/newsfirstlive-kannada/media/post_attachments/wp-content/uploads/2025/05/KASHMIR-1.jpg)
ಪಹಲ್ಗಾಮ್ ದಾಳಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಸಿಲುಕಿದ್ದ ಬಹುತೇಕ ಕನ್ನಡಿಗರು ಸುರಕ್ಷಿತವಾಗಿ ವಾಪಸ್ಸಾಗಿದ್ರು. ಆದ್ರೆ ಇನ್ನೂ ಕೆಲ ಕೆನ್ನಡಿಗರು ಮರಳಿ ಬರಲು ವ್ಯವಸ್ಥೆಯಿಲ್ಲದೆ ಕಾಶ್ಮೀರದಲ್ಲೇ ಉಳಿದಿದ್ರು. ಇದೀಗ ಯುದ್ಧದ ವಾತಾವರಣದಲ್ಲೇ ಜಮ್ಮುವಿನಲ್ಲಿ ವಿದ್ಯಾಭ್ಯಾಸ ಮಾಡ್ತಿರೋ ಕರ್ನಾಟಕದ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿದ್ದಾರೆ.
ಅದ್ಯಾವಾಗ ಪಹಲ್ಗಾಮ್ನಲ್ಲಿ ಉ್ರಗರ ದಾಳಿ ಆಯ್ತೋ ಅಂದಿನಿಂದ ಜಮ್ಮು-ಕಾಶ್ಮೀರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಿಸೈಲ್, ಶೆಲ್ಗಳ ಸದ್ದಿಗೆ ಕಾಶ್ಮೀರಿ ಜನರು ನೆಮ್ಮದಿಯನ್ನೇ ಕಳಕೊಂಡಿದ್ದು, ಕರ್ನಾಟಕದಿಂದ ಕಾಶ್ಮೀರಕ್ಕೆ ವಿದ್ಯಾಭ್ಯಾಸಕ್ಕೆ ಹೋಗಿರುವ ವಿದ್ಯಾರ್ಥಿಗಳ ಎದೆಯಲ್ಲಿ ಅದೇ ದಾಳಿಯ ದಿಗಿಲು ಮನೆಮಾಡಿದೆ. ಯುದ್ಧದ ಕಾರ್ಮೋಡದ ಮಧ್ಯೆಯೇ ಇದೀಗ ಕನ್ನಡಿಗರು ಗೂಡಿಗೆ ಮರಳಿದ್ದಾರೆ.
ಇದನ್ನೂ ಓದಿ: Operation Keller ಮೂಲಕ ಮೂವರು ಉಗ್ರರು ಉಡೀಸ್.. ಏನಿದು ಆಪರೇಷನ್ ಕೆಲ್ಲರ್..?
ಶ್ರೀನಗರದಲ್ಲಿ ಎಮ್ಎಸ್ಸಿ ಅಭ್ಯಾಸ ಮಾಡ್ತಿರೋ ಹರ್ಷಿತ್ ಹಾಗೂ ನೂತನ್ ಸೇಫ್ ಆಗಿ ಕರ್ನಾಟಕಕ್ಕೆ ಮರಳಿದ್ದಾರೆ. ಹರ್ಷಿತ್ ಹಾಗೂ ನೂತನ್ ಸೇರಿ ಒಟ್ಟು 13 ಜನ ಕನ್ನಡಿಗರು ಕರುನಾಡಿಗೆ ವಾಪಸ್ಸಾಗಿದ್ದು, ಪಹಲ್ಗಾಮ್ ಅಟ್ಯಾಕ್ ಆದ ದಿನದಿಂದಲೂ ಆತಂಕದಲ್ಲೇ ಇದ್ದ ವಿದ್ಯಾರ್ಥಿಗಳು ತವರಿಗೆ ಮರಳಿ ನಿಟ್ಟುಸಿರು ಬಿಟ್ಟಿದ್ದಾರೆ.
ಮಕ್ಕಳ ಪರಿಸ್ಥಿತಿಯನ್ನು ಫೋನ್ನಲ್ಲೇ ಕೇಳ್ತಿದ್ದ ಪೋಷಕರಂತೂ ಊಟ, ನಿದ್ದೆ ಬಿಟ್ಟಿದ್ರು. ಮಕ್ಕಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವಂತೆ ಹರ್ಷಿತ್ ಪೋಷಕರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಮನವಿ ಮಾಡಿಕೊಂಡಿದ್ರಂತೆ.. ನಮ್ಮ ಅಳಲಿಗೆ ಓಗೊಟ್ಟ ಕುಮಾರಸ್ವಾಮಿ, ಮಕ್ಕಳನ್ನು ಕರೆತರಲು ವ್ಯವಸ್ಥೆ ಮಾಡಿದ್ರು ಅಂತಾರೆ.
ಇದನ್ನೂ ಓದಿ: ಆರ್ಸಿಬಿಗೆ ಭರ್ಜರಿ ಗುಡ್ನ್ಯೂಸ್.. ಮುಂದಿನ ಎಲ್ಲಾ ಪಂದ್ಯ ಆಡ್ತಾರೆ ಇಂಗ್ಲೆಂಡ್ನ ಸ್ಟಾರ್ ಪ್ಲೇಯರ್..!
ನಮಗೆ ಓಡಾಡಲು ತುಂಬಾನೇ ತೊಂದರೆ ಆಗುತ್ತಿತ್ತು. ಅದರಲ್ಲೂ ಒಮ್ಮೆ ಜಮ್ಮುವಿನ ವಿಶ್ವವಿದ್ಯಾಲಯದಲ್ಲಿ ಅಟ್ಯಾಕ್ ಆಗಿದೆ ಎಂಬ ಸುದ್ದಿ ಬಂದಿತ್ತು. ಅಲ್ಲಿಂದ ಸಾಕಷ್ಟು ಆತಂಕಕ್ಕೆ ಒಳಗಾದೇವು. ನೆಟ್ವರ್ಕ್ ಕೂಡ ಬಂದ್ ಮಾಡಿರುತ್ತಿದ್ದರು. ಹಾಸ್ಟೆಲ್ನಲ್ಲಿ ಇರೋಕೆ ಭಯ ಆಗುತ್ತಿತ್ತು. ಹಾಸ್ಟೆಲ್ ವಿಂಡೋಗಳನ್ನು ಮುಚ್ಚಿ ಲೈಟ್ ಆಫ್ ಮಾಡಲು ಹೇಳುತ್ತಿದ್ದರು. ಇದರಿಂದ ನಾವು ಓಡಾಡಲು ಹೆದರುತ್ತಿದ್ದೇವು. ಊರಿಗೆ ಬರೋಣ ಅಂದುಕೊಂಡರೆ ಅದು ಸಾಧ್ಯವಾಗಲಿಲ್ಲ. ಯಾವುದೇ ವಹಿಕಲ್ ವ್ಯವಸ್ಥೆಗಳು ಇರಲಿಲ್ಲ. ಬಸ್ ವ್ಯವಸ್ಥೆ ಇರಲಿಲ್ಲ. ಜಮ್ಮುವಿನಲ್ಲಿ ವಿಮಾನಗಳ ಹಾರಾಟ್ ಬಂದ್ ಮಾಡಲಾಗಿತ್ತು. ಇದರಿಂದ ಸಾಕಷ್ಟು ತೊಂದರೆಗೆ ಸಿಲುಕಿದ್ದೇವು ಅಂತಾ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ಒಟ್ಟಾರೆ ಒಂದ್ಕಡೆ ಪಹಲ್ಗಾಮ್ ದಾಳಿಯಿಂದ ಜೀವ ಕೈಯಲ್ಲೇ ಹಿಡಿದು ಕುಳಿತಿದ್ದ ಕನ್ನಡದ ಮಕ್ಕಳು ತವರಿಗೆ ಮರಳಿದ್ದಾರೆ. ಅತ್ತ ಮಕ್ಕಳ ಆಗಮನದಿಂದ ಪೋಷಕರೂ ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಪಾಪಿ ಪಾಕ್ ಬೆನ್ನಿಗೆ ನಿಂತ ಟರ್ಕಿಗೆ ಬಿಸಿ ಮುಟ್ಟಿಸಿದ ಭಾರತೀಯರು.. ಬಾಯ್ಕಾಟ್ ಯುದ್ಧ ಆರಂಭ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ