/newsfirstlive-kannada/media/post_attachments/wp-content/uploads/2024/06/Nalpad.jpg)
ಬೆಂಗಳೂರು: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಕಷ್ಟ ಎದುರಾಗಿದೆ. ಇಂದು ಎಸ್‌ಐಟಿ ಅಧಿಕಾರಿಗಳು ಸುಮಾರು 2 ಗಂಟೆಗೂ ಹೆಚ್ಚು ಕಾಲ CID ಕಚೇರಿಯಲ್ಲಿ ನಲಪಾಡ್ ಅವರನ್ನು ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ:VIDEO: ದರ್ಶನ್ ಮತ್ತು ಗ್ಯಾಂಗ್ನಿಂದ ಕೊಲೆ ಎನ್ನಲಾದ ಕೇಸ್ಗೆ ಬಿಗ್ ಟ್ವಿಸ್ಟ್.. ಮಹತ್ವದ ಸಾಕ್ಷಿ!
ಬಿಟ್ ಕಾಯಿನ್ ಹಗರಣದಲ್ಲಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರ ಹೆಸರು ಕೇಳಿ ಬಂದಿತ್ತು. ಬಿಟ್ ಕಾಯಿನ್ ಕೇಸ್‌ನ ಪ್ರಮುಖ ಆರೋಪಿ ಶ್ರೀಕಿ ನಲಪಾಡ್ ಹೆಸರನ್ನು ಬಾಯ್ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಯುವ ರಾಜ್ಯಾಧ್ಯಕ್ಷ ನಲಪಾಡ್ ಅವರು ಎಸ್‌ಐಟಿ ವಿಚಾರಣೆಗೆ ಕರೆಯಲಾಗಿದೆ.
ಬಿಟ್ ಕಾಯಿನ್ ಹಗರಣವನ್ನು ಸಂಪೂರ್ಣವಾಗಿ ಎಸ್‌ಐಟಿ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆ ಭಾಗವಾಗಿ ನಲಪಾಡ್ ಅವರಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯಲಾಗಿತ್ತು. ಎಸ್‌ಐಟಿ ನೊಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಸಿಐಡಿ ಕಚೇರಿಯಲ್ಲಿ ನಡೆದ ವಿಚಾರಣೆಗೆ ನಲಪಾಡ್ ಅವರು ಹಾಜರಾಗಿದ್ದರು. ವಿಚಾರಣೆ ವೇಳೆ ಎಸ್‌ಐಟಿ ಅಧಿಕಾರಿಗಳು ಶ್ರೀಕಿ ಕುರಿತಂತೆ ನಲಪಾಡ್ ರಿಂದ ಒಂದಷ್ಟು ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ‘ಭಂಡ ಧೈರ್ಯ ಇರೋನಿಗೆ ಕಾಲ ಇಲ್ಲ’- ನಟ ದರ್ಶನ್ ಬಗ್ಗೆ ಉಮಾಪತಿ ಗೌಡ ಆಡಿದ್ದ ಮಾತು ವೈರಲ್!
ಬಿಟ್ ಕಾಯಿಲ್ ಹಗರಣದ ಆರೋಪಿ ಶ್ರೀಕಿ ಯಾವಾಗಿನಿಂದ ನಿಮಗೆ ಪರಿಚಯ? ಶ್ರೀಕಿ ಮತ್ತು ನಿಮ್ಮ ಪರಿಚಯ ಕೇವಲ ಸ್ನೇಹನಾ? ಇಲ್ಲ ಏನಾದ್ರೂ ಹಣಕಾಸಿನ ವ್ಯವಹಾರ ನಡೆಸಿದ್ರಾ? ಬಿಟ್ ಕಾಯಿನ್ ಕುರಿತಂತೆ ಶ್ರೀಕಿ ನಿಮ್ಮ ಬಳಿ ವ್ಯವಹಾರ ನಡೆಸಿದ್ರಾ ಅನ್ನೋ ಬಗ್ಗೆ ಎಸ್‌ಐಟಿ ಅಧಿಕಾರಿಗಳು ನಲಪಾಡ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ