Advertisment

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಯಾರಾಗ್ತಾರೆ.. ಡಿ.ಕೆ ಶಿವಕುಮಾರ್ ಬೆಂಬಲ ಯಾರಿಗೆ..?

author-image
Bheemappa
Updated On
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಯಾರಾಗ್ತಾರೆ.. ಡಿ.ಕೆ ಶಿವಕುಮಾರ್ ಬೆಂಬಲ ಯಾರಿಗೆ..?
Advertisment
  • ವಿಧಾನಸಭೆಗೆ ಸ್ಪರ್ಧಿಸಿ ಅನುಭವ ಪಡೆದಿರೋ ಮಂಜುನಾಥ್ ಗೌಡ
  • ಅಧ್ಯಕ್ಷ ಸ್ಥಾನ ಬೇರೆಯವರಿಗೆ ಬಿಟ್ಟು ಕೊಡಲ್ಲ ಎಂದಿರುವ ನಲಪಾಡ್
  • ಹೆಚ್ಚು ಮತ ಪಡೆದವರನ್ನ ಹೈಕಮಾಂಡ್ ಹೇಗೆ ಆಯ್ಕೆ ಮಾಡುತ್ತದೆ?

ರಾಜ್ಯ ಕಾಂಗ್ರೆಸ್​​ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆದ ಬೆನ್ನಲ್ಲೇ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಅಧ್ಯಕ್ಷ ಸ್ಥಾನ ಪಡೆಯಲು ಪೈಪೋಟಿ ಕೂಡ ಶುರುವಾಗಿದೆ. ಈ ಬಾರಿ ಯಾರಿಗೆ ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಸಾರಥ್ಯ ಸಿಗಲಿದೆ ಎಂಬುದೇ ಸಸ್ಪೆನ್ಸ್.

Advertisment

ಡಿ.ಕೆ ಶಿವಕುಮಾರ ಶಿಷ್ಯರ ನಡುವೆ ‘ಯುವ’ ಪಟ್ಟಕ್ಕಾಗಿ ಪೈಪೋಟಿ

ಹಸ್ತಪಾಳೆಯದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಬಿಸಿ ಜೋರಾಗಿದೆ. ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ ಶಿಷ್ಯರಿಬ್ಬರಲ್ಲೇ ಪೈಪೋಟಿ ನಡೆಯುತ್ತಿದೆ. ಹಾಲಿ ಅಧ್ಯಕ್ಷ ನಲಪಾಡ್ ಮತ್ತೆ ಅಧ್ಯಕ್ಷ ಸ್ಥಾನಕ್ಕೆರುವ ಲೆಕ್ಕಾಚಾರದಲ್ಲಿದ್ರೆ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ ಗೌಡ ಕೂಡ ಈ ಬಾರಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

publive-image

ಇಲ್ಲಿ ಗಮನಿಸಬೇಕಾದ ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ಇಬ್ಬರೂ ಕೂಡ ಡಿ.ಕೆ ಶಿವಕುಮಾರ್ ಆಪ್ತರಾಗಿದ್ದು, ಡಿಸಿಎಂ ಯಾರಿಗೆ ಬೆಂಬಲ ಕೊಡ್ತಾರೆ ಅನ್ನೋ ಕುತೂಹಲವಿದೆ. ಪಕ್ಷದ ಕಚೇರಿಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಯುವ ಕಾಂಗ್ರೆಸ್​ನ ಹಾಲಿ ಅಧ್ಯಕ್ಷ ಮಹಮದ್ ನಲಪಾಡ್ ಅಧ್ಯಕ್ಷ ಸ್ಥಾನ ಬೇರೆಯವರಿಗೆ ಬಿಟ್ಟು ಕೊಡಲ್ಲ ಎಂದು ಪಟ್ಟು ಹಿಡಿದಿದ್ದು, ಚುನಾವಣೆಯಲ್ಲಿ ನಾನೇ ಗೆಲ್ತೇನೆ ಅಂತಿದ್ದಾರೆ. ತಂದೆ, ಶಾಂತಿನಗರ ಶಾಸಕ ಹ್ಯಾರಿಸ್​ ಬಲ ನಲಪಾಡ್​ಗಿದ್ದು, ಡಿ.ಕೆ ಶಿವಕುಮಾರ್ ಕೂಡ ನನ್ನ ಪರ ಬೆಂಬಲವಾಗಿ ನಿಲ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.

ಇತ್ತ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ ಗೌಡ ಕೂಡ ಅಧ್ಯಕ್ಷ ಸ್ಥಾನಕ್ಕೆರಲು ಸಿದ್ಧತೆ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅನುಭವವಿರುವ ಮಂಜುನಾಥ್ ಗೌಡ ಈ ಬಾರಿ ಗೆಲುವು ನನ್ನದೇ ಅಂತಿದ್ದಾರೆ. ಗೌಡ ಸಮುದಾಯದ ಅಸ್ತ್ರ ಪ್ರಯೋಗಿಸಿ, ಡಿ.ಕೆ ಶಿವಕುಮಾರ್ ಬೆಂಬಲ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ.

Advertisment

publive-image

ಸಂದರ್ಶನದ ಮೂಲಕ ಆಯ್ಕೆ ಮಾಡಲಿರುವ ಹೈಕಮಾಂಡ್ 

ಯುವ ಕಾಂಗ್ರೆಸ್ ಘಟಕದ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ ಬೆಂಬಲ ಸಿಕ್ಕಿದವರಿಗೆ ಪಟ್ಟ ಖಚಿತ ಎಂಬ ಮಾತಿದೆ. ಪಕ್ಷದ ಪದಾಧಿಕಾರಿಗಳ ಚುನಾವಣೆ ನಡೆದರೂ ಅಧ್ಯಕ್ಷ ಸ್ಥಾನದಲ್ಲಿ ಸ್ಪರ್ಧಿಸಿ, ಅಂತಿಮವಾಗಿ ಹೆಚ್ಚು ಮತ ಪಡೆದ ಮೂವರನ್ನ ಹೈಕಮಾಂಡ್ ನಾಯಕರು ಸಂದರ್ಶನದ ಮೂಲಕವೇ ಆಯ್ಕೆ ಮಾಡಲಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಬೆಂಬಲ ಪಡೆಯಲು ಯುವ ನಾಯಕರು ಪೈಪೋಟಿ ನಡೆಸಿದ್ದಾರೆ. ಅಂತಿಮವಾಗಿ ಇಬ್ಬರಲ್ಲಿ ಯಾರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಸಿಗಲಿದೆ ಎಂಬ ಕುತೂಹಲದ ಜೊತೆಗೆ‌, ಈ ಇಬ್ಬರ ಪೈಪೋಟಿ ನಡುವೆ 3ನೇಯವರು ಯಾರಾದ್ರೂ ಲಾಭ ಪಡೆಯುತ್ತಾರಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment