ಸರ್ಕಾರಿ ಉದ್ಯೋಗ ಬೇಕಾ? ಈಗಲೇ ಅಪ್ಲೈ ಮಾಡಿ; ನೇರ ಸಂದರ್ಶನ; ಸ್ಯಾಲರಿ ಎಷ್ಟು ಗೊತ್ತಾ?

author-image
Ganesh Nachikethu
ಸರ್ಕಾರಿ ಉದ್ಯೋಗ ಬೇಕಾ? ಈಗಲೇ ಅಪ್ಲೈ ಮಾಡಿ; ನೇರ ಸಂದರ್ಶನ; ಸ್ಯಾಲರಿ ಎಷ್ಟು ಗೊತ್ತಾ?
Advertisment
  • ಸರ್ಕಾರಿ ಉದ್ಯೋಗ ಹುಡುಕುತ್ತಿರೋ ಅಭ್ಯರ್ಥಿಗಳಿಗೆ ಭರ್ಜರಿ ಗುಡ್​ನ್ಯೂಸ್​​!
  • ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಿಹಿಸುದ್ದಿ
  • ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಇದೇ ತಿಂಗಳು ಅಕ್ಟೋಬರ್ 23ನೇ ತಾರೀಖು

ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರೋ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕೊನೆ ದಿನಾಂಕ ಇದೇ ತಿಂಗಳು ಎಂದರೆ ಅಕ್ಟೋಬರ್ 23ನೇ ತಾರೀಖು ಆಗಿದೆ.

ಯಾವ್ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ?

ಇಲಾಖೆಯಲ್ಲಿ ಖಾಲಿ ಇರೋ 47 ಸಂಗ್ರಹಣೆ ಸಲಹೆಗಾರ, ಪರಿಸರ ಸಲಹೆಗಾರ, ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು ಸಲಹೆಗಾರರು ಮತ್ತು ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ ಸೇರಿ ವಿವಿಧ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿದ್ಯಾರ್ಹತೆ ಮತ್ತು ವಯೋಮಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು. ನಂತರ ಅರ್ಜಿ ಸಲ್ಲಿಕೆ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ Karnataka State RDWSD Recruitment ಅಧಿಕೃತ ವೆಬ್​ಸೈಟಿಗೆ ಭೇಟಿ ನೀಡಬೇಕು. 47 ಅರ್ಜಿ ಸಲ್ಲಿಸುವ ಬಗೆ ಆನ್​​ಲೈನ್​​​ ಮಾಹಿತಿ ಒದಗಿಸಲಾಗಿದೆ. ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ ನೇರ ಆಯ್ಕೆ ಮಾಡಲಾಗುತ್ತದೆ.

ಸ್ಯಾಲರಿ ಎಷ್ಟು?

ವಿದ್ಯಾರ್ಹತೆ ಸ್ನಾತಕೋತ್ತರ ಪದವಿ, BCA, BE ಅಥವಾ B.Tech, M.Tech, MCA, MSW, MA, MBA, M.Com ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 75,000/- ರಿಂದ 15,0000/- ವರೆಗೆ ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಇದನ್ನೂ ಓದಿ:ಭಾರತ ತಂಡದ ಗೆಲುವಿಗೆ ಇವರೇ ಕಾರಣ ಎಂದ ಕ್ಯಾಪ್ಟನ್​ ಸೂರ್ಯ; ಬಿಚ್ಚಿಟ್ಟ ಅಸಲಿ ಸತ್ಯವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment