ಮಹಾ ಕುಂಭಮೇಳಕ್ಕೆ ಹೋಗಿ ಜೀವ ಕಳೆದುಕೊಂಡ ಕರ್ನಾಟಕದ ಮತ್ತೊಬ್ಬ ಯುವಕ

author-image
Bheemappa
Updated On
ಮಹಾ ಕುಂಭಮೇಳಕ್ಕೆ ಹೋಗಿ ಜೀವ ಕಳೆದುಕೊಂಡ ಕರ್ನಾಟಕದ ಮತ್ತೊಬ್ಬ ಯುವಕ
Advertisment
  • ಗೋರಖ್​ಪುರ ರೈಲ್ವೆ ನಿಲ್ದಾಣದಲ್ಲಿ ಯುವಕನಿಗೆ ಆಗಿದ್ದಾದ್ರೂ ಏನು?
  • ಹದಿನೈದು ದಿನಗಳ ಹಿಂದೆ ಮಹಾ ಕುಂಭಮೇಳಕ್ಕೆ ತೆರಳಿದ್ದ ಯುವಕ
  • ಸ್ಥಳೀಯ ಪೊಲೀಸರಿಂದ ಕುಟುಂಬದವರಿಗೆ ಮಾಹಿತಿ, ಆಕ್ರಂದನ

ಕೊಪ್ಪಳ; ಮಹಾ ಕುಂಭಮೇಳವನ್ನು ಮುಗಿಸಿ ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯಲು ತೆರಳುವಾಗ ವಿದ್ಯುತ್ ತಂತಿ ತಗುಲಿ ಕರ್ನಾಟಕದ ಯುವಕ ಜೀವ ಕಳೆದುಕೊಂಡ ಘಟನೆ ಗೋರಖ್​ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕೊಪ್ಪಳದ ಕಾರಟಗಿಯ ಸಿದ್ದಾಪುರ ಗ್ರಾಮದ ಪ್ರವೀಣ್ ಹೊಸಮನಿ (27) ಪ್ರಾಣ ಕಳೆದುಕೊಂಡ ಯುವಕ. ಮಹಾ ಕುಂಭಮೇಳ ಹಿನ್ನೆಲೆಯಲ್ಲಿ ಪವಿತ್ರ ಸ್ನಾನ ಮಾಡಲೆಂದು ಕಳೆದ 15 ದಿನಗಳ ಹಿಂದೆಯೇ ಪ್ರವೀಣ್ ಪ್ರಯಾಗ್​ರಾಜ್​ಗೆ ತೆರಳಿದ್ದನು. ಅಲ್ಲಿ ಸ್ನಾನ, ಪೂಜೆ, ದರ್ಶನ ಎಲ್ಲ ಮುಗಿಸಿಕೊಂಡು ಬಳಿಕ ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯಲೆಂದು ಪ್ರಯಾಣ ಬೆಳೆಸಿದ್ದನು. ಇದಕ್ಕಾಗಿ ಗೋರಖ್​ಪುರ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದನು.

publive-image

ಇದನ್ನೂ ಓದಿಐತಿಹಾಸಿಕ ದಿನ; ಪ್ರಪ್ರಥಮ ದೇವಸ್ಥಾನ ನಿರ್ಮಿಸಿ ಪ್ರಾಣಪ್ರತಿಷ್ಠಾಪನೆ.. ಗ್ರಾಮದಲ್ಲಿ ಸಡಗರ, ಸಂಭ್ರಮ

ಆದರೆ ವಿಧಿಯಾಟವೇ ಬೇರೆ ಆಗಿತ್ತು. ಗೋರಖ್​ಪುರ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ತಂತಿ ತಗುಲಿದ ಕಾರಣ ಪ್ರವೀಣ್ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಸ್ಥಳೀಯ ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು ಮೃತದೇಹ ರವಾನೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಸಿದ್ದಾಪುರ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment