Advertisment

Video: 24 ಗಂಟೆಯಲ್ಲಿ ನಿರ್ಮಾಣವಾದ ದೇವಸ್ಥಾನವಿದು! ಇದು ದಾಖಲೆಯಲ್ಲದೆ ಮತ್ತೇನು?

author-image
Harshith AS
Updated On
Video: 24 ಗಂಟೆಯಲ್ಲಿ ನಿರ್ಮಾಣವಾದ ದೇವಸ್ಥಾನವಿದು! ಇದು ದಾಖಲೆಯಲ್ಲದೆ ಮತ್ತೇನು? 
Advertisment
  • ಒಂದೇ ದಿನದಲ್ಲಿ ನಿರ್ಮಾಣವಾಯ್ತು ಈ ದೇವಸ್ಥಾನ
  • ಪೂಜಾರಿ ಕನಸಿನಂತೆ, ಗ್ರಾಮಸ್ಥರ ಸಹಕಾರದಿಂದ ನಿರ್ಮಾಣ
  • 300 ವರ್ಷಗಳ ಇತಿಹಾಸವುಳ್ಳ ಈ ದೇವಸ್ಥಾನ ಝಲಕ್​ ನೋಡಲೇಬೇಕು

ದೇವಸ್ಥಾನ ಕಟ್ಟೋದು ಸುಲಭದ ಮಾತಲ್ಲ. ಅದರಲ್ಲೂ ಒಂದೇ ದಿನದಲ್ಲಿ ಮಂದಿರ ಕಟ್ಟಲು ಸಾಧ್ಯವೂ ಇಲ್ಲ. ಆದರೆ ಒಂದು ವೇಳೆ ಒಂದೇ ದಿನದಲ್ಲಿ ದೇವಸ್ಥಾನ ಕಟ್ಟಿದರೆ ಅದು ಪವಾಡವೇ ಸರಿ. ಇದೀಗ ಯಾದಗಿರಿಯಲ್ಲಿ ಅಂಥದೊಂದು ಪವಾಡವೆಂಬಂತೆ ಒಂದೇ ದಿನದಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ಅಲ್ಲಿನ ಗ್ರಾಮಸ್ಥರು ಒಂದೇ ದಿನದಲ್ಲಿ ದೇವಸ್ಥಾನ ನಿರ್ಮಿಸಿ ದಾಖಲೆ ಬರೆದಿದ್ದಾರೆ. ಆದರೆ ಇದು ಹೇಗೆ ಸಾಧ್ಯ ಎಂಬುದನ್ನು ತಿಳಿದರೆ ಅಚ್ಚರಿ ಆಗೋದರಲ್ಲಿ ಅನುಮಾನವಿಲ್ಲ.

Advertisment

ಅಚ್ಚರಿ ಮೇಲೊಂದು ಅಚ್ಚರಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಿಹಾಳ್ ಗ್ರಾಮದಲ್ಲಿ ಇಂತಹದೊಂದು ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಬೇಕಾದ ಶಿಲ್ಪಿಗಳು, ಕೆತ್ತನೆ ಮಾಡಿದ ಕಲ್ಲುಗಳು. ಇನ್ನು ದೇವಸ್ಥಾನ ಕಟ್ಟಲು ಬೇಕಾದ ವಸ್ತುಗಳನ್ನ ಸಂಗ್ರಹಿಸುವುದಕ್ಕೆ ತಿಂಗಳಾನುಗಟ್ಟಲೇ ಸಮಯ ಬೇಕಾಗುತ್ತದೆ. ಅಂತಹದ್ದರಲ್ಲಿ ಇವರು ಒಂದೇ ದಿನದಲ್ಲಿ ದೇವಸ್ಥಾನ ಪೂರ್ತಿ ಕಟ್ಟೋದು ಅಂದರೆ ತಮಾಷೆ ಅಲ್ವೇ ಅಲ್ಲ. ಆದರೆ ಇದು ಸತ್ಯವಾಗಲೂ ನಡೆದಂತಹ ಮತ್ತು ಎಲ್ಲರಿಗೂ ಅಚ್ಚರಿ ಮೂಡಿಸಿದೆ ಘಟನೆ.

24 ಗಂಟೆಗಳಲ್ಲಿ ನಿರ್ಮಾಣವಾದ ದೇವಸ್ಥಾನ

ಕೇವಲ 24 ಗಂಟೆಗಳಲ್ಲಿ ನಿರ್ಮಾಣವಾಯ್ತು ಸೋಲ್ದೇರಪ್ಪ ದೇವಸ್ಥಾನ. ಶಿಲ್ಪಿಗಳ ಕೆತ್ತನೆ ಮಾಡಿದ ಬೃಹತ್ ಕಲ್ಲುಗಳಿಂದ ದೇವಸ್ಥಾನ ನಿರ್ಮಾಣ. ದೇವಸ್ಥಾನ ನಿರ್ಮಾಣಕ್ಕೆ ಕೃಷ್ಣ ನೀರು ಬಳಕೆ. ದೊಡ್ಡಬಳ್ಳಾಪುರದಿಂದ ಕಲ್ಲು ತಂದು ಇಡೀ ಗ್ರಾಮಸ್ಥರಿಂದ ದೇವಸ್ಥಾನ ನಿರ್ಮಾಣ ಕೆಲಸ ನಡೆದಿದೆ.

ಇಷ್ಟೊಂದು ಆತುರ ಯಾಕೆ?

ಸಾಮಾನ್ಯವಾಗಿ ದೇವಸ್ಥಾನ ಕಟ್ಟಬೇಕು ಅಂದ್ರೆ ವರ್ಷಗಳ ಕಾಲ ಸಮಯಬೇಕಾಗುತ್ತೆ. ಆದರೆ ಮಂಗಿಹಾಳ್ ಗ್ರಾಮದಲ್ಲಿ ಕೇವಲ 24 ಗಂಟೆಗಳ ಒಳಗೆ ಸೋಲ್ದೇರಪ್ಪ ದೇವಸ್ಥಾನ ನಿರ್ಮಾಣ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಕೇವಲ 24 ಗಂಟೆಗಳಲ್ಲಿ ದೇವಸ್ಥಾನ ನಿರ್ಮಾಣ ಮಾಡುವ ಆತುರ ಗ್ರಾಮಸ್ಥರಿಗೆ ಯಾಕಿತ್ತು ಅಂದರೆ ಅದ್ದಕ್ಕೂ ಒಂದು ಪ್ರಮುಖ ಕಾರಣವಿದೆ.

Advertisment

ಪೂಜಾರಪ್ಪ ಕನಸಲ್ಲಿ ಬಂದಿದ್ದೇನು?

ಈ ದೇವಸ್ಥಾನದ ಪೂಜಾರಿ ಭೀಮಣ್ಣನ ಕನಸಲ್ಲಿ ಕಳೆದ ಮೂರು ವರ್ಷಗಳ ಹಿಂದೆ ದೇವರು ಬಂದು ದೇವಸ್ಥಾನ ನಿರ್ಮಾಣ ಮಾಡು ಅಂತ ಕನಸಲ್ಲಿ ಹೇಳಿದ್ದರಂತೆ. ಹೀಗಾಗಿ ಪೂಜಾರಿ ಗ್ರಾಮಸ್ಥರ ಮುಂದೆ ದೇವರು ಕನಸಲ್ಲಿ ಬಂದು ದೇವಸ್ಥಾನ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬಳಿಕ ಇಡೀ ಗ್ರಾಮದ ಜನ ಎರಡು ವರ್ಷಗಳ ಕಾಲ ದೇವಸ್ಥಾನ ನಿರ್ಮಾಣ ಖರ್ಚಿಗಾಗಿ ಬೇಕಾಗಿರುವ ಹಣವನ್ನ ಸಂಗ್ರಹ ಮಾಡಿದ್ದಾರೆ. ಎರಡು ವರ್ಷದಲ್ಲಿ ಪ್ರತಿಯೊಂದು ಮನೆಯಿಂದ ನೀಡಿದಷ್ಟು ಹಣ ಪಡೆದು ಸುಮಾರು ಎರಡು ವರ್ಷದಲ್ಲಿ 15 ಲಕ್ಷ ಹಣ ಸಂಗ್ರಹ ಮಾಡಿದ್ದಾರೆ. ಇನ್ನು ದೇವಸ್ಥಾನ ಹೆಸರಲ್ಲಿ ಇದ್ದು 20 ಲಕ್ಷ ಹಣ ಸೇರಿಸಿ ಒಟ್ಟು 35 ಲಕ್ಷ ಹಣವನ್ನ ಖರ್ಚು ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.

20 ಜನ ಮೇಸ್ತ್ರಿಗಳು

ಇನ್ನು 35 ಲಕ್ಷ ಹಣ ಸಂಗ್ರಹವಾದ ಬಳಿಕ ದೇವಸ್ಥಾನವನ್ನ ಕಟ್ಟಬೇಕು ಅಂತ ಗ್ರಾಮಸ್ಥರು ಮುಂದಾಗಿದ್ರು. ಇದಕ್ಕೂ ಮೊದಲು ದೇವಸ್ಥಾನ ನಿರ್ಮಾಣ ಮಾಡಲು ದೊಡ್ಡಬಳ್ಳಾಪುರದಿಂದ ಖೈರಾ ಎಂಬ ಹೆಸರಿನ ದೊಡ್ಡ ಗಾತ್ರದ 32 ಕಲ್ಲುಗಳನ್ನ ತರಿಸಿಕೊಂಡಿದ್ರು. ಮೊದಲೇ ಡಿಸೈನ್ ಮಾಡಿದ 11 ಅಡಿ ಉದ್ದ ಹಾಗೂ 2.5 ಅಡಿ ಅಗಲವಿರುವ 32 ಕಲ್ಲುಗಳನ್ನ ತಂದು ಹಾಕಿದ್ರು. ತಮಿಳುನಾಡು ಮೂಲದ 20 ಜನ ಮೇಸ್ತ್ರಿಗಳನ್ನ ಕರಿಸಿ ದೇವಸ್ಥಾನ ಕೆಲಸ ಮಾಡಿಸಿದ್ದಾರೆ. ಇನ್ನು ದೇವಸ್ಥಾನ ನಿರ್ಮಾಣಕ್ಕೆ ಕೃಷ್ಣ ನದಿ ನೀರೆ ಬಳಕೆ ಮಾಡಬೇಕು ಅಂತ ದೇವರು ಕನಸಲ್ಲಿ ಹೇಳಿರುವ ಕಾರಣಕ್ಕೆ ಟ್ರಾಕ್ಟರ್ ನ ಟ್ಯಾಂಕರ್ ಗಳಿಂದ ನದಿಗೆ ಹೋಗಿ ನೀರು ತರಲಾಗಿತ್ತು. ಜೊತೆಗೆ ಇಡೀ ಗ್ರಾಮದ ಜನ ಸ್ನಾನ ಮಾಡಿಕೊಂಡು ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಬಂದಿದ್ರು. ಇಡೀ ಗ್ರಾಮದ ಜನ ಮಹಿಳೆಯರು ಮಕ್ಕಳು ಹಿರಿಯರು ಎನ್ನದೆ ಇಡೀ ಗ್ರಾಮದ ಜನ ಬಂದು ತಮಿಳುನಾಡಿನಿಂದ ಬಂದಿದ್ದ ಮೇಸ್ತ್ರಿಗಳಿಗೆ ಸಾಥ್ ನೀಡಿ ಇಡೀ ದೇವಸ್ಥಾನವನ್ನ ಕೇವಲ 24 ಗಂಟೆಗಳಲ್ಲಿ ನಿರ್ಮಾಣ ಮಾಡಿದ್ದಾರೆ.

Advertisment

ಹಾಡು ಹಾಡುತ್ತಿದ್ದ ಮಹಿಳೆಯರು

ಇನ್ನು ದೇವಸ್ಥಾನ ನಿರ್ಮಾಣದ ವೇಳೆ ಯಾರಾದ್ರು ಶೌಚಕ್ಕೆ ಹೋಗಿ ಬಂದರೆ ಮತ್ತೆ ಸ್ನಾನ ಮಾಡಿಕೊಂಡೆ ದೇವಸ್ಥಾನ ನಿರ್ಮಾಣದಲ್ಲಿ ಭಾಗವಹಿಸಬೇಕು. ಮೈಲಿಗೆ ಮೈಯಿಂದ ಯಾರೊಬ್ಬರು ಬಂದು ಸಹ ಕೆಲಸದಲ್ಲಿ ಭಾಗಿಯಾಗಬಾರದು. ಇಡೀ ಗ್ರಾಮದಲ್ಲಿರುವ ಟ್ರಾಕ್ಟರ್ ಗಳನ್ನ ಬಳಕೆ ಮಾಡಿಕೊಂಡು ಕೆಲಸವನ್ನ ಮಾಡಿದ್ದಾರೆ. ಇನ್ನು ಗ್ರಾಮದಲ್ಲಿರುವ ಪ್ರತಿಯೊಂದು ಜಾತಿ ಧರ್ಮದ ಜನ ಭೇದಭಾವವಿಲ್ಲದೆ ಬಂದು ದೇವಸ್ಥಾನದ ನಿರ್ಮಾಣ ಕೆಲಸದಲ್ಲಿ ಭಾಗವಹಿಸಿ ಕೆಲಸ ಮಾಡಿದ್ದಾರೆ. ಕಾಮಗಾರಿ ಮುಗಿದ ಮೇಲೆ ಮಹಿಳೆಯರು ದೇವಸ್ಥಾನ ಹಾಡುಗಳನ್ನ ಹಾಡುತ್ತಿದ್ರು ಜೊತೆಗೆ ಪುರುಷರು ಡೊಳ್ಳು ಬಾರಿಸುವ ಮೂಲಕ ಸಂಭ್ರಮಿಸಿದ್ರು. ಇನ್ನು ಶ್ರಾವಣ ಮಾಸದಲ್ಲಿ ದೇವರ ದೊಡ್ಡ ಗಾತ್ರದ ಹೊಸ ಮೂರ್ತಿಯನ್ನ ತಂದು ಪ್ರತಿಷ್ಠಾಪನೆ ಮಾಡುವ ಸಂಕಲ್ಪ ಜನ ಹೊಂದಿದ್ದಾರೆ.

ಒಟ್ಟಾರೆಯಾಗಿ ಐತಿಹಾಸಿಕ 300 ವರ್ಷಗಳ ಇತಿಹಾಸವುಳ್ಳ ದೇವಸ್ಥಾನಕ್ಕೆ ಕಳೆದ ಮೂರು ವರ್ಷಗಳಿಂದ ಮರು ನಿರ್ಮಾಣ ಮಾಡಬೇಕು ಅಂತ ಗ್ರಾಮಸ್ಥರು ಅಂದುಕೊಂಡಿದ್ರು. ಆದ್ರೆ ಕೊನೆಗೆ ಮೂರು ವರ್ಷಗಳ ಬಳಿಕ ಇಡೀ ಗ್ರಾಮದ ಜನ ಸೇರಿ ಕೇವಲ 24 ಗಂಟೆಗಳಲ್ಲಿ ದೇವಸ್ಥಾನ ನಿರ್ಮಾಣ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment