/newsfirstlive-kannada/media/post_attachments/wp-content/uploads/2025/02/HSN_CAR.jpg)
ಭಾನುವಾರ ಬಂತದ್ರೆ ವಾರ ಮುಗಿಯುತ್ತೆ, ಆದ್ರೆ ಇದೇ ಭಾನುವಾರ ಮುಗಿಯುವುದರ ಇಳಗೆ ಕೆಲವರ ಜೀವವೇ ಅಂತ್ಯ ಕಂಡಿದೆ. ರಾಜ್ಯದ ಹಲವೆಡೆ ನಡೆದ ಭೀಕರ ಅಪಘಾತಗಳು ಭಯಬೀತಿ ಉಂಟು ಮಾಡುವಂತೆ ಇವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ, 7 ಕಾರು ಜಖಂ
ರಾಜ್ಯದಲ್ಲಿ ವಿವಿಧ ಭಾಗದಲ್ಲಿ ಅಪಘಾತಗಳು ಭಯಾನಕವಾಗಿ ನಡೆದಿವೆ. ಎಂದಿನಂತೆ ರಸ್ತೆಗಿಳಿದಿದ್ದವರು ಌಕ್ಸಿಡೆಂಟ್ ಪಾಶಕ್ಕೆ ಸಿಲುಕಿ ಸಾವಿನ ಮನೆ ಬಾಗಿಲು ಬಡಿದಿದ್ದಾರೆ.
ರೋಡ್ ಟರ್ನಿಂಗ್ನಲ್ಲಿ ನಡೀತು ಭೀಕರ ಅಪಘಾತ
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೆಳಗೂರು ಸಂಪ್ಲಿಯ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಟರ್ನಿಂಗ್ನಲ್ಲಿ ಕಾರೊಂದು ಮುಂದಿನಿಂದ ಬರ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನಲ್ಲಿ ಬರುತ್ತಿದ್ದ ಮೂಡಿಗೆರೆಯ ಬಾಳೂರಿನ ಕೃಷ್ಣಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಹಾಸನದ ಆಲೂರು ತಾಲೂಕಿನ ಚೋಲಗೆರೆ ಟೋಲ್ ಬಳಿ ಸರಣಿ ಅಪಘಾತ ಸಂಭವಿಸಿದೆ. ವೀಕೆಂಡ್ ಹಿನ್ನಲೆಯಲ್ಲಿ ವಾಹನಗಳ ಸಂಚಾರ ಹೆಚ್ಚಿತ್ತು ಈ ವೇಳೆ ಟೋಲ್ ಗೇಟ್ ಬಳಿ ವಾಹನಗಳು ಸಾಲಲ್ಲಿ ನಿಂತಿದ್ವು. ಈ ವೇಳೆ ಸ್ಪೀಡಾಗಿ ಬಂದ ಕಾರೊಂದು ಗುದ್ದಿದ್ರಿಂದ ಒಟ್ಟು 7 ಕಾರುಗಳು ಜಖಂ ಆಗಿವೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ:ಭಾರತೀಯ ಸೇನೆಗೆ ಅವಮಾನಿಸಿದ್ರಾ ಬಾಲಿವುಡ್ ನಟಿ..? ಕಪೂರ್ ವಿರುದ್ಧ ತನಿಖೆಗೆ ಆದೇಶಿಸಿದ ನ್ಯಾಯಾಲಯ
ಬೈಕಿಗೆ ಗುದ್ದಿದ ಬುಲೆರೋ ಪಿಕಪ್ ವಾಹನ
ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಆಗಲಕೆರೆ ಗ್ರಾಮದ ಬಳಿ ಬೈಕ್ಗೆ ಬುಲೆರೋ ಪಿಕಪ್ ಗುದ್ದಿದ ಪರಿಣಾಮ, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಜೀವ ಬಿಟ್ಟರು. ಬಿಟ್ಟೇನಹಳ್ಳಿ ವಡ್ಡರಹಟ್ಟಿ ಮೂಲದ 53 ವರ್ಷದ ಶಿವಣ್ಣ ಹಾಗೂ 45 ವರ್ಷದ ನಾಗರಾಜ್ ಕೊನೆಯುಸಿರೆಳೆದಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರದ ಅಂತ್ಯದ ವೇಳೆ ಕೆಲವರ ಪಾಲಿಗೆ ಕರಾಳ ದಿನವಾಗಿದ್ದಂತೂ ಸತ್ಯ. ವಾಹನ ಸವಾರರು ಸ್ವಲ್ಪ ಮುಂಜಾಗೃತೆ ವಹಿಸದ್ರೂ ಮೂರು ಅಪಘಾತಗಳನ್ನ ತಪ್ಪಿಸಬಹುದಿತ್ತು. ಆದ್ರೆ ಅಪಘಾತ ಸಂಭವಿಸಿಬಿಟ್ಟಿದೆ. ಇನ್ನಾದ್ರೂ ರಸ್ತೆಯಲ್ಲಿ ಸಂಚರಿಸೋವಾಗ ಜಾಗೃತೆ ಇದ್ರೆ ಜೀವಕ್ಕೆ ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ