ರಾಜ್ಯದಲ್ಲಿ ನಾಳೆಯಿಂದ 4 ದಿನ ಭರ್ಜರಿ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

author-image
Ganesh Nachikethu
Updated On
Rain Alert: ಇಂದು ಈ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ.. ಯೆಲ್ಲೋ ಅಲರ್ಟ್ ಘೋಷಣೆ
Advertisment
  • 4 ದಿನ ರಾಜ್ಯದಲ್ಲಿ ಗುಡುಗು ಸಹಿತ ಭಾರೀ ಮಳೆ!
  • ರಾಜ್ಯ ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?
  • ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಮಳೆಯಾಗಲಿದೆ?

ಬೆಂಗಳೂರು: ರಾಜ್ಯದ ಹಲವೆಡೆ ಮುಂದಿನ 2 ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಾರ್ಚ್​​ 25 ಮತ್ತು 26ನೇ ತಾರೀಕಿನಂದು ಧಾರಾಕಾರ ಮಳೆಯಾದರೆ, 27 ಮತ್ತು 28ರಂದು ಸಾಧಾರಣ ಹನಿಮಳೆ ಬೀಳುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.

publive-image

ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಅತೀ ಹೆಚ್ಚು ಮಳೆಯಾಗಲಿದ್ದು, ಜನ ಎಚ್ಚರಿಕೆಯಿಂದ ಇರಬೇಕು. ರಾಮನಗರದ ಮಾಗಡಿಯಲ್ಲಿ ಅತ್ಯಧಿಕ ಮಳೆ ಆಗಲಿದೆ.​ ಬೆಂಗಳೂರು, ಚಿಂತಾಮಣಿ ಮತ್ತು ವಿರಾಜಪೇಟೆ, ದೇವನಹಳ್ಳಿ ಕಡೆ 5 ಸೆಂಟಿ ಮೀಟರ್​​​ ಮಳೆ ಬೀಳಲಿದೆ. ಕರಾವಳಿ ಕರ್ನಾಟಕದಲ್ಲೂ ಮುಂದಿನ ಒಂದು ವಾರ ಗುಡುಗು ಸಹಿತ ಜೋರು ಮಳೆ ಆಗಲಿದೆ ಎಂದು ಅಲರ್ಟ್ ನೀಡಲಾಗಿದೆ.

ಭಾರೀ ಬಿಸಿಲಿನ ಬೇಗೆಗೆ ಬೇಸತ್ತು ಹೋಗಿದ್ದ ಜನರಿಗೆ ಇತ್ತೀಚೆಗಷ್ಟೇ ಮಳೆ ತಂಪು ಮಾಡಿತ್ತು. ಈಗ ಮುಂದಿನ 4 ದಿನಗಳ ಭರ್ಜರಿ ಮಳೆ ಬೀಳಲಿದೆ. ಹೀಗಾಗಿ ಮನೆಯಿಂದ ಹೊರಬರೋ ಮುನ್ನ ಎಚ್ಚರದಿಂದ ಇರಿ ಎಂದಿದೆ ಹವಾಮಾನ ಇಲಾಖೆ.

ಇದನ್ನೂ ಓದಿ:ನಿಮ್ಮ ಮೊಬೈಲ್​​ನಲ್ಲಿ ಈ App ಇದ್ರೆ ಕೂಡಲೇ Uninstall ಮಾಡಿ; ಕೇಂದ್ರ ಸರ್ಕಾರದಿಂದ ಖಡಕ್​ ಎಚ್ಚರಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment