newsfirstkannada.com

BREAKING NEWS: ಕರ್ನಾಟಕ ಲೋಕಸಭಾ ಚುನಾವಣೆಗೆ ದಿನಾಂಕ ಫಿಕ್ಸ್​; ವೋಟಿಂಗ್​ ಯಾವಾಗ?

Share :

Published March 16, 2024 at 3:58pm

Update March 16, 2024 at 5:00pm

    ಈಗಿನಿಂದಲೇ ಚುನಾವಣಾ ಹಬ್ಬಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ EC

    ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ

    ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ

ಪ್ರಜಾಪ್ರಭುತ್ವದ ಹಬ್ಬಕ್ಕೆ ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡಿ ಷರಾ ಬರೆದಿದೆ. ಈ ಮೂಲಕ ಇಂದಿನಿಂದ ಲೋಕಸಭೆ ಚುನಾವಣೆಯ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ.  ಮೊದಲ ಹಂತದ ಮತದಾನ ಏಪ್ರಿಲ್​ 19ನೇ ತಾರೀಕು ನಡೆಯಲಿದ್ದು, ಜೂನ್​​ 4ರಂದು ಫಲಿತಾಂಶ ಪ್ರಕಟವಾಗಲಿದೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ.

ರಾಜ್ಯದಲ್ಲಿ ಯಾವಾಗ ಚುನಾವಣೆ..?

  • ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ
  • ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ
  • ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ
  • ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ
  • ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ

ದೇಶದಲ್ಲಿ ಯಾವ್ಯಾವ ಹಂತದಲ್ಲಿ ಚುನಾವಣೆ..?

  • ಮೊದಲ ಹಂತದ ಚುನಾವಣೆ ಏಪ್ರಿಲ್ 19ಕ್ಕೆ ನಡೆಯಲಿದೆ
  • ಎರಡನೇ ಹಂತದ ಚುನಾವಣೆ ಏಪ್ರಿಲ್ 26ಕ್ಕೆ ನಡೆಯಲಿದೆ
  • ಮೂರನೇ ಹಂತದ ಚುನಾವಣೆ ಮೇ 7 ರಂದು ನಡೆಯಲಿದೆ
  • ನಾಲ್ಕನೇ ಹಂತದ ಚುನಾವಣೆ ಮೇ 13 ರಂದು ನಡೆಯಲಿದೆ
  • ಐದನೇ ಹಂತದ ಚುನಾವಣೆ ಮೇ 20 ರಂದು ನಡೆಯಲಿದೆ
  • ಆರನೇ ಹಂತದ ಚುನಾವಣೆ ಮೇ 25 ರಂದು ನಡೆಯಲಿದೆ
  • ಏಳನೇ ಹಂತದ ಚುನಾವಣೆ ಜೂನ್ 1 ರಂದು ನಡೆಯಲಿದೆ

ರಾಜ್ಯದ 28 ಲೋಕಸಭೆ ಕ್ಷೇತ್ರಗಳು
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ (ಎಸ್‌ಸಿ), ಗುಲ್ಬರ್ಗಾ (ಎಸ್‌ಸಿ), ರಾಯಚೂರು (ಎಸ್‌ಟಿ), ಬೀದರ್, ಕೊಪ್ಪಳ, ಬಳ್ಳಾರಿ (ಎಸ್‌ಟಿ), ಹಾವೇರಿ, ಧಾರವಾಡ, ಉತ್ತರ ಕನ್ನಡ (ಕೇನರಾ), ದಾವಣಗೆರೆ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ (ಎಸ್‌ಸಿ)

ದೇಶದ ಆಡಳಿತದ ಚುಕ್ಕಾಣಿ ಯಾರಿಗೆ..?

ದೇಶದ ಆಡಳಿತದ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಆಡಳಿತರೂಢ ಎನ್​​ಡಿಎ ಒಕ್ಕೂಟ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದೆ. ಇತ್ತ ವಿರೋಧ ಪಕ್ಷಗಳ ಒಕ್ಕೂಟ, INDIA ಕೂಡ ದೇಶದಲ್ಲಿ ಮತ್ತೆ ಆಡಳಿತ ನಡೆಸುವ ಕನಸು ಕಾಣುತ್ತಿದೆ. ಪ್ರತಿಷ್ಠೆ ಮತ್ತು ಜಿದ್ದಾಜಿದ್ದಿನ ಈ ಹೋರಾಟಕ್ಕೆ ಇಂದು ಚುನಾವಣಾ ಆಯೋಗ ದಿನವನ್ನು ಗೊತ್ತು ಮಾಡಿದೆ. ಅದರಂತೆ ಮೇ… ರಂದು ‘ಭಾರತ ಸರ್ಕಾರ’ ನಡೆಸೋರು ಯಾರು ಎಂದು ಅಧಿಕೃತವಾಗಿ ತಿಳಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING NEWS: ಕರ್ನಾಟಕ ಲೋಕಸಭಾ ಚುನಾವಣೆಗೆ ದಿನಾಂಕ ಫಿಕ್ಸ್​; ವೋಟಿಂಗ್​ ಯಾವಾಗ?

https://newsfirstlive.com/wp-content/uploads/2023/11/mp-voting-1.jpg

Load More