newsfirstkannada.com

Budget 2024: ಈ ಬಾರಿ ಬಜೆಟ್​ ಗಾತ್ರವೆಷ್ಟು? ಗ್ಯಾರಂಟಿ ಹಂಚಿಕೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು?

Share :

Published February 16, 2024 at 10:40am

Update February 16, 2024 at 10:41am

    2024-25ರ ಬಜೆಟ್​ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ

    ಜುಲೈನಲ್ಲಿ 3.27 ಲಕ್ಷ ಕೋಟಿಯ ಬಜೆಟ್ ಮಂಡನೆ

    ಅತ್ಯಂತ ಕೀಳಾದವನೂ ಮೇಲಾಗಬೇಕು ಎಂದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು 15ನೇ ಬಾರಿಗೆ ಬಜೆಟ್​ ಮಂಡಿಸುತ್ತಿದ್ದಾರೆ. ಆ ಮೂಲಕ ಇತಿಹಾಸ ನಿರ್ಮಿಸುತ್ತಿದ್ದಾರೆ. ಬಸವಾದಿ ಶರಣ ಕಾಯಕ, ದಾಸೋಹ ತತ್ವ ನಮಗೆ ಪ್ರೇರಣೆ ಎಂದು ಹೇಳುವ ಮೂಲಕ ಸದನದಲ್ಲಿ ಬಜೆಟ್​ ಮಂಡಿಸುತ್ತಿದ್ದಾರೆ.

ಬಜೆಟ್​​ ಗಾತ್ರವೆಷ್ಟು?

ವರನಟ ರಾಜ್​ಕುಮಾರ್​ರವರ ‘ಆಗದು ಎಂದು ಕೈ ಕಟ್ಟಿ ಕುಳಿತರೆ’ ಹಾಡನ್ನು ಪ್ರಸ್ತಾಪಿಸಿ ಬಜೆಟ್​ ಮಂಡಿಸುತ್ತಿದ್ದಾರೆ. ಕಳೆದ ಬಾರಿ ಜುಲೈನಲ್ಲಿ 3.27 ಲಕ್ಷ ಕೋಟಿಯ ಬಜೆಟ್​ ಮಂಡಿಸಿದ್ದರು. ಆದರೆ ಈ ಬಾರಿ ಬಜೆಟ್ ಗಾತ್ರ 3, 71, 383 ಕೋಟಿಯದ್ದಾಗಿದೆ.

2024-25ರಲ್ಲಿ 57 ಸಾವಿರ ಕೋಟಿ 5 ಗ್ಯಾರಂಟಿಗಳಿಗೆ ಹಂಚಿಕೆ ಮಾಡಲಾಗ್ತಿದೆ. ಜನರ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ, ವಾಸದ ಭದ್ರತೆ ಯೋಜನೆ ಬಗ್ಗೆ ಒತ್ತು ನೀಡಿದೆ.

ಅತ್ಯಂತ ಕೀಳಾದವನೂ ಮೇಲಾಗಬೇಕು

ಬಜೆಟ್​ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯನವರು, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಸರ್ವತ್ರ ವ್ಯಾಪಿಸಬೇಕು. ಅತ್ಯಂತ ಕೀಳಾದವನೂ ಮೇಲಾಗುವಂತೆ ಆಗಬೇಕು. ಕೋಟ್ಯಂತರ ಜನರ ಕೈಗೆ ಗ್ಯಾರಂಟಿ ಯೋಜನೆಗಳ ಹಂಚಿಕೆಯಾಗಬೇಕು. ವಾರ್ಷಿಕ 50-55 ಸಾವಿರ ರೂ. ಪ್ರತಿ ಕುಟುಂಬಕ್ಕೆ ಒದಗಿಸಲಾಗುತ್ತೆ ಎಂದು. ಹೇಳಿದ್ದಾರೆ.

ಚುನಾವಣಾ ಗಿಮಿಕ್ ಅಲ್ಲ

ಭಾರತ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಟ್ಟಿದೆ. ದುಡಿಮೆಯ ಪಾಲು ಹಂಚಬೇಕೆಂಬುದು ನಮಗೆ ಮಾರ್ಗದರ್ಶನ. ಗ್ಯಾರಂಟಿ ಯೋಜನೆಗಳನ್ನ ಅತ್ಯಂತ ಕಡಿಮೆ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಅಲ್ಲ. ನಮ್ಮ ಕಾರ್ಯಕರ್ತರು ಸಂಗ್ರಹಿಸಿದ ಅಭಿಪ್ರಾಯವನ್ನು ಜಾರಿ ಮಾಡಲಾಗುತ್ತಿದೆ. ಸರ್ವೋದಯ, ಸಮನ್ವಯ ದೃಷ್ಟಿ ಎಲ್ಲೆಲ್ಲೂ ತಾಂಡವವಾಡಬೇಕು. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ತ್ವರಿತ ಆರ್ಥಿಕ ಅಭಿವೃದ್ಧಿ ಗುರಿಯನ್ನು ಈ ಬಜೆಟ್​ ಹೊಂದಿದೆ ಎಂದು ಹೇಳಿದ್ದಾರೆ.

Budget 2024: ಈ ಬಾರಿ ಬಜೆಟ್​ ಗಾತ್ರವೆಷ್ಟು? ಗ್ಯಾರಂಟಿ ಹಂಚಿಕೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು?

https://newsfirstlive.com/wp-content/uploads/2024/02/CM_SIDDARAMAIHA_5.jpg

Load More