/newsfirstlive-kannada/media/post_attachments/wp-content/uploads/2024/04/Saree-5.jpg)
ಲೋಕಕದನದ ಯುದ್ಧದಲ್ಲಿ ಕಾಂಚಾಣದ ಕುಣಿತ ಜೋರಾಗಿದೆ. ಎಲೆಕ್ಷನ್ ಅಖಾಡದಲ್ಲಿ ಅಭಿವೃದ್ಧಿ ವಿಚಾರಗಳಿಂದ ಮತಕೇಳಲಾಗದ ಅಭ್ಯರ್ಥಿಗಳು ಆಮಿಷದ ಮೊರೆ ಹೋಗ್ತಿರುವ ಸುಳಿವು ಸಿಕ್ಕಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ ಲಕ್ಷಾಂತರ ರೂಪಾಯಿ ಹಣ. ಸೀರೆ, ಮದ್ಯವನ್ನ ಪೊಲೀಸರು ಸೀಜ್ ಮಾಡಿದ್ದಾರೆ.
ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಸಾವಿರಾರು ಸೀರೆಗಳು ಜಪ್ತಿ
ಗುಜರಾತ್‌ನ ಸೂರತ್‌ನಿಂದ ಚೈನೈಗೆ ಅಕ್ರಮವಾಗಿ ಸಾಗಾಟ ಮಾಡ್ತಿದ್ದ 40 ಸಾವಿರ ಸೀರೆ ಹಾಗೂ ಇತರ ವಸ್ತುಗಳನ್ನ ಬೀದರ್ ಚುನಾವಣಾ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಬೀದರ್‌ನ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಚೆಕ್‌ಪೋಸ್ಟ್‌ನಲ್ಲಿ ಲಾರಿ ಸಮೇತ 40 ಲಕ್ಷ ಮೌಲ್ಯದ 40 ಸಾವಿರ ಸೀರೆಗಳನ್ನ ವಾಣಿಜ್ಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಗುಜರಾತ್‌ನ ಸೂರತ್‌ನಿಂದ ತಮಿಳುನಾಡಿನ ಚೈನೈಗೆ ಅಕ್ರಮವಾಗಿ ಸಾಗಾಟ ಮಾಡ್ತಿದ್ದಾರೆಂಬ ಖಚಿತ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಮೇರೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಅದಿಕಾರಿಗಳು ಮನ್ನಳ್ಳಿ ಚೆಕ್‌ಪೋಸ್ಟ್ ಬಳಿ ತಪಾಸಣೆ ನಡೆಸಿ, ಸೂಕ್ತವಾದ ದಾಖಲೆ ಒದಗಿಸದ ಹಿನ್ನೆಲೆ ಲಾರಿ ಸಮೇತ ಸೀರೆಗಳನ್ನ ವಶಪಡಿಸಿಕೊಂಡಿದ್ದಾರೆ.
ಬಾಗಲಕೋಟೆಯಲ್ಲಿ ವಾಹನ ತಪಾಸಣೆ ವೇಳೆ ಹಣ ಸೀಜ್
ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆ ವಾಹನಗಳ ತಪಾಸಣೆ ವೇಳೆ ದಾಖಲೆಯಿಲ್ಲದ 14 ಲಕ್ಷ 88 ಸಾವಿರ ಹಣ ಜಪ್ತಿ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ನಾಯನೇಗಲಿ ಚೆಕ್‌ಪೋಸ್ಟ್‌ನಲ್ಲಿ ತಮಿಳುನಾಡಿನ ಮೂಲದ ಲಾರಿಯಲ್ಲಿ ಹಣ ಪತ್ತೆಯಾಗಿದ್ದು, ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು.. ಫ್ಲೈಯಿಂಗ್ ಸ್ಕ್ವಾಡ್ ಜಂಟಿ ತಪಾಸಣೆ ನಡೆಸಿ ಹಣಕ್ಕೆ ಸೂಕ್ತ ದಾಖಲೆ ಇರದ ಕಾರಣ ವಶಕ್ಕೆ ಪಡೆಯಲಾಗಿದೆ.
ಯಾದಗಿರಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಬೇಟೆ
ಯಾದಗಿರಿಯಲ್ಲೂ ಅಬಕಾರಿ ಇಲಾಖೆ ಅಧಿಕಾರಿಗಳು ಅಪಾರ ಪ್ರಮಾಣದ ಮದ್ಯ ವಶಕ್ಕೆ ಪಡೆದಿದ್ದಾರೆ.. ಖಚಿತ ಮಾಹಿತಿ ಮೆರೆಗೆ ಬೈಕ್ ತಪಾಸಣೆ ನಡೆಸಿದ ಅಧಿಕಾರಿಗಳು, ಬೈಕ್ನಲ್ಲಿ ಸಾಗಿಸುತ್ತಿದ್ದ ತೆಲಂಗಾಣ ಮೂಲದ 23.4 ಲೀಟರ್ ಮದ್ಯವನ್ನ ಜಪ್ತಿ ಮಾಡಿದ್ದಾರೆ. ಮದ್ಯವನ್ನ ಸೀಜ್ ಮಾಡುವುದರ ಜೊತೆಗೆ ಆರೋಪಿಯನ್ನ ಬಂಧಿಸಿ ಪ್ರಕರಣ ದಾಖಲಿಸಿ, ವಿಚಾರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಹವಾಮಾನ ಇಲಾಖೆಯಿಂದ ಗುಡ್ ನ್ಯೂಸ್.. ಬೆಂಗಳೂರು ಸೇರಿ ರಾಜ್ಯದ ಈ ಭಾಗಗಳಲ್ಲಿ ಮಳೆಯ ಮುನ್ಸೂಚನೆ
ಒಟ್ಟಾರೆ, ಚುನಾವಣೆ ವೇಳೆ ರಾಜ್ಯದಲ್ಲಿ ದಾಖಲೆ ಇಲ್ಲದ ಕೋಟಿ ಕೋಟಿ ಹಣ ಸೀಜ್ ಆಗುತ್ತಲೇ ಇದೆ. ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಅಕ್ರಮ ಹಣ ಸಾಗಾಟಕ್ಕೆ ಕಡಿವಾಣ ಹಾಕ್ತಿದ್ದಾರೆ. ಆದ್ರೆ, ಮತದಾರರು ಹಣ, ಹೆಂಡ, ಗಿಫ್ಟ್‌ಗಳಿಗೆ ಮರುಳಾಗದೆ ಎಚ್ಚೆತ್ತುಕೊಳ್ಳಬೇಕಿದೆಯಷ್ಟೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ