/newsfirstlive-kannada/media/post_attachments/wp-content/uploads/2025/01/MAYANKA_KARUN.jpg)
ದೇಶಿ ಕ್ರಿಕೆಟ್​ನ ಏಕದಿನ ರಾಜ ಯಾರು, ಈ ಪ್ರಶ್ನೆಗೆ ಇವತ್ತು ಉತ್ತರ ಸಿಗಲಿದೆ. ಚಾಂಪಿಯನ್ ಪಟ್ಟದ ಮೇಲೆ ಮಯಾಂಕ್ ನೇತೃತ್ವದ ಕರ್ನಾಟಕ, ಕನ್ನಡಿಗ ಕರುಣ್ ನಾಯಕತ್ವದ ವಿದರ್ಭ ಕಣ್ಣಿಟ್ಟಿದೆ. ಆದರೆ ಇದು ಕರ್ನಾಟಕ ವರ್ಸಸ್ ವಿದರ್ಭ ನಡುವಿನ ಫೈನಲ್ ಫೈಟ್ ಜೊತೆಗೆ ಕರ್ನಾಟಕ ವರ್ಸಸ್ ಕನ್ನಡಿಗನ ಫೈಟ್ ಆಗಿದೆ.
ಕರ್ನಾಟಕ, ವಿದರ್ಭ ಅಲ್ಲ.. ಕರ್ನಾಟಕ V/S ಕನ್ನಡಿಗ ಫೈಟ್
ವಿಜಯ್​ ಹಜಾರೆ ಟೂರ್ನಿ ಫೈನಲ್​ ಫೈಟ್​ಗೆ ಕೌಂಟ್​ಡೌನ್​ ಶುರುವಾಗಿದೆ. ಹೈವೋಲ್ಟೇಜ್​ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕರ್ನಾಟಕ, ವಿದರ್ಭ ತಂಡಗಳು ಮುಖಾಮುಖಿ ಆಗ್ತಿದೆ. ಉಭಯ ತಂಡಗಳ ಹೋರಾಟಕ್ಕೆ ವಡೋದರಾದ ಕೋಟಂಬಿ ಸ್ಟೇಡಿಯಂ ವೇದಿಕೆ ಆಗುತ್ತಿದ್ದು, ಈ ಹೈವೋಲ್ಟೇಜ್ ಫೈನಲ್​​ನತ್ತ ಎಲ್ಲರ ಚಿತ್ತ ನೆಟ್ಟಿದೆ.
/newsfirstlive-kannada/media/post_attachments/wp-content/uploads/2025/01/MAYANK-AND-KARUN.jpg)
ಮಯಾಂಕ್ ಅಗರ್ವಾಲ್ ನೇತತ್ವದ ಕರ್ನಾಟಕ 5ನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಕನಸು ಕಾಣುತ್ತಿದ್ರೆ, ಅತ್ತ ಮೊದಲ ಬಾರಿಗೆ ಫೈನಲ್ಸ್​ಗೇರಿರುವ ಕನ್ನಡಿಗ ಕರುಣ್ ನಾಯರ್ ನೇತೃತ್ವದ ವಿದರ್ಭ ಟ್ರೋಫಿ ಮುತ್ತಿಡುವ ಕನಸು ಲೆಕ್ಕಾಚಾರದಲ್ಲಿದೆ. ಹೀಗಾಗಿ ಕರ್ನಾಟಕ ವರ್ಸಸ್ ಕನ್ನಡಿಗನ ಸವಾಲ್ ಆಗಿರುವ ಫೈನಲ್ಸ್​ನಲ್ಲಿ, ಯಾರು ಗೆಲ್ಲುತ್ತಾರೆ ಅನ್ನುವ ಕುತೂಹಲ ಮನೆ ಮಾಡಿದೆ.
ವಿಜಯ್​ ಹಜಾರೆ ಫೈನಲ್ಸ್​ನಲ್ಲಿ ಸ್ನೇಹಿತರ ದಂಗಲ್..!
ವಿಜಯ್ ಹಜಾರೆ ಟ್ರೋಫಿ ಕೇವಲ ಕರ್ನಾಟಕ ವರ್ಸಸ್ ಕರುಣ್ ದಂಗಲ್ ಮಾತ್ರವಲ್ಲ. ಸ್ನೇಹಿತರ ನಡುವಿನ ದಂಗಲ್​ ಅಂತಾನೇ ಬಿಂಬಿತವಾಗಿದೆ. ಯಾಕಂದ್ರೆ, ದಶಕಗಳ ಕಾಲ ಕರ್ನಾಟಕ ಪರ ಆಡಿರುವ ಈ ಇಬ್ಬರು, ನಾಯಕರಾಗಿ ಮಾತ್ರವೇ ಕಣಕ್ಕಿಳಿತ್ತಿಲ್ಲ. ಟೂರ್ನಿಯ ಟಾಪ್ ರನ್ ಸ್ಕೋರರ್​​​ಗಳಾಗಿರುವ ಇವರು, ಫೈನಲ್ಸ್​ನ ರನ್​ಭೂಮಿಯಲ್ಲಿ ರನ್ ವಾರ್ ನಡೆಸೋ ಉತ್ಸಾಹದಲ್ಲಿದ್ದಾರೆ.
ಪ್ರಸಕ್ತ ವಿಜಯ್ ಹಜಾರೆಯ ಸಾಧನೆ
- ಕರುಣ್​​ ನಾಯರ್​- ಪಂದ್ಯ 08, ರನ್ 752, 01 ಅರ್ಧ ಶತಕ, 5 ಸೆಂಚುರಿ, ಸ್ಟ್ರೈಕ್​ರೇಟ್ 125.96 ಇದೆ.
- ಮಯಾಂಕ್- ಪಂದ್ಯ 09, ರನ್ 619, 01 ಅರ್ಧ ಶತಕ, 4 ಸೆಂಚುರಿ, ಸ್ಟ್ರೈಕ್​ರೇಟ್ 109.17 ಇದೆ.
ಹೀಗೆ ಟೂರ್ನಿಯುದ್ದಕ್ಕೂ ರನ್ ಶಿಖರ ಕಟ್ಟಿರುವ ಈ ಸ್ನೇಹಿತರ, ಕಾಳಗ ನೋಡಲು ಫ್ಯಾನ್ಸ್​ ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಾಗಿ ಸ್ನೇಹಿತರ ಫೈಟ್​ ಆಘೀ ಬಿಂಬಿತವಾಗಿರೋ ಫೈನಲ್ಸ್​ನಲ್ಲಿ ಯಾರ ಕೈ ಮೇಲಾಗುತ್ತೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದೆ.
ಫೈನಲ್ಸ್​ನಲ್ಲಿ ಯಾರ್​​ ಯಾರಿಗೆ ಕಲಿಸ್ತಾರೆ ತಕ್ಕ ಪಾಠ..?
ಕರ್ನಾಟಕ ಹಾಗೂ ಕರುಣ್​​​ ನಾಯರ್​​ಗೆ, ಫೈನಲ್ಸ್ ನಿಜಕ್ಕೂ ಸೇಡಿನ ಸಮರ. ಯಾಕಂದ್ರೆ, 2024 ರಣಜಿ ಕ್ವಾಟರ್ಸ್​ ಫೈನಲ್​ನಲ್ಲಿ ಕರುಣ್, 90 ರನ್ ಸಿಡಿಸಿ​ ಕರ್ನಾಟಕ ಪಾಲಿಗೆ ವಿಲನ್ ಆಗಿದ್ದರು. ಹೀಗಾಗಿ ರಣಜಿ ಸೋಲಿಗೆ ಮಯಾಂಕ್ ನೇತೃತ್ವದ ಕರ್ನಾಟಕ ಸೇಡುತೀರಿಸಿಕೊಳ್ಳಲು ಕಾದಿದ್ರೆ. ಇತ್ತ ಕರುಣ್ ನಾಯರ್​, ವಿದರ್ಭಕ್ಕೆ ವಲಸೆ ಹೋಗುವಂತೆ ಮಾಡಿದ್ದ ತವರು ತಂಡಕ್ಕೆ ಮತ್ತೊಮ್ಮೆ ತಕ್ಕ ಪಾಠ ಕಲಿಸುವ ಕನಸು ಕಾಣ್ತಿದ್ದಾರೆ. ಆದ್ರೆ, ಈ ಸಲ ಕರುಣ್ ಕನಸು ನನಸಾಗೋದು ನಿಜಕ್ಕೂ ಕಷ್ಟ.
ಇದನ್ನೂ ಓದಿ: ರಜನಿಕಾಂತ್ ಶಾಲಾ ದಿನಗಳು ಹೇಗಿದ್ದವು..? ಬಾಲ್ಯದ ದಿನಗಳನ್ನು ಕನ್ನಡದಲ್ಲೇ ನೆನಪಿಸಿಕೊಂಡ ತಲೈವಾ
/newsfirstlive-kannada/media/post_attachments/wp-content/uploads/2024/08/karun_nair-1.jpg)
ಕರ್ನಾಟಕಕ್ಕಿದೆ ಸ್ಟಾರ್​ ಆಟಗಾರರ ಬಲ.!
ಮಯಾಂಕ್ ಜೊತೆ ದೇವದತ್ ಪಡಿಕ್ಕಲ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆರ್.ಸ್ಮರಣ್, ಮನೋಜ್ ಬಾಂಡಗೆ, ಅಭಿನವ್ ಮನೋಹರ್​ರಂತ ಬಿಗ್ ಹಿಟ್ಟರ್​ಗಳ ಬಲ ಇದೆ. ಮತ್ತೊಂದೆಡೆ ರನ್​ಗೆ ಕಡಿವಾಣ ಹಾಕಬಲ್ಲ ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್, ವೇಗಿಗಳಾದ ಪ್ರಸಿದ್ಧ ಕೃಷ್ಣ, ಅಭಿಲಾಷ್ ಶೆಟ್ಟಿ, ವಾಸುಕಿ ಕೌಶಿಕ್​ರಂಥ ವಿಕೆಟ್ ಟೇಕರ್ಸ್ ಇದ್ದಾರೆ. ಹೀಗಾಗಿ ಕರ್ನಾಟಕ ಸಂಘಟಿತ ಆಟವಾಡಿದ್ರೆ, ಚಾಂಪಿಯನ್ ಪಟ್ಟಕ್ಕೇರೋದ್ರಲ್ಲಿ ಅನುಮಾನವೇ ಇಲ್ಲ.
ವಿಜಯ ಹಜಾರೆಯಲ್ಲಿ ಸೋಲಿಲ್ಲದ ಸರದಾರನಾಗಿ ಫೈನಲ್​​ಗೇರಿರುವ ವಿದರ್ಭ, ಮತ್ತೊಂದು ವಿಜಯದೊಂದಿಗೆ ವಿಜಯ ಹಜಾರೆ ಧಕ್ಕಿಸಿಕೊಳ್ಳುವ ಲೆಕ್ಕಚಾರದಲ್ಲಿದೆ. ಇತ್ತ ಕರ್ನಾಟಕ, 5 ವರ್ಷಗಳ ಬಳಿಕ 5ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿದೆ. ಈ ಕನಸು ನನಸಾಗಲಿ ಅನ್ನೋದೆ ನಮ್ಮಲ್ಲರ ಆಶಯ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us