RAIN: ಮಳೆ ಬಂತು ಮಳೆ.. ರೈತರ ಮೊಗದಲ್ಲಿ ಸಂಭ್ರಮದ ಕಳೆ.. ಖುಷಿಯಲ್ಲಿ ಸಖತ್​ ಡ್ಯಾನ್ಸ್​ ಮಾಡಿದ ಜನರು

author-image
AS Harshith
Updated On
RAIN: ಮಳೆ ಬಂತು ಮಳೆ.. ರೈತರ ಮೊಗದಲ್ಲಿ ಸಂಭ್ರಮದ ಕಳೆ.. ಖುಷಿಯಲ್ಲಿ ಸಖತ್​ ಡ್ಯಾನ್ಸ್​ ಮಾಡಿದ ಜನರು
Advertisment
  • ಉತ್ತರ ಕರ್ನಾಟಕದ ಕೆಲವೆಡೆ ಗುಡುಗು ಸಹಿತ ಧಾರಾಕಾರ ಮಳೆ
  • ಕೊಡಗಿನಲ್ಲಿ ಮೊದಲ ಮಳೆ ಸಿಂಚನ, ಕುಣಿದು ಕುಪ್ಪಳಿಸಿದ ಜನ
  • ಬಿರುಗಾಳಿ ಹೊಡೆತಕ್ಕೆ ಧರೆಗೆ ಉರುಳಿದ ವಿದ್ಯುತ್ ಕಂಬಗಳು!‌

ಅದ್ಯಾಕೋ ಗೊತ್ತಿಲ್ಲ. ಯುಗಾದಿಯಿಂದ ರಾಜ್ಯಕ್ಕೆ ನವವಸಂತ ಶುರುವಾದಂತಿದೆ. ಯಾಕಂದ್ರೆ ದಿನದಿಂದ ದಿನಕ್ಕೆ ಏರುತ್ತಿದ್ದ ಬಿಸಿಲಿನ ತಾಪಮಾನಕ್ಕೆ ಜನ ರೋಸಿ ಹೋಗಿದ್ದರು. ಈ ಬಿರುಬಿಸಿಲಿನ ಶಾಖಕ್ಕೆ ಜನ ಹೈರಾಣಾಗಿರಬೇಕಾದ್ರೇನೇ ವರುಣ ನಾಲ್ಕೈದು ದಿನಗಳಿಂದ ರಾಜ್ಯದ ನಾನಾ ಕಡೆ ಧೋ ಅಂತ ಸುರಿಯುತ್ತಿದ್ದಾನೆ.

ಉತ್ತರ ಕರ್ನಾಟಕದ ಕೆಲವೆಡೆ ಗುಡುಗು ಸಹಿತ ಧಾರಾಕಾರ ಮಳೆ

ಬಿರು ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಕರ್ನಾಟಕದ ಜನತೆಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಭರ್ಜರಿ ಮಳೆಯಾಗಿದೆ. ಹೀಗಾಗಿ ನಾಡಿನ ಜನರು ಫುಲ್ ಖುಷಿ ಆಗಿದ್ದಾರೆ. ಈ ನಡುವೆ ದುರಂತ ಸಂಭವಿಸಿದೆ.

ವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಹಿಳೆ ಸಾವು!

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ 40 ವರ್ಷದ ಭಾರತಿ ಕೆಂಗನಾಳ ಎಂಬ ಮಹಿಳೆ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮೊನ್ನೆಯಷ್ಟೆ ಇಂಡಿ ತಾಲೂಕಿನಲ್ಲಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದರು‌‌, ಇದರ ಬೆನ್ನಲ್ಲೇ ನಿನ್ನೆ ಮತ್ತೋರ್ವ ಮಹಿಳೆ ಸಿಡಿಲಿಗೆ ಬಲಿಯಾಗಿದ್ದಾರೆ.

ಕೊಡಗಿನಲ್ಲಿ ಮೊದಲ ಮಳೆ ಸಿಂಚನ, ಕುಣಿದು ಕುಪ್ಪಳಿಸಿದ ಜನ

ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಹೊದ್ದೂರು ಗ್ರಾಮದ ಭಗವತಿ ಕಾಲೋನಿಯಲ್ಲಿನ ಶ್ರೀಮಾರಿಯಮ್ಮ ಹಾಗೂ ಕೊರಗಜ್ಜದೇವರ ವಾರ್ಷಿಕ ಉತ್ಸವದಲ್ಲಿ ಮಳೆಗೆ ಭಕ್ತಾಧಿಗಳು ಡ್ಯಾನ್ಸ್ ಮಾಡಿದ್ದಾರೆ. ಹಲವು ದಿನಗಳಿಂದ ಮಳೆಗಾಗಿ ಕಾಯುತ್ತಿದ್ದ ಜನತೆ ಮೊದಲ ಮಳೆಯಾಗುತ್ತಿದಂತೆ ಖುಷಿಗೆ ಮಳೆಯಲ್ಲೆ ಸಖತ್ ಸ್ಟೇಪ್ ಹಾಕಿದ್ದಾರೆ.

publive-image

ಕಾಫಿನಾಡಿನ ಮಲೆನಾಡು ಭಾಗಗಳಲ್ಲಿ ಗಾಳಿ ಸಮೇತ ಮಳೆ

ಚಿಕ್ಕಮಗಳೂರು ತಾಲೂಕಿನ ಶಿರಗೋಳ ಗ್ರಾಮದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಬೃಹತ್ ಗಾತ್ರದ ಅರಳಿ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಸಂಗಮೇಶ್ವರ ಪೇಟೆಯ ಶಾಲೆಯ ಕಾಂಪೌಂಡ್ ಕೂಡ ಹಾನಿಯಾಗಿದೆ. ಖಾಂಡ್ಯ, ಸಂಗಮೇಶ್ವರ ಪೇಟೆ, ಜೇನುಗದ್ದೆ, ಶಿರಗೋಳ ಗ್ರಾಮದಲ್ಲಿ ಭಾರೀ ಮಳೆಯಾಗಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಬಿರುಗಾಳಿ ಹೊಡೆತಕ್ಕೆ ಧರೆಗೆ ಉರುಳಿದ ವಿದ್ಯುತ್ ಕಂಬಗಳು!‌

ಬಿರುಗಾಳಿ ಹೊಡೆತಕ್ಕೆ ಜಮಖಂಡಿ ನಗರದ ಹೊರವಲಯದಲ್ಲಿರುವ ಕುಂಚನೂರು ರಸ್ತೆಯ ಕುಂಬಾರ ಹಳ್ಳ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು‌, ಬೃಹತ್ ಮರಗಳು, ದ್ರಾಕ್ಷಿ ಒಡ, ಶೆಡ್​ಗಳು ಧರೆಗೆ ಉರುಳಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಇದನ್ನೂ ಓದಿ: ಇಂದಿನಿಂದ ಅಂಚೆ ಮತದಾನ ಪ್ರಾರಂಭ.. ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ

ಒಟ್ಟಾರೆ ಸೆಕೆಯೇ ಜೀವನ ಅಂತ ಬದುಕುತ್ತಿದ್ದ ಜನಕ್ಕೆ ಮಳೆರಾಯ ತಂಪೆರೆಯುತ್ತಿದ್ದಾನೆ. ಸದ್ಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಏಪ್ರಿಲ್ ಇಂದು ಮತ್ತು ನಾಳೆ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment