ಮುಂದಿನ ದಿನಗಳಲ್ಲಿ ವ್ಯಾಪಕ ಮಳೆ; ಹವಾಮಾನ ಇಲಾಖೆಯಿಂದ ಖಡಕ್​ ಎಚ್ಚರಿಕೆ; ರೈತರು ಓದಲೇಬೇಕಾದ ಸ್ಟೋರಿ

author-image
Ganesh Nachikethu
Updated On
Rain Alert: ಇಂದು ಈ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ.. ಯೆಲ್ಲೋ ಅಲರ್ಟ್ ಘೋಷಣೆ
Advertisment
  • ಫೆಂಗಲ್‌ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿದ ಇಡೀ ಕರ್ನಾಟಕ
  • ಮುಂದಿನ 2 ವಾರಗಳಲ್ಲಿ ವಾಯುಭಾರ ಕುಸಿತವಾಗಿ ಭಾರೀ ಮಳೆ
  • ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು..?

ಬೆಂಗಳೂರು: ಕಳೆದೊಂದು ವಾರದಿಂದ ಫೆಂಗಲ್‌ ಚಂಡಮಾರುತದ ಅಬ್ಬರಕ್ಕೆ ಇಡೀ ಕರ್ನಾಟಕ ತತ್ತರಿಸಿ ಹೋಗಿತ್ತು. ಈ ಬೆನ್ನಲ್ಲೇ ಕರ್ನಾಟಕದ ಜನರಿಗೆ ಮತ್ತೊಂದು ಕಹಿಸುದ್ದಿ ಇದೆ. ಮುಂದಿನ 2 ವಾರಗಳಲ್ಲಿ ವಾಯುಭಾರ ಕುಸಿತವಾಗಿ ಭಾರೀ ಮಳೆಯಾಗಲಿ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾತಾಡಿರೋ ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ಅವರು, ಮುಂದಿನ 10 ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ 2 ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಇದರ ಪರಿಣಾಮ ರಾಜ್ಯದಲ್ಲೂ ಭರ್ಜರಿ ಮಳೆಯಾಗಲಿದೆ ಎಂದರು.

ತಮಿಳುನಾಡಿನಿಂದ ಕರ್ನಾಟಕಕ್ಕೆ ಎಂಟ್ರಿ ಕೊಟ್ಟ ಫೆಂಗಲ್‌ ಚಂಡಮಾರುತ ಅರಬ್ಬಿಯತ್ತ ಸಾಗಿದೆ. ಕಳೆದ ಒಂದು ವಾರವಿಡೀ ಕರ್ನಾಟಕದ ಜನ ಮಳೆ, ಗಾಳಿ, ಚಳಿಗೆ ತತ್ತರಿಸಿ ಹೋಗಿದ್ದಾರೆ. ಈ ಫೆಂಗಲ್ ಚಂಡಮಾರುತದದಿಂದ ಸುಧಾರಿಸಿಕೊಳ್ಳುತ್ತಿರೋ ಹೊತ್ತಲ್ಲೇ ಮತ್ತೆರಡು ಸೈಕ್ಲೋನ್‌ ಸೃಷ್ಟಿಯಾಗುವ ಲಕ್ಷಣ ಕಂಡುಬಂದಿದೆ.

ಕರ್ನಾಟಕದಲ್ಲಿ ಯಾವಾಗ ಮಳೆ?

ಬಂಗಾಳಕೊಲ್ಲಿಯಲ್ಲಿ ಮೊದಲ ವಾಯುಭಾರ ಕುಸಿತ ಉಂಟಾಗಲಿದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ 14 ಮತ್ತು 15 ರಂದು ಮಳೆಯಾಗಲಿದೆ. 2ನೇ ವಾಯುಭಾರ ಕುಸಿತ ಡಿಸೆಂಬರ್‌ 16ಕ್ಕೆ ಉಂಟಾಗಲಿದ್ದು, ಡಿಸೆಂಬರ್ 17 ಮತ್ತು 18ಕ್ಕೆ ಜೋರು ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಹೀಗಾಗಿ ಕರ್ನಾಟಕದ ಜನ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.

ರೈತರಿಗೆ ಎಚ್ಚರಿಕೆ

ಕರ್ನಾಟಕದಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಗಳು ಕಟಾವಿಗೆ ಬಂದಿವೆ. ವಾಯುಭಾರ ಕುಸಿತವಾದರೆ ಜೋರು ಮಳೆಯಾಗಿ ಬೆಳೆಯ ಮೇಲೆ ಪರಿಣಾಮ ಬೀರಲಿದೆ. ರೈತರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಇದನ್ನೂ ಓದಿ:‘ಸಾಯಿಸುತ್ತೇವೆ ಹುಷಾರ್​​’- ಡಿಸಿಎಂ ನಟ ಪವನ್​ ಕಲ್ಯಾಣ್​ಗೆ ಜೀವ ಬೆದರಿಕೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment