ರವಾಸಿಗರಿಗೆ ನಿರ್ಬಂಧ ಹೇರಲು ಮುಂದಾಗಿದೆ.

publive-image

ಮಳೆಗೆ ರಸ್ತೆಯಲ್ಲಿ 3 ಅಡಿ ನೀರು.. ಸಂಚಾರ ಬಂದ್

ಬಿಟ್ಟು ಬಿಡದೆ ಸುರಿಯುತ್ತಿರೋ ಮಳೆಗೆ ಮೈಸೂರು-ಕೆ‌ಆರ್‌ಎಸ್ ರಸ್ತೆಯಲ್ಲಿ 3 ಅಡಿಗಳಷ್ಟು ನೀರು ನಿಂತು ಸಂಚಾರ ಬಂದ್ ಆಗಿದೆ.. ಇನ್ನೂ ದಸರಾ ವಸ್ತು ಪ್ರದರ್ಶನ ಆವರಣದಲ್ಲಿದ್ದ ಆಹಾರ ಮಳಿಗೆಗಳು ಧರೆಗುರುಳಿದ್ದು, ಸುಮಾರು 4-5 ಲಕ್ಷ ರೂಪಾಯಿ ದಿನಸಿ ಪದಾರ್ಥಗಳು ನೀರುಪಾಲಾಗಿವೆ.. ಇನ್ನು ಚಾಮುಂಡಿ ಬೆಟ್ಟದಲ್ಲಿ ಕೃತಕ ಜಲಪಾತಗಳು ಸೃಷ್ಟಿಯಾಗಿವೆ

Advertisment

publive-image
ಕೊಡಗಿನಲ್ಲೂ ಮಳೆಯ ನರ್ತನ

ಕೊಡಗಿನಲ್ಲೂ ಅಕಾಲಿಕ ಮಳೆಯಿಂದ ಜಿಲ್ಲೆಯ ಜನ ಕಿರಿ ಕಿರಿ ಅನುಭವಿಸುವಂತಾಗಿದೆ. ಕಾಫಿ ಬೆಳೆಗಾರರಲ್ಲಿ ಆತಂಕ ಶುರುವಾಗಿದ್ದು, ಮಳೆ ಹೆಚ್ಚಾಗಿ ಕಾಫಿ ಕಾಯಿಗಳು ಉದುರುತ್ತಿವೆ..

ಕಿರು ಸೇತುವೆ ಮುಳುಗಡೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಮುಂಡಗೋಡು, ಯಲ್ಲಾಪುರದಲ್ಲಿ ಜೋರು ಮಳೆಯಾಗ್ತಿದ್ದು, ಶಿರಸಿ ತಾಲೂಕಿನ ಲಂಡಕನಹಳ್ಳಿ, ನರೇಬೈಲಿನಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನರೇಬೈಲಿನ ಕಿರು ಸೇತುವೆ ಮುಳುಗಡೆಯಾಗಿ ಸಂಚಾರಕ್ಕೆ ತೊಂದರೆಯಾಗಿದೆ.

publive-image

ಕೋಡಿ ಹರಿದು ಸಮಸ್ಯೆ

ಚಿತ್ರದುರ್ಗ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗ್ತಿದ್ದು, ಹೊಳಲ್ಕೆರೆ ತಾಲೂಕಿನ ಟಿ. ಎಮ್ಮಿಗನೂರು ಗ್ರಾಮದ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ.

Advertisment

ಒಟ್ಟಾರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ನರ್ತನಕ್ಕೆ ನಾನಾ ಅವಾಂತರಗಳು ಸೃಷ್ಟಿಯಾಗ್ತಿವೆ.. ಜನ ಕಂಗೆಟ್ಟು ಯಾರನ್ನ ದೂರಬೇಕೋ ಗೊತ್ತಾಗದೆ ಆಕಾಶದತ್ತ ನೋಡ್ತಾ.. ಕರುಣೆ ತೋರು ದೇವಾ ಅಂತ ಬೇಡುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment