/newsfirstlive-kannada/media/post_attachments/wp-content/uploads/2023/12/New-year-1.jpg)
ಬೆಂಗಳೂರು: 2025ರ ಹೊಸ ವರ್ಷ ಪ್ರಾರಂಭವಾಗಿದೆ. ಇಡೀ ರಾಜ್ಯಾದ್ಯಂತ ನ್ಯೂ ಇಯರ್ ಸೆಲಬ್ರೇಷನ್ ನಡೆಯುತ್ತಿದ್ದು, ರಂಗು ರಂಗಿನ ಬೆಳಕಿನ ಮೂಲಕ ಬರಮಾಡಿಕೊಳ್ಳಲಾಗಿದೆ.
ಇಡೀ ರಾಜ್ಯಾದ್ಯಂತ ಕನ್ನಡಿಗರು ಕೇಕ್ ಕತ್ತರಿಸಿ ಪರಸ್ಪರ ಹಂಚಿಕೊಳ್ಳುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಕೇವಲ ಬೆಂಗಳೂರು ಮಾತ್ರವಲ್ಲ ರಾಷ್ಟ್ರ ರಾಜಧಾನಿಯ ಇಂಡಿಯಾ ಗೇಟ್ ವೇ ಬಳಿ ಕೂಡ ಹೊಸ ವರ್ಷಕ್ಕೆ ತ್ರಿವರ್ಣ ಧ್ವಜ ಹಾರಿಸಿದರು.
ಎಂಜಿ ರೋಡ್ನಲ್ಲಿ ಸೆಲಬ್ರೇಷನ್
ಇನ್ನು ಬೆಂಗಳೂರಿನ ಬ್ರಿಗೇಡ್, ಎಂಜಿ ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ರಾಜ್ಯದ ಜನತೆ 2025ರ ಅದ್ಧೂರಿ ಸಂಭ್ರಮಾಚರಣೆಯಲ್ಲಿ ತೊಡಗುವ ಮೂಲಕ ಸ್ವಾಗತಿಸಿದರು. ಮೈಸೂರು, ಮಂಗಳೂರು, ಕೊಡಗು, ಹುಬ್ಬಳ್ಳಿಯಲ್ಲೂ ನ್ಯೂ ಇಯರ್ ಸೆಲಬ್ರೇಷನ್ ಮನೆ ಮಾಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ