ಕರ್ನಾಟಕದ ಈ ಜಿಲ್ಲೆಗಳಲ್ಲಿ ವರುಣನ ಆರ್ಭಟ; ಇಂದಿನಿಂದ ಎಷ್ಟು ದಿನಗಳ ಕಾಲ ಮಳೆ ಬೀಳಲಿದೆ?

author-image
Ganesh Nachikethu
Updated On
ಇಂದು, ನಾಳೆ ರಾಜ್ಯದಲ್ಲಿ ವರುಣನ ಆರ್ಭಟ; ಈ ಜಿಲ್ಲೆಗಳಲ್ಲಿ ಭಾರೀ ಮಳೆ..!
Advertisment
  • ಕರ್ನಾಟಕಕ್ಕೂ ತಟ್ಟಿದ ಫೆಂಗಲ್ ಚಂಡಮಾರುತದ ಬಿಸಿ
  • ರಾಜ್ಯದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ
  • ಭಾರತೀಯ ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ!

ಬೆಂಗಳೂರು: ತಮಿಳುನಾಡಿನ ಫೆಂಗಲ್ ಚಂಡಮಾರುತದ ಬಿಸಿ ಕರ್ನಾಟಕಕ್ಕೂ ತಟ್ಟಿದೆ. ಮುಂದಿನ ಮೂರು ದಿನಗಳ ಕಾಲ ಭರ್ಜರಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕಳೆದ ಎರಡು ದಿನಗಳಿಂದ ಬೆಂಗಳೂರಲ್ಲಿ ಬಿಸಿಲೇ ಇಲ್ಲ. ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಸಿಲಿಕಾನ್ ಸಿಟಿ ಜನರಿಗೆ ಮತ್ತಷ್ಟು ಕಾಟ ಎದುರಾಗಲಿದೆ. ರಾಜ್ಯದ ಕೆಲವು ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ ಹವಾಮಾನ ಇಲಾಖೆ ನೀಡಿದೆ.

ಎಲ್ಲೆಲ್ಲಿ ಮಳೆ?

ಇನ್ನು, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮಂಡ್ಯ, ಕೋಲಾರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಂಭವವಿದೆ. ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡು ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ಕೊಟ್ಟಿದೆ.

ಇಂದು ಬೆಳಗ್ಗೆಯಿಂದ ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭರ್ಜರಿ ಮಳೆ ಸುರಿಯುತ್ತಿದ್ದು, ಕಿಲೋ ಮೀಟರ್​​ ಗಟ್ಟಲೇ ಜಾಮ್​ ಆಗಿದೆ. ಭಾರೀ ಟ್ರಾಫಿಕ್​​ ಜಾಮ್​ಗೆ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ.

ಕೆ.ಆರ್​ ಮಾರ್ಕೆಟ್​​, ಕಾರ್ಪೋರೇಷನ್​​ ಸರ್ಕಲ್​​, ಮೆಜೆಸ್ಟಿಕ್, ಓಕಳಿಪುರಂ, ಮಾಗಡಿ ರೋಡ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇಷ್ಟೇ ಅಲ್ಲ ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ, ಮೈಸೂರು ರೋಡ್​, ಜಯನಗರ, ಲಾಲ್​ ಬಾಗ್​ ರಸ್ತೆ, ಎಲೆಕ್ಟ್ರಾನಿಕ್​ ಸಿಟಿ ಸುತ್ತಲೂ ಟ್ರಾಫಿಕ್​ ಜಾಮ್​ ಹೆಚ್ಚಾಗಿದೆ.

ನಿನ್ನೆ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ?

ಭಾನುವಾರ ಚಾಮರಾಜನಗರದಲ್ಲಿ 89 ಎಂಎಂ, ರಾಮನಗರ 69 ಎಂಎಂ, ಮಂಡ್ಯ 41 ಎಂಎಂ, ಬೆಂಗಳೂರು ಗ್ರಾಮಾಂತರ 38 ಎಂಎಂ, ಕೋಲಾರ 37 ಎಂಎಂ, ಮೈಸೂರು 36 ಎಂಎಂ, ತುಮಕೂರು 34 ಎಂಎಂ, ಚಿಕ್ಕಬಳ್ಳಾಪುರ 38 ಎಂಎಂ, ಕೊಡಗು 26 ಎಂಎಂ, ಬೆಂಗಳೂರಲ್ಲಿ 22 ಎಂಎ ಮಳೆ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಭರ್ಜರಿ ಮಳೆ; ಕಿ.ಮೀ ಗಟ್ಟಲೇ ಜಾಮ್​​​; ಈ ಏರಿಯಾಗಳಲ್ಲಿ ಓಡಾಡೋ ಜನ ಎಚ್ಚರ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment