/newsfirstlive-kannada/media/post_attachments/wp-content/uploads/2025/01/VAJAY-HAJARE-TROPHY.jpg)
ಈ ಸಲ ಕಪ್ ನಮ್ದೆ.. ಹಾಗಂತ ಇದು ಐಪಿಎಲ್ ಕಪ್ ಅಂದ್ಕೋಬೇಡಿ.. ದೇಶೀಯ ಟೂರ್ನಿಯಲ್ಲಿ ಕರ್ನಾಟಕಕ್ಕೆ 5ನೇ ಬಾರಿಗೆ ಮುಡಿಗೇರಿರೋ ವಿಜಯ್ ಹಜಾರೆ ಟ್ರೋಫಿ.. ಇದೀಗ ವಿಜಯ್ ಹಜಾರೆ ಟ್ರೋಫಿಯನ್ನ ಗೆದ್ದಿರೋ ಕರ್ನಾಟಕ ಟೀಂ ರಾಜ್ಯಕ್ಕೆ ಆಗಮಿಸಿದೆ. ಮಯಾಂಕ್ ನಾಯಕತ್ವದ ಟೀಂಗೆ ಭರ್ಜರಿ ಸ್ವಾಗತ ಸಿಕ್ಕಿದೆ.
ಕೊಟ್ಯಂತರ ಕನ್ನಡಿಗರ ಪ್ರಾರ್ಥನೆ ಫಲಿಸಿದೆ. ಕೆಲ ವರ್ಷಗಳಿಂದ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳನ್ನ ಕಾಡಿದ್ದ ಟ್ರೋಫಿ ಕೊರಗಿಗೆ ಕೊನೆಗೂ ಬ್ರೇಕ್​ ಬಿದ್ದಿದೆ. ವಡೋದರಾದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ವಿದರ್ಭ ಪಡೆಯನ್ನ ಮಣಿಸಿ ಕರ್ನಾಟಕ ತಂಡದ ಚಾಂಪಿಯನ್​ ಪಟ್ಟವೇರಿದೆ. ಇದು ಕನ್ನಡಿಗರ ಸಂಭ್ರಮಕ್ಕೆ ಕಾರಣವಾಗಿದೆ.
/newsfirstlive-kannada/media/post_attachments/wp-content/uploads/2025/01/VAJAY-HAJARE-TROPHY-2.jpg)
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ಕಮಾಲ್ ಮಾಡಿದೆ. ಕರುಣ್ ನಾಯರ್ ನೇತೃತ್ವದ ವಿದರ್ಭ ತಂಡವನ್ನು ಸೋಲಿಸುವ ಮೂಲಕ ಮಯಾಂಕ್ ಅಗರ್ವಾಲ್ ಸಾರಥ್ಯದ ಕರ್ನಾಟಕ ತಂಡ 5ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿದೆ.
5ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಆಟಗಾರರ ಕುಟುಂಬಸ್ಥರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ರೋಫಿ ಗೆದ್ದು ಬಂದ ತಂಡಕ್ಕೆ ಅದ್ಧೂರಿ ಸ್ವಾಗತ ಕೋರಿದ್ರು. ಹೂಗುಚ್ಛ ನೀಡಿ, ಹಾರ ಹಾಕಿ ಬರಮಾಡಿಕೊಂಡ್ರು.
ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ! ಹುಡುಗಿ ಯಾರು?
ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಜೈಕಾರ ಹಾಕಿದ್ರು. ಇದೇ ವೇಳೆ ಕಪ್ ಗೆದ್ದ ಸಂತೋಷದ ಕ್ಷಣವನ್ನ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಹಂಚಿಕೊಂಡ್ರು.
/newsfirstlive-kannada/media/post_attachments/wp-content/uploads/2025/01/VAJAY-HAJARE-TROPHY-1.jpg)
ಕರ್ನಾಟಕ ತಂಡ 2013-14ರಲ್ಲಿ ಚೊಚ್ಚಲ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿತ್ತು. ಆ ನಂತರ 2014-15, 2017-18 ಹಾಗೂ 2019-20ರಲ್ಲಿ ಪ್ರಶಸ್ತಿ ಗೆದ್ದಿತ್ತು. ಇದೀಗ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಫೈನಲ್ ತಲುಪಿದ್ದ ಕರ್ನಾಟಕ ತಂಡ 5ನೇ ಬಾರಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ.
ಕೊಟ್ಯಂತರ ಕನ್ನಡಿಗರ ಪ್ರಾರ್ಥನೆಯಂತೆ ವಿಜಯ್ ಹಜಾರೆ ಟ್ರೋಫಿ ರಾಜ್ಯಕ್ಕೆ ಬಂದಿದೆ. ಫೈನಲ್‌ಗೆ ಹೋದಾಗ ನಿರಾಸೆ ಮೂಡಿಸದ ಕರ್ನಾಟಕ ತಂಡದ ಆಟಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂಡದ ಆಟಕ್ಕೆ ಎಲ್ಲರೂ ಮೂಕವಿಸ್ಮಿತರಾಗಿ ಚಪ್ಪಾಳೆ ತಟ್ಟುತ್ತಿರೋದೇ ಖುಷಿಯ ಸಂಗತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us