newsfirstkannada.com

ಕಾಂಗ್ರೆಸ್​​ಗೆ ಭಾರೀ ಕಗ್ಗಂಟಾಗಿದೆ ಕರ್ನಾಟಕದ 4 ಕ್ಷೇತ್ರಗಳ ಟಿಕೆಟ್ ಆಯ್ಕೆ; ಸಂಭಾವ್ಯ ಅಭ್ಯರ್ಥಿಗಳ ಹೆಸರು ಇಲ್ಲಿದೆ

Share :

Published March 26, 2024 at 6:55am

  ಬಾಕಿ ಉಳಿದಿರುವ 4 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಫೈನಲ್​

  ಇಂದು ಅಥವಾ ನಾಳೆ ಕಾಂಗ್ರೆಸ್​ ಪಟ್ಟಿ ಬಿಡುಗಡೆ ಸಾಧ್ಯತೆ

  ಸಿದ್ದರಾಮಯ್ಯ, ಡಿಕೆಎಸ್​ಗೂ ಕ್ಯಾರೇ ಎನ್ನದ ಮಾಜಿ ಸಿಎಂ

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್​, ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ತಿದೆ. ಈಗಾಗಲೇ ಟಾರ್ಗೆಟ್​ 20 ಫಿಕ್ಸ್​ ಮಾಡಿಕೊಂಡಿರುವ ಹಸ್ತ ಪಡೆ, ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ. ಬಾಕಿ ಉಳಿದಿರುವ ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಚಾಮರಾಜನಗರ ಕ್ಷೇತ್ರದ ಟಿಕೆಟ್​ ಆಯ್ಕೆಯೇ ದೊಡ್ಡ ತಲೆನೋವಾಗಿತ್ತು. ಇದೀಗ ಬಾಕಿ ಉಳಿದ ನಾಲ್ಕೂ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ ಹಾಗೂ ಚಾಮರಾಜನಗರ ಕ್ಷೇತ್ರದ ಟಿಕೆಟ್​ಗೆ ಭಾರೀ ಪೈಪೋಟಿ ಇದ್ದ ಕಾರಣ, ಈ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿತ್ತು. ಕೊನೆಗೂ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್​ ಮಾಡಿದೆ.

ಅಭ್ಯರ್ಥಿಗಳು ಫೈನಲ್​

 • ಬಳ್ಳಾರಿ ಕ್ಷೇತ್ರ – ಇ.ತುಕಾರಾಂ
 • ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ
 • ಚಾಮರಾಜನಗರಕ್ಕೆ ಸುನಿಲ್ ಭೋಸ್

ಗೊಂದಲದಲ್ಲೇ ಕೋಲಾರಕ್ಕೆ ಎಲ್​.ಹನುಮಂತಯ್ಯ ಹೆಸರು ಅಂತಿಮ

ರಾಜ್ಯ ಕಾಂಗ್ರೆಸ್​ ನಾಯಕರು ಕೋಲಾರ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲದಲ್ಲೇ ಮಾಜಿ ರಾಜ್ಯಸಭೆ ಸದಸ್ಯ ಎಲ್​ಹನುಮಂತಯ್ಯ ಹೆಸರನ್ನು ಫೈನಲ್​ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೋಲಾರದ ಟಿಕೆಟ್​ಗಾಗಿ ಸಚಿವ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಬಣದ ನಡುವೆ ಪೈಪೋಟಿ ಇತ್ತು. ಬೆಂಬಲಿಗರ ಜೊತೆ ದೆಹಲಿಗೆ ತೆರಳಿ ಹೈಕಮಾಂಡ್​ ಬಳಿ ಶಕ್ತಿ ಪ್ರದರ್ಶನವನ್ನೂ ಮಾಡಿದ್ರು. ಮೊನ್ನೆ ರಾಜ್ಯದಲ್ಲಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲೂ, ಮುನಿಯಪ್ಪ ಅಳಿಯನಿಗೆ ಟಿಕೆಟ್​ ಕೊಟ್ರೆ, ನಾವು ಕೆಲಸ ಮಾಡಲ್ಲ ಎಂದು ಮಾಜಿ ಸ್ಪೀಕರ್​ ರಮೇಶ್​ಕುಮಾರ್ ಕಡ್ಡಿ ಮುರಿದಂತೆ ಮುನಿಸ್ವಾಮಿ ಎದುರೇ ಅಸಮಾಧಾನ ವ್ಯಕ್ತಪಡಿಸಿದ್ರು. ಹೀಗಾಗಿ ಎಲ್‌. ಹನುಮಂತಯ್ಯಗೆ ಟಿಕೆಟ್ ನೀಡಲು ಸಿಎಂ, ಡಿಸಿಎಂ ಒಲವು ತೋರಿದ್ದು, ನಿರ್ಧಾರವನ್ನು ಹೈಕಮಾಂಡ್​ಗೆ ಬಿಟ್ಟಿದ್ದಾರೆ.

ಸಿಎಂ, ಡಿಸಿಎಂಗೆ ಸೆಡ್ಡು ಹೊಡೆದ ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ, ಶಿವಶಂಕರ್ ರೆಡ್ಡಿ ಮಧ್ಯೆ ಟಿಕೆಟ್​ ಪೈಪೋಟಿ ಇತ್ತು. ಇದರ ಜೊತೆಗೆ ನಾನು ಟಿಕೆಟ್​ ಆಕಾಂಕ್ಷಿ ಎಂದು ವೀರಪ್ಪ ಮೊಹ್ಲಿ ಬಹಿರಂಗವಾಗಿಯೇ ಹೇಳಿಕೊಂಡಿದ್ರು. ಆದ್ರೆ, ಅಂತಿಮವಾಗಿ ಸಿಎಂ, ಡಿಸಿಎಂ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ರಕ್ಷಾ ರಾಮಯ್ಯ ಹೆಸರನ್ನು ಫೈನಲ್​ ಮಾಡಿದ್ದಾರೆ. ಇದಕ್ಕೆ ಸೆಡ್ಡು ಹೊಡೆದಿರುವ ವೀರಪ್ಪ ಮೊಯ್ಲಿ, ಟಿಕೆಟ್​ಗಾಗಿ ಸೋನಿಯಾ ಗಾಂಧಿ ಮೊರೆ ಹೋಗಿದ್ದಾರೆ.

ಎಐಸಿಸಿ ಮಾಜಿ ಅಧ್ಯಕ್ಷರಿಂದಲೇ ಟಿಕೆಟ್ ಪಡೆದುಕೊಳ್ಳಲು ನಿರ್ಧಾರ

ರಕ್ಷಾ ರಾಮಯ್ಯ ಹೆಸರು ಫೈನಲ್​ ಆಗಿರುವ ವಿಷಯ ಗೊತ್ತಾಗ್ತಿದ್ದಂತೆ ವೀರಪ್ಪ ಮೊಯ್ಲಿ ಎಐಸಿಸಿ ಮಾಜಿ ಅಧ್ಯಕ್ಷರಿಂದಲೇ ಟಿಕೆಟ್ ಪಡೆದುಕೊಳ್ಳಲು ಮುಂದಾಗಿದ್ದಾರೆ. ರಾಜ್ಯ ನಾಯಕರನ್ನ ಬಿಟ್ಟು ನೇರ ಸೋನಿಯಾ ಮೂಲಕ ಟಿಕೆಟ್​ ಲಾಬಿ ಮಾಡ್ತಿದ್ದಾರೆ. ಇತ್ತೀಚೆಗೆ ಸಿಎಂ, ಡಿಸಿಎಂ ಕರೆದ ಸಭೆಗಳಿಗೂ ವೀರಪ್ಪ ಮೊಯ್ಲಿ ತಲೆ ಹಾಕಿರಲಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಮುಖಂಡರು ಹಾಜರಾದರೂ ಮೊಯ್ಲಿ ಮಾತ್ರ ಸಭೆಯಿಂದ ದೂರ ಉಳಿದ್ದರು.

ಇದನ್ನೂ ಓದಿ: ಕಂಗನಾ ಅರೆ ಬೆತ್ತಲೆ ಫೋಟೋ ಶೇರ್ ಮಾಡಿದ ಕಾಂಗ್ರೆಸ್ ನಾಯಕಿ; ಬಿಜೆಪಿ ಕೆಂಡಾಮಂಡಲ; ಆಗಿದ್ದೇನು?

ಸೋನಿಯಾಯವರಿಂದಲೇ ಟಿಕೆಟ್ ಪಡೆದುಕೊಳ್ತೀನೆಂದು ಹೋಗಿರುವ ಮೊಯ್ಲಿ, ನಡೆಗೆ ಸಿಎಂ ಡಿಸಿಎಂ ಬೇಸತ್ತು ವೀರಪ್ಪ ಮೊಯ್ಲಿ ವಿಚಾರದಲ್ಲಿ ತಟಸ್ಥರಾಗಿದ್ದಾರೆ. ಹಾಗೂ ರಕ್ಷ ರಾಮಯ್ಯ ಪರ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಬ್ಯಾಟಿಂಗ್ ಮಾಡ್ತಿದ್ದಾರೆ. ಒಟ್ಟಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿರುವ ಕಾಂಗ್ರೆಸ್​ಗೆ ಈ ನಾಲ್ಕು ಕ್ಷೇತ್ರಗಳ ಟಿಕೆಟ್​ ಹಂಚಿಕೆಯೇ ತಲೆನೋವಾಗಿದೆ. ಗೊಂದಲದಲ್ಲೇ ಹೆಸರನ್ನುಗಳನ್ನು ಅಂತಿಮಗೊಳಿಸಿ, ಹೈಕಮಾಂಡ್​ಗೆ ಅಂಗಳಕ್ಕೆ ಕಳಿಸಿದ್ದಾರೆ. ಇದರ ನಡುವೆಯೇ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಡಿಕೆಶಿ ಭೇಟಿ ನೀಡಿ ಕರ್ನಾಟಕದಲ್ಲಿನ ಲೋಕ ಸಮರದ ತಂತ್ರ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದು, ಬಾಕಿ ಉಳಿದಿರುವ 4 ಕ್ಷೇತ್ರಗಳಿಗೆ ಇಂದು ಅಥವಾ ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​​ಗೆ ಭಾರೀ ಕಗ್ಗಂಟಾಗಿದೆ ಕರ್ನಾಟಕದ 4 ಕ್ಷೇತ್ರಗಳ ಟಿಕೆಟ್ ಆಯ್ಕೆ; ಸಂಭಾವ್ಯ ಅಭ್ಯರ್ಥಿಗಳ ಹೆಸರು ಇಲ್ಲಿದೆ

https://newsfirstlive.com/wp-content/uploads/2024/03/KHARGE.jpg

Load More