Advertisment

ಕರುನಾಡಲ್ಲಿ ಹಲವೆಡೆ ಜಲಧಾರೆ, ಇಂದು ಶಾಲೆ- ಕಾಲೇಜುಗಳಿಗೆ ರಜೆ

author-image
AS Harshith
Updated On
ಭಾರೀ ಮಳೆ.. ರಾಜ್ಯದ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Advertisment
  • ನೇಕಾರನ ಮನೆ ಕುಸಿತ, ಬೀದಿಗೆ ಬಂದ ಕುಟುಂಬ
  • ಭರ್ತಿಯಾಗುವ ಹಂತ ತಲುಪಿರುವ ಜಲಾಶಯಗಳು
  • ಇಂದು ಮತ್ತು ನಾಳೆ ರಜೆ ಘೋಷಣೆ ಮಾಡಿ ಡಿಸಿ ಆದೇಶ

ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣ ಜಲಮೂಲಗಳನ್ನ ಮೈದುಂಬಿಸಿ ಕೆಲವೆಡೆ ಅವಾಂತರಕ್ಕೂ ಅಡಿ ಇಟ್ಟಿದ್ದಾನೆ. ಮಳೆರಾಯನ ಮಾಸ್​ ಎಂಟ್ರಿಗೆ ತುಂಬಿ ತುಳುಕುತ್ತಿರೋ ಹಳ್ಳ-ಕೊಳ್ಳಗಳು ಅನ್ನದಾತರ ಮೊಗದಲ್ಲಿ ಮಂದಹಾಸತುಂಬಿವೆ. ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ.

Advertisment

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಅಂತ ಮಿಂದೇಳುತ್ತಿರುವ ಕರುನಾಡಲ್ಲಿ ಹಲವೆಡೆ ಜಲಧಾರೆಯ ವೈಭವಾದ್ರೆ, ಇನ್ನೂ ಕೆಲವೆಡೆ ಸಂಕಷ್ಟಗಳ ಸರಮಾಲೆ ಸೃಷ್ಟಿಯಾಗಿದೆ. ಮಳೆಗೂ ಶಾಲೆಗೂ ಅವಿನಾಭಾವ ಸಂಬಂಧ ಅನ್ನೋ ಹಾಗೆ ಇಂದು ಸಹ ಕೆಲವಡೆ ಶಾಲೆಗಳು ಬಂದ್​ ಆಗಿವೆ. ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣಾ ಇಂದ ಸಹ ತನ್ನ ರೌದ್ರನರ್ತನ ಮೆರೆಯಲು ತುದಿಗಾಲಲ್ಲಿ ನಿಂತಿದ್ದಾರೆ.

publive-image

ನೇಕಾರನ ಮನೆ ಕುಸಿತ.. ಬೀದಿಗೆ ಬಂದ ಕುಟುಂಬ

ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ‌ ಮಳೆಗೆ ತಾಲೂಕಿನ‌ ಸುಳೇಭಾವಿ ಗ್ರಾಮದ ಕಮ್ಮಾರ ಗಲ್ಲಿಯ ದ್ಯಾಮಪ್ಪ ನಾನಾಬರ ಎಂಬುವವರ ಮನೆ ಗೋಡೆ ಕುಸಿತವಾಗಿದೆ. ಮನೆ ಗೋಡೆ ಕುಸಿರದಿಂದ ನೇಕಾರನ ಕುಟುಂಬ ಬೀದಿಗೆ ಬಂದಿದೆ. ನೇಕಾರಿಕೆ ಮಾಡುವಾಗ ವಿದ್ಯುತ್ ಮಗ್ಗದ ಮೇಲೆಯೇ ಗೋಡೆ ಕುಸಿದ ಪರಿಣಾಮ ಹೊಟ್ಟೆಪಾಡಿಗೆ ದಾರಿಯಾಗಿದ್ದ ಯಂತ್ರಕ್ಕೂ ಹಾನಿಯಾಗಿದೆ. ಭಾರೀ ಮಳೆ ಹಿನ್ನೆಲೆ ಜಿಲ್ಲೆಯ ಬೆಳಗಾವಿ ತಾಲೂಕಿನ ಶಾಲಾ-ಕಾಲೇಜು ಹಾಗೂ ಖಾನಪೂರ ತಾಲ್ಲೂಕಿನ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:  ದೂರದ ಪ್ರಯಾಣ ಬೇಡವೇ ಬೇಡ; ಭೂಮಿ ವ್ಯವಹಾರದಲ್ಲಿ ಭಾರೀ ಲಾಭ; ಇಲ್ಲಿದೆ ನಿಮ್ಮ ಭವಿಷ್ಯ

Advertisment

publive-image

ಅಬ್ಬಿಕಲ್ಲು ಜಲಪಾತ ದೇಶ್ಯವೈಭವಕ್ಕೆ ಪ್ರವಾಸಿಗರು ಫಿದಾ!

ಮಲೆನಾಡ ಮಹಾ ಮಳೆಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸರೀಕಟ್ಟೆ ಸಮೀಪದ ಅಬ್ಬಿಕಲ್ಲು ಜಲಪಾತದಲ್ಲಿ ಜಲವೈಭವ ಕಳೆಗಟ್ಟಿದೆ. ಕರ್ನಾಟಕದ 2ನೇ ಅತ್ಯಂತ ಎತ್ತರದ ಪ್ರದೇಶವಾದ ಮೇರುತಿ ಗುಡ್ಡದಿಂದ ಸೃಷ್ಟಿಯಾದ ಅಬ್ಬಿಕಲ್ಲು ಫಾಲ್ಸ್​​ ಮನಮೋಹಕವಾಗಿ ಧುಮ್ಮಿಕ್ಕುತ್ತಿದೆ. ಹಾಲ್ನೊತೆಯಂತೆ ಧುಮ್ಮಿಕ್ಕುತ್ತಿರೋ ಅಬ್ಬಿಕಲ್ಲು ಜಲಪಾತದ ದೃಶ್ಯಕಾವ್ಯ ಸವಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

publive-image

ಉಕ್ಕಿಹರಿಯುತ್ತಿದ್ದ ಹಳ್ಳದಲ್ಲಿ ಈಜಿ ವಿದ್ಯುತ್​ ತಂತಿ ದುರಸ್ಥಿ!

ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿಮಾಡಿ ಮೆಸ್ಕಾಂ ಸಿಬ್ಬಂದಿಯೋರ್ವ ಮಲೆನಾಡಿಗರ ಮನಗೆದಿದ್ದಾನೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಅರೇಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆಯಿಂದ ಮೂರು ಪಂಚಾಯ್ತಿಗಳಿಗೆ ವಿದ್ಯುತ್​ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನೆಲೆ ಹಳ್ಳದ ಮಧ್ಯೆ ಇದ್ದ ಕಂಬದ ಬಳಿ ಈಜಿಕೊಂಡು ಹೋಗಿ ಸಂತೋಷ್​ ಎಂಬ ಲೈನ್​ ಮ್ಯಾನ್​ ಸಮಸ್ಯೆ ಬಗೆಹರಿಸಿದ್ದಾನೆ. ಲೈನ್​ ಮ್ಯಾನ್ ಸಂತೋಷ್​ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಇಂದಿನಿಂದ ಮುಂಗಾರು ಅಧಿವೇಶನ.. ಪ್ರಧಾನಿ ಮೋದಿಯನ್ನು ಕಟ್ಟಿ ಹಾಕಲು ರಾಹುಲ್​ ಗಾಂಧಿ ಪ್ಲಾನ್​

Advertisment

publive-image

ಆಲಮಟ್ಟಿ ಜಲಾಶಯ ಭರ್ತಿಗೆ ಇನ್ನೆರಡೆ ಮೀಟರ್ ಬಾಕಿ!

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಹಿನ್ನೆಲೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯಾಗಲು ಇನ್ನೆರಡೆ ಮೀಟರ್ ಬಾಕಿಯಿದೆ. ಈ ಹಿನ್ನೆಲೆ ಡ್ಯಾಂಗೆ ಜೀವಕಳೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗೀನ ಸಲ್ಲಿಸಬೇಕು ಅಂತ ರೈತರು ಆಸೆಪಟ್ಟಿದ್ದಾರೆ.

ಇದನ್ನೂ ಓದಿ: ಅನಂತ್​ ಅಂಬಾನಿ, ರಾಧಿಕಾಗೆ ಗಣ್ಯರಿಂದ ಸಿಕ್ಕ ಭರ್ಜರಿ ಗಿಫ್ಟ್​ ಬಗ್ಗೆ ಕೇಳಿದ್ರೆ ಶಾಕ್​ ಆಗ್ತೀರಾ!

publive-image

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ

ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿರೋ ಹಿನ್ನೆಲೆ 6 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗ್ತಿದೆ. ಸದ್ಯ ಜಲಾಶಯಕ್ಕೆ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಒಳ ಹರಿವಿದ್ದು, 76 ಟಿಎಂಸಿಗೂ ಅಧಿಕ ‌ನೀರು ಡ್ಯಾಂನಲ್ಲಿ ಸಂಗ್ರಹವಾಗಿದೆ.

Advertisment

ಇದನ್ನೂ ಓದಿ: ನಟ ದರ್ಶನ್​ ಗ್ಯಾಂಗ್​ನಿಂದ ಕೊಲೆ ಕೇಸ್​​.. ಪೊಲೀಸರಿಗೆ ಮೊದಲೇ ಸಿಕ್ಕಿತ್ತು ಸ್ಫೋಟಕ ಸುಳಿವು!

ಒಟ್ಟಿನಲ್ಲಿ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣಾ ಜಲಮೂಲಗಳನ್ನ ಮೈದುಂಬಿಸಿ ಅನ್ನದಾತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದ್ದಾನೆ.. ಕಳೆದ ಬಾರಿ ಕೈಕೊಟ್ಟಿದ್ದ ವರುಣಾ ಈ ಬಾರಿ ಧೋ ಅಂತ ಸುರಿಯೋದನ್ನ ಕಂಡು ರೈತರ ಮನದಲ್ಲಿ ಹೊಸ ಕನಸು ಚಿಗುರುದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment