newsfirstkannada.com

ಅವನಿಲ್ಲಿ.. ಅವಳಲ್ಲಿ.. ಮಾತಿಲ್ಲ.. ಕತೆಯಿಲ್ಲ.. ಮೂಕ ಪ್ರೀತಿಯ ಕಣ್ಣೀರ ರೋದನೆ..!

Share :

Published January 26, 2024 at 8:50am

  ಸೋಶಿಯಲ್ ಮೀಡಿಯಾದಲ್ಲಿ ಅರಳಿದ್ದ ಪ್ರೀತಿ

  ಮದುವೆಯಾದ 20 ದಿನದಲ್ಲೇ ಬೇರೆ ಬೇರೆ ಆಗಿದ್ದಾರೆ

  ಮನದರಸಿ ಕಳೆದುಕೊಂಡು ಕಂಗಾಲ್ ಆದ ಪ್ರಿಯಕರ

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ನಾಗನೂರ ಗ್ರಾಮದ ಸಿದ್ದಾರ್ಥ್​ ರಾಜಸ್ಥಾನ ಮೂಲದ ಯುವತಿಯೊಬ್ಬಳ ಜೊತೆಗೆ ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯ ಹೊಂದಿದ್ದ. ಆ ಪರಿಚಯ ಪ್ರೀತಿಗೆ ತಿರುಗಿತ್ತು. ವಿಶೇಷ ಅಂದರೆ ಪ್ರೇಮದಲ್ಲಿಯೂ ಇಬ್ಬರು ಸಾಮ್ಯತೆ ಹೊಂದಿದ್ದಾರೆ.

ಅಂದರೆ ಇಬ್ಬರಿಗೂ ಮಾತು ಬರುತ್ತಿರಲಿಲ್ಲ. ಅಕ್ಷರದ ಪ್ರೀತಿಗೆ ಸಾಕ್ಷಿಯಾಗಿದ್ದ ಇಬ್ಬರು ಮದುವೆಯಾಗಲು ನಿರ್ಧರಿಸಿ ಬಾಗಲಕೋಟೆಯಲ್ಲಿಯೇ ಮದುವೆಯಾಗಿದ್ದಾರೆ. ಆದರೆ ಮದುವೆಯಾದ ಕೇವಲ 20 ದಿನಗಳಲ್ಲಿ ಮಾತುಬಾರದ ಈ ದಂಪತಿ ಬೇರ್ಪಟ್ಟಿದ್ದಾರೆ.

ಹೊಸ ಬದುಕಲ್ಲಿ ಹೆಜ್ಜೆ ಇಡುತ್ತಿರುವಾಗಲೇ ರಾಜಸ್ಥಾನದಲ್ಲಿ ಆಕೆಯ ಕಡೆಯವರು ಕಿಡ್ನ್ಯಾಪ್ ದೂರು ಕೊಟ್ಟು ರಾಜಸ್ಥಾನದ ಪೊಲೀಸರ ಸಹಕಾರದೊಂದಿಗೆ ಯುವತಿಯನ್ನ ತಮ್ಮ ಬಾಗಲಕೋಟೆಗೆ ಬಂದು ಮನೆಗೆ ಕರೆದೊಯ್ದಿದ್ದಾರೆ.

ಇದೀಗ ಪತ್ನಿ ರೋದಿಯಾ ಇಲ್ಲದೇ ಸಿದ್ದಾರ್ಥ್ ಒಂಟಿಯಾಗಿದ್ದು, ಮೂಕರೋದನೆ ಅನುಭವಿಸುತ್ತಿದ್ದಾನೆ. ಇನ್ನು ಇಬ್ಬರಿಗೂ ಈ ಹಿಂದೆ ಮದುವೆಯೂ ಆಗಿತ್ತು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅವನಿಲ್ಲಿ.. ಅವಳಲ್ಲಿ.. ಮಾತಿಲ್ಲ.. ಕತೆಯಿಲ್ಲ.. ಮೂಕ ಪ್ರೀತಿಯ ಕಣ್ಣೀರ ರೋದನೆ..!

https://newsfirstlive.com/wp-content/uploads/2024/01/BGK-LOVE-STORY.jpg

Load More