Advertisment

ಕೇರಳದಲ್ಲಿ 100 ಮನೆ ನಿರ್ಮಾಣ.. ಸಿಎಂ ಸಿದ್ದು ಘೋಷಣೆಗೆ ರಾಹುಲ್, ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

author-image
Bheemappa
Updated On
ಕೇರಳದಲ್ಲಿ 100 ಮನೆ ನಿರ್ಮಾಣ.. ಸಿಎಂ ಸಿದ್ದು ಘೋಷಣೆಗೆ ರಾಹುಲ್, ಪ್ರಿಯಾಂಕಾ ಗಾಂಧಿ ಹೇಳಿದ್ದೇನು?
Advertisment
  • ವಯನಾಡಿನ ಭೂಕುಸಿತ ದುರಂತಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ
  • ಇಡೀ ದೇಶದಲ್ಲೇ ಮೊದಲು ಕೇರಳ ನೆರವಿಗೆ ಧಾವಿಸಿದ ಕರ್ನಾಟಕ
  • ಸಿಎಂಗೆ ಧನ್ಯವಾದ ತಿಳಿಸಿದ ಪ್ರಿಯಾಂಕ ಗಾಂಧಿ,‌ ರಾಹುಲ್ ಗಾಂಧಿ

ವಯನಾಡು ಅಕ್ಷರಶಃ ದುರಂತ ಭೂಮಿಯಾಗಿದೆ. ಚೂರಲ್​ಮಾಲ, ಮುಂಡಕ್ಕೈ ಹಾಗೂ ಅಟ್ಟಮಾಲ ಊರುಗಳು ಅಲ್ಲಿ ಇದ್ದವೇ ಎನ್ನುವ ಪ್ರಶ್ನೆ ಮೂಡುವಂತೆ ಭೂಕುಸಿತ ಮಾಡಿದೆ. ಭೀಕರ ದುರಂತದಲ್ಲಿ ಬದುಕುಳಿದವರಿಗೆ ಮುಂದಿನ ಜೀವನ ಹೇಗೆ ಎನ್ನುವ ಪ್ರಶ್ನೆ ಕಣ್ಣ ಮುಂದೆ ಸಿಡಿಲಿನಂತೆ ಬಡಿಯುತ್ತಿದೆ. ಸದ್ಯ ಸಂತ್ರಸ್ಥರ ಕಷ್ಟ ಯಾರಿಗೂ ಬೇಡವಾಗಿದೆ. ಆದರೆ ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು, ನಿಮ್ಮ ಜೊತೆ ನಾವಿದ್ದೇವೆಂದು 100 ಮನೆಗಳನ್ನು ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ.

Advertisment

ಇದನ್ನೂ ಓದಿ: ಬೆಟ್ಟದ ತುತ್ತತುದಿಯಲ್ಲಿದ್ದ ಕುಟುಂಬ.. ದಟ್ಟ ಮಂಜು, ಜಾರುವ ಬಂಡೆಗಳ ಮಧ್ಯೆ ಜೀವ ಉಳಿಸಿಕೊಂಡಿದ್ದೇ ಸಾಹಸ!

ಸದ್ಯ ಈ ಸಂಬಂಧ ತಮ್ಮ ಎಕ್ಸ್ ಅಕೌಂಟ್​ನಲ್ಲಿ ಪೋಸ್ಟ್​ ಶೇರ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ವಯನಾಡಿನಲ್ಲಿ ಭೂಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ಕರ್ನಾಟಕ ಸರ್ಕಾರ ನಿಂತಿದೆ. ಮಾನವೀಯ ನೆಲೆಯಲ್ಲಿ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ಕರ್ನಾಟಕ ಸರ್ಕಾರ ಮನೆ ನಿರ್ಮಾಣ ಮಾಡಿಕೊಡಲಿದೆ. ಈ ಕುರಿತು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಭರವಸೆ ನೀಡಲಾಗಿದೆ. ಈಗ ಅವರಿಗೆ ಕಷ್ಟ ಎದುರಾಗಿದ್ದು ಇಂತಹ ಸಂದರ್ಭದಲ್ಲಿ ಅವರ ಜೊತೆ ನಿಂತು ಭರವಸೆ ಮರಳಿ ಕಟ್ಟೋಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಂಟರ್’ನೆಟ್’ನಲ್ಲಿ ಅತಿಹೆಚ್ಚು ಸರ್ಚ್‌ಗೆ ಒಳಗಾದ ಮನು ಭಾಕರ್​​ ಜಾತಿ; ಇದೆಂಥಾ ಮನಸ್ಥಿತಿ!

Advertisment

publive-image

ಕೇರಳದ ನೆರವಿಗೆ ಧಾವಿಸಿದ ಮೊದಲ ರಾಜ್ಯ ಕರ್ನಾಟಕ

ಇಡೀ ದೇಶದಲ್ಲೇ ಕರ್ನಾಟಕ ಸರ್ಕಾರ ಮೊದಲು ಕೇರಳದ ನೆರವಿಗೆ ಧಾವಿಸಿದ್ದರಿಂದ ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ, ಕೈ ನಾಯಕಿ​ ಪ್ರಿಯಾಂಕಾ ಗಾಂಧಿ ಧನ್ಯವಾದ ತಿಳಿಸಿದ್ದಾರೆ. ಕೇರಳ ಜನರ ಸಂಕಷ್ಟಕ್ಕೆ ಸ್ಪಂದಿಸಿದ ನಿಮ್ಮ ಸ್ಪಂದನೆಗೆ ನಮನ. 100 ಮನೆಗಳನ್ನು ಕಟ್ಟಿಕೊಡುವ ಭರವಸೆ ನೀಡಿದ್ದಕ್ಕೆ ಸಿಎಂ ಹಾಗೂ ಕರ್ನಾಟಕದ ಜನರಿಗೆ ಕಾಂಗ್ರೆಸ್​ ನಾಯಕರು ಎಕ್ಸ್​ ಅಕೌಂಟ್​ನಲ್ಲಿ ಧನ್ಯವಾದ ತಿಳಿಸಿ ಪೋಸ್ಟ್ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ಇನ್ನು ಬದುಕಿದವರು ಯಾರು ಸಿಗಲ್ಲ.. ನಿಮ್ಮವರ ಆಸೆ ಬಿಟ್ಟು ಬಿಡಿ; ಕೇರಳ ಸಿಎಂ ಶಾಕಿಂಗ್‌ ಹೇಳಿಕೆ

Advertisment


">August 3, 2024

ಕೇರಳ ಸರ್ಕಾರದಿಂದ ಟೌನ್‌ಶಿಪ್ ನಿರ್ಮಾಣ 
ಭೂಕುಸಿತದ ಸಂತ್ರಸ್ತರಿಗೆ ಟೌನ್​ಶಿಪ್ ನಿರ್ಮಾಣ ಮಾಡಲು ಕೇರಳ ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬಂಧ ಮಾತನಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ಮನೆ ಕಳೆದುಕೊಂಡ ಜನರಿಗೆ ಟೌನ್​​ಷಿಪ್ ನಿರ್ಮಿಸಲು ನಿರ್ಧಾರ ಮಾಡಿದ್ದೇವೆ. ಇದಕ್ಕೆ ದೊಡ್ಡ ಶ್ರಮ, ದಕ್ಷ ಪ್ಲಾನಿಂಗ್​ ಬೇಕಾಗಿದೆ. ಮನೆಗಳೆಲ್ಲ ಕೊಚ್ಚಿ ಹೋಗಿವೆ. ಹೀಗಾಗಿ ಪರ್ಯಾಯ ಸೇಫ್​ ಟೌನ್​ಷಿಪ್​ ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ.


">August 3, 2024

ಟೌನ್‌ಶಿಪ್​ನಲ್ಲಿ ಜನರ ಪುನರ್ ವಸತಿಗಾಗಿ ಎಲ್ಲಾ ಸೌಲಭ್ಯ ಬಳಸಲಾಗುವುದು. ವಿದ್ಯಾರ್ಥಿಗಳ ಶಿಕ್ಷಣ ಕೂಡ ಇದು ಒಳಗೊಂಡಿದೆ. ಈಗಾಗಲೇ ಸಿಎಂ ರಿಲೀಫ್​ ಫಂಡ್​ಗೆ ವಿಶ್ವಾದ್ಯಂತ ಇರೋ ಜನ ನೆರವು ನೀಡುತ್ತಿದ್ದಾರೆ. ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ ಎಂದು ಕೇರಳ ಸಿಎಂ ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment