/newsfirstlive-kannada/media/post_attachments/wp-content/uploads/2024/05/Heavy-Rains-1.jpg)
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದಿಂದ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಧಾರಾಕಾರ ಮಳೆಯಾಗ್ತಿದೆ. ಸೈಕ್ಲೋನ್ ಎಫೆಕ್ಟ್ ಕರ್ನಾಟಕದ ಮೇಲೂ ಪರಿಣಾಮ ಬೀರಿದ್ದು ಮೋಡ ಆವರಿಸಿದೆ.
ಇದು ಚಳಿಗಾಲದ ಮಳೆ. ಈಗಾಗಲೇ ಚಳಿಯ ಹೊಡೆತಕ್ಕೆ ಜನ ತತ್ತರಿಸಿದ್ದು ಮಳೆರಾಯ ಕೂಡ ವರಸೆ ತೋರಿಸ್ತಿದ್ದಾನೆ. ಮೋಡಕವಿದ ವಾತಾವರಣ. ತುಂತುರು ಮಳೆಯಿಂದ ಚಳಿ ಹೆಚ್ಚಿದೆ. ವಿಪರೀತ ಚಳಿಯಿಂದ ಜನ ಪತರುಗುಟ್ಟುವಂತಾಗಿದೆ.
ಚುಮುಚುಮು ಚಳಿ.. ಬೆಂಗಳೂರು ಗಢಗಢ!
ತಮಿಳುನಾಡಿನಲ್ಲಿ ಸೀನು ಬಂದ್ರೆ ಬೆಂಗಳೂರಲ್ಲಿ ನೆಗಡಿಯಾಗುತ್ತಂತೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ತಮಿಳುನಾಡಿನ ಪೂರ್ವ ಕರಾವಳಿ ಸೇರಿದಂತೆ ಕನ್ಯಾಕುಮಾರಿ ಹಾಗೂ ಶ್ರೀಲಂಕಾ ಕಡಲ ತೀರ ಪ್ರದೇಶದಲ್ಲಿ ಕಡಿಮೆ ಒತ್ತಡ ಸೃಷ್ಟಿಯಾಗಿದೆ. ತಮಿಳುನಾಡು ಹಾಗೂ ಪುದುಚೇರಿಯಾದ್ಯಂತ ಧಾರಾಕಾರ ಮಳೆಯಾಗ್ತಿದೆ. ಸೈಕ್ಲೋನ್ ಎಫೆಕ್ಟ್ನಿಂದ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಶುರುವಾಗಿದೆ. ಇವತ್ತು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿದ್ದು ಮಧ್ಯಾಹ್ನದ ಹೊತ್ತಿಗೆ ರಾಜಧಾನಿ ಬೆಂಗಳೂರಿನಲ್ಲಿ ಶುರುವಾದ ತುಂತುರು ಮಳೆ ಸಂಜೆ ವೇಳೆ ಸ್ವಲ್ಪ ಬಿರುಸು ಪಡೆಯಿತು. ಮಳೆಯಿಂದಾಗಿ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಆಗಿದೆ.
ಇನ್ನು, ಬೆಂಗಳೂರು ಅಲ್ಲದೇ ರಾಜಧಾನಿಯ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಮಳೆಯಾಗ್ತಿದೆ. ಚಿಕ್ಕಬಳ್ಳಾಪುರದಲ್ಲಿ ಮುಂಜಾನೆಯಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿದೆ. ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೈಕ್ಲೋನ್ ಅಬ್ಬರಕ್ಕೆ ಜನ ತತ್ತರಿಸಿದ್ದಾರೆ. ಜಿಟಿಜಿಟಿ ಮಳೆಗೆ ವಾಹನ ಸವಾರರ ಪರದಾಡಿದ್ರು, ಜೊತೆಗೆ ಶಾಲಾ-ಕಾಲೇಜುಗಳು, ಕೆಲಸ ಕಾರ್ಯಗಳಿಗೆ ಹೋಗುವವರು ಹೈರಾಣಾದ್ರು.
ಅತ್ತ ನೆರೆಯ ಕೋಲಾರ ಜಿಲ್ಲೆಯಾದ್ಯಂತ ಬೆಳ್ಳಂಬೆಳಗ್ಗೆಯೇ ಜಿಟಿಜಿಟಿ ಮಳೆ ನಡುಗಿಸಿದೆ. ನೆನ್ನೆಯಿಂದ ಮೋಡಕವಿದ ವಾತಾವರಣ ಸೃಷ್ಟಿಯಾಗಿತ್ತು. ಫೆಂಗಲ್ ಚಂಡಮಾರುತ ನಂತರ, ಮತ್ತೆ ಮಳೆಯ ಕಾಟಕ್ಕೆ ವಾಹನ ಸವಾರರು ಸುಸ್ತಾದ್ರು.
ಇನ್ನು ಇಂದು ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಾಮರಾಜನಗರ, ರಾಮನಗರ, ಕೋಲಾರ, ಮೈಸೂರು, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತಮಳೆಯಾಗುವ ಸಾಧ್ಯತೆ ಇದೆ, ಇನ್ನು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಅನ್ನೋ ಮಾಹಿತಿ ಲಭ್ಯವಾಗಿದೆ..
ಡಿಸೆಂಬರ್ 14ರಿಂದ ಮಳೆಯ ಪ್ರಮಾಣ ತಗ್ಗಲಿದೆ ಎನ್ನಲಾಗಿದೆ. ಒಟ್ಟಾರೆ, ಫೆಂಗಲ್ ಚಂಡಮಾರುತ ಅಪಾರ ಹಾನಿ ಸೃಷ್ಟಿಸಿತ್ತು. ಇದೀಗ ಮತ್ತೊಂದು ಸೈಕ್ಲೋನ್ ಶುರುವಾಗಿದ್ದು ಇನ್ನೂ ಎರಡು ದಿನಗಳ ಕಾಲ ವರುಣ ಕಾಟವನ್ನು ಜನ ಸಹಿಸಿಕೊಳ್ಳಲೇಬೇಕಿದೆ.
ಇದನ್ನೂ ಓದಿ: ತುಮಕೂರು ಪೊಲೀಸರಿಂದ ಡ್ರೋನ್ ಪ್ರತಾಪ್ ದಿಢೀರ್ ಬಂಧನ; ಕಾರಣವೇನು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ