15 ಭರ್ಜರಿ ಸಿಕ್ಸರ್; ಬರೋಬ್ಬರಿ 26 ಫೋರ್​; ತ್ರಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ

author-image
Ganesh Nachikethu
Updated On
15 ಭರ್ಜರಿ ಸಿಕ್ಸರ್; ಬರೋಬ್ಬರಿ 26 ಫೋರ್​; ತ್ರಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ
Advertisment
  • ಕರ್ನಾಟಕ ತಂಡದ ಯುವ ಬ್ಯಾಟರ್ ಮ್ಯಾಕ್ನಿಲ್ ನೊರೊನ್ಹಾ
  • ದೇಶೀಯ ಕ್ರಿಕೆಟ್​ನಲ್ಲಿ ಮ್ಯಾಕ್ನಿಲ್ ನೊರೊನ್ಹಾ ಸಿಡಿಲಬ್ಬರ..!
  • 2ನೇ ಬಾರಿಗೆ ತ್ರಿಶತಕ ಸಿಡಿಸಿ ದಾಖಲೆ ಬರೆದ ಯುವ ಬ್ಯಾಟರ್

ಕರ್ನಾಟಕ ತಂಡದ ಯುವ ಬ್ಯಾಟರ್ ಮ್ಯಾಕ್ನಿಲ್ ನೊರೊನ್ಹಾ. ಇವರು ದೇಶೀಯ ಕ್ರಿಕೆಟ್​ನಲ್ಲಿ ಅಬ್ಬರಿಸುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ. ಸದ್ಯ ನಡೆಯುತ್ತಿರೋ ದೇಶೀಯ ಕ್ರಿಕೆಟ್​​ನ 6ನೇ ಪಂದ್ಯದಲ್ಲೂ ಕರ್ನಾಟಕ ತಂಡದ ಪರ ಅಬ್ಬರಿಸಿದ್ರು ಮ್ಯಾಕ್ನಿಲ್​​.

ಇನ್ನು, ಮೊದಲು ಬ್ಯಾಟಿಂಗ್​ ಮಾಡಿದ ಉತ್ತರಾಖಂಡ ಕೇವಲ 202 ರನ್​ಗಳಿಗೆ ಆಲೌಟ್​ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ 104 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 580ಕ್ಕೂ ಹೆಚ್ಚು ರನ್​ ಕಲೆ ಹಾಕಿತ್ತು.

ಮ್ಯಾಕ್ನಿಲ್ ಅಬ್ಬರ

ಕರ್ನಾಟಕ ಪರ ಓಪನರ್​ ಆಗಿ ಬಂದ ಮ್ಯಾಕ್ನಿಲ್ ಅಬ್ಬರಿಸಿದ್ರು. ಕ್ರೀಸ್​ನಲ್ಲೇ ಬಂಡೆಯಂತೆ ನಿಂತು ಬ್ಯಾಟ್​ ಬೀಸಿದ ಇವರು ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ರು. ತಾನು ಎದುರಿಸಿದ 329 ಎಸೆತಗಳಲ್ಲಿ 26 ಬೌಂಡರಿ, 15 ಸಿಕ್ಸರ್​ ಸಮೇತ ಅಜೇಯ 304 ರನ್​ ಬಾರಿಸಿದ್ರು.

2ನೇ ತ್ರಿಶತಕ

ಕಳೆದ ವರ್ಷ ಅಕ್ಟೋಬರ್​​ನಲ್ಲಿ ಸಿಕೆ ನಾಯ್ಡು ಟ್ರೋಫಿಯಲ್ಲೂ ಮೊದಲ ತ್ರಿಶತಕ ಸಿಡಿಸಿದ್ದರು. ತ್ರಿಪುರದ ವಿರುದ್ಧ ನೊರೊನ್ಹಾ 348 ಎಸೆತಗಳಲ್ಲಿ 23 ಬೌಂಡರಿ, 25 ಸಿಕ್ಸರ್​ಗಳ ನೆರವಿನಿಂದ 345 ರನ್​ ಗಳಿಸಿದ್ದರು. ಈಗ ಮತ್ತೊಂದು ತ್ರಿಶತಕ ಚಚ್ಚಿದ್ದಾರೆ.

ಯಾರು ಮೆಕ್ನಿಲ್?

ಮ್ಯಾಕ್ನೀಲ್ ನೊರೊನ್ಹ ಕರ್ನಾಟಕದ ಭರವಸೆಯ ಯುವ ಆಲ್​ರೌಂಡರ್. ಇವರು ಮಹಾರಾಜ ಟ್ರೋಫಿಯಲ್ಲಿ ಕಣಕ್ಕಿಳಿದು ಗಮನ ಸೆಳೆದಿದ್ರು. ಈ ಯಂಗ್​ ಸ್ಟಾರ್ ಸಿಕೆ ನಾಯ್ದು ಟೂರ್ನಿಯಲ್ಲಿ 2ನೇ ತ್ರಿಶತಕ ಸಿಡಿಸುವ ಮೂಲಕ ಸದ್ದು ಮಾಡಿದ್ದಾರೆ.

ಇದನ್ನೂ ಓದಿ:ಕೊನೆಗೂ ಬಿಸಿಸಿಐ ಸೂಚನೆಗೆ ತಲೆ ಬಾಗಿದ ಕನ್ನಡಿಗ; ತಂಡಕ್ಕೆ ಕೆ.ಎಲ್​​ ರಾಹುಲ್​ ಎಂಟ್ರಿಯಿಂದ ಬಂತು ಆನೆಬಲ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment