ಮನೆ ಬಾಗಿಲಿಗೆ ಬರಲಿದೆ ಕರ್ನಾಟಕದ 14 ದೇಗುಲಗಳ ಪ್ರಸಾದ; ಇ-ಪ್ರಸಾದ ಸೇವೆ ಆರಂಭ..!

author-image
Ganesh
Updated On
ಶಕ್ತಿಯೋಜನೆಯಿಂದ ಮುಜರಾಯಿ ದೇಗುಲಗಳ ಆದಾಯ ದ್ವಿಗುಣ; ಕುಕ್ಕೆ, ಕೊಲ್ಲೂರಿನ ಈ ವರ್ಷದ ಆದಾಯವೆಷ್ಟು?
Advertisment
  • ಇ-ಪ್ರಸಾದ ಸೇವೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
  • ನೋ ಲಾಸ್, ನೋ ಪ್ರಾಫಿಟ್ ಅಡಿಯಲ್ಲಿ ಭಕ್ತರಿಗೆ ಸೇವೆ
  • ಇ-ಪ್ರಸಾದ ಸೇವೆ ಆರಂಭಿಸಿದ 14 ದೇಗುಲಗಳು ಯಾವುದು?

ಬೆಂಗಳೂರು: ರಾಜ್ಯದ ಪ್ರಮುಖ 14 ದೇವಸ್ಥಾನಗಳ ಪ್ರಸಾದವನ್ನು ಭಕ್ತರ ಮನೆಗಳಿಗೆ ತಲುಪಿಸುವ ‘ಇ-ಪ್ರಸಾದ ಸೇವೆ’ಗೆ ಧಾರ್ಮಿಕ ದತ್ತಿ ಇಲಾಖೆ ಚಾಲನೆ ನೀಡಿದೆ.

ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸೇವೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ, ಕೆಲ ಸಂದರ್ಭದಲ್ಲಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಇ-ಪ್ರಸಾದ ಸೇವೆ ಮೂಲಕ ಆರ್ಡರ್​ ಮಾಡಿ ಮನೆಗೆ ಪ್ರಸಾದ ತರಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸ ಲಾಗಿದೆ. ನೋ ಲಾಸ್, ನೋ ಪ್ರಾಫಿಟ್ ಅಡಿಯಲ್ಲಿ ಭಕ್ತರಿಗೆ ಸೇವೆ ನೀಡಲಾಗುವುದು. 100 ರಿಂದ 200 ರೂಪಾಯಿಗಳಲ್ಲಿ ಮನೆ ಬಾಗಿಲಿಗೆ ಪ್ರಸಾದ ಸೇವೆ ನೀಡಲಾಗುವುದು ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: ಬಾಹುಬಲಿ ನಟನಿಗೆ ಕಂಕಣ ಭಾಗ್ಯ.. ಉದ್ಯಮಿ ಮಗಳ ಜೊತೆ ಪ್ರಭಾಸ್ ಮದುವೆ..?

ಯಾವೆಲ್ಲ ದೇಗುಲಗಳ ಪ್ರಸಾದ..?

  • ಬೆಂಗಳೂರಿನ ಶ್ರೀವಿನಾಯಕಸ್ವಾಮಿ ದೇವಾಲಯ, ಗವಿಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ
  •  ಮಂಡ್ಯದ ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯ
  •  ಮೈಸೂರು ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ
  •  ಕೋಲಾರದ ಮಾಲೂರಿನ ಶ್ರೀ ಪುಸನ್ನ ವೆಂಕಟರಮಣ ಸ್ವಾಮಿ ದೇವಾಲಯ
  •  ಉಡುಪಿಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ
  •  ಬೀದರ್‌ನ ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ
  •  ಬೆಳಗಾವಿ ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ
  •  ದಕ್ಷಿಣ ಕನ್ನಡದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
  •  ಬಳ್ಳಾರಿಯ ಶ್ರೀ ಕನಕ ದುರ್ಗಮ್ಮ ದೇವಸ್ಥಾನ
  •  ವಿಜಯನಗರದ ಹೂವಿನಹಡಗಲಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ
  •  ಕೊಪ್ಪಳದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಾಲಯ
  •  ಕಲಬುರಗಿಯ ಗಾಣಗಾಪುರದ ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಾಲಯ

ಏನೆಲ್ಲ ಸಿಗಲಿದೆ..?
ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ ಅಥವಾ ಭಂಡಾರ, ಕುಂಕಮ, ಬಿಲ್ವಪತ್ರೆ/ಹೂವು/ತುಳಸಿ ಹಾಗೂ ದೇವರ ಚಿತ್ರವಿರುವ ಪ್ಯಾಕೆಟ್ ಅಳತೆಯ ಲ್ಯಾಮಿನೇಟೆಡ್ ಭಾವಚಿತ್ರ, ಡಾಲರ್ ಮತ್ತು ದಾರ, ದೇವಾಲಯದ ಮಹಿಮೆ ಹಾಗೂ ಸ್ತೋತ್ರ ಮುದ್ರಣಗಳನ್ನು ಭಕ್ತರು ಇ-ಪ್ರಸಾದ ಸೇವೆಯಿಂದ ತರಿಸಿಕೊಳ್ಳಬಹುದು. ವೆವ್​ಸೈಟ್ ವಿಳಾಸ: https://csc.devalayas.com/

ಇದನ್ನೂ ಓದಿ: ಸಿಎಸ್​​ಕೆ ತಂಡದ ಈ ಬ್ರಹ್ಮಾಸ್ತ್ರ ಎದುರಿಸೋದೇ RCBಗೆ ಇವತ್ತು ದೊಡ್ಡ ಚಾಲೆಂಜ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment