ವೀಲ್ಹಿಂಗ್ ಮಾಡಿದ್ರೆ ಇನ್ಮುಂದೆ ತಪ್ಪಿಸಿಕೊಳ್ಳೋದು ಸುಲಭ ಇಲ್ಲ.. ಹೈಕೋರ್ಟ್​​ ಸರ್ಕಾರಕ್ಕೆ ಹೇಳಿದ್ದೇನು..?

author-image
Ganesh
Updated On
ವೀಲ್ಹಿಂಗ್ ಮಾಡಿದ್ರೆ ಇನ್ಮುಂದೆ ತಪ್ಪಿಸಿಕೊಳ್ಳೋದು ಸುಲಭ ಇಲ್ಲ.. ಹೈಕೋರ್ಟ್​​ ಸರ್ಕಾರಕ್ಕೆ ಹೇಳಿದ್ದೇನು..?
Advertisment
  • ವೀಲ್ಹಿಂಗ್​ ಮಾಡಿ ಪೊಲೀಸ್ರ ಮೇಲೆ ಹಲ್ಲೆ.. ಯುವಕ ಅರೆಸ್ಟ್!
  • ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಪೀಠ!
  • ರಾಜ್ಯ ಸರ್ಕಾರಕ್ಕೆ ಖಡಕ್ ಆದೇಶ ಪಾಸ್ ಮಾಡಿದ ಹೈಕೋರ್ಟ್

ವೀಲ್ಹಿಂಗ್ ಮಾಡಿ ದಾರಿ ಹೋಕರಿಗೆ, ವಾಹನ ಸವಾರರಿಗೆ ಕಿರಿಕಿರಿ ಕೊಡ್ತಿರುವ ಕಿಡಿಗೇಡಿ ಹುಡುಗರ ಆಟಕ್ಕೆ ಕೊನೆಯೇ ಇಲ್ಲವಾಗಿದೆ. ಅವರು ಆಡಿದ್ದೇ ಆಟ.. ಹೋಗಿದ್ದೇ ದಾರಿ.. ಈ ಸಮಸ್ಯೆಗೆ ಪರಿಹಾರವೇ ಸಿಗ್ತಿಲ್ಲ.. ಯಾಕಂದ್ರೆ ನಮ್ಮಲ್ಲಿ ಹಾಕೋ ದಂಡ, ಕೊಡೋ ಶಿಕ್ಷೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿತ್ತು. ನೋಡೋವರೆಗೆ ನೋಡಿದ ಹೈಕೋರ್ಟ್‌ ಈ ವಿಚಾರದಲ್ಲಿ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿದೆ.

ಜಾಮೀನು ಅರ್ಜಿ ವಜಾ

ಕೆಲ ದಿನಗಳ ಹಿಂದೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಅರ್ಬಾಜ್‌ ಖಾನ್‌ ಅನ್ನೋ ಯುವಕ ನಡುರಸ್ತೆಯಲ್ಲಿ ವೀಲ್ಹಿಂಗ್​ ಮಾಡಿ, ಅದನ್ನ ಪ್ರಶ್ನೆ ಮಾಡೋಕೆ ಬಂದ ಪೊಲೀಸ್ರ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿದ್ದ. ಆತ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸುವಾಗ್ಲೇ ನ್ಯಾಯಮೂರ್ತಿ ವಿ. ಶ್ರೀಶಾನಂದ್‌ ಅವರ ಪೀಠ ಖಡಕ್ ಸೂಚನೆ ಕೊಟ್ಟಿದೆ.

ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ; ಫೋಟೋಸ್ ಇಲ್ಲಿವೆ!

publive-image

ಹೈಕೋರ್ಟ್ ಹೇಳಿದ್ದೇನು?

ಒಂದ್ಸಲ ವೀಲ್ಹಿಂಗ್​ ಮಾಡಿ ಜೈಲಿಗೆ ಹೋದ್ಮೇಲೆ ಸಲೀಸಾಗಿ ಜಾಮೀನು ಪಡೆದು ಹೊರಗೆ ಬರ್ತಾರೆ.. ಬಂದ್ಮೇಲೆ ಮತ್ತದೇ ಆಟ ಶುರು ಆಗುತ್ತೆ.. ಪದೇ ಪದೆ ಇಂತಹ ಕೃತ್ಯದಲ್ಲಿ ಭಾಗಿಯಾಗ್ತಾನೆ ಹೋಗ್ತಾರೆ.. ಹೀಗಾಗಿ ಇಂಥವ್ರಿಗೆ ತಕ್ಕ ಪಾಠ ಕಲಿಸ್ಬೇಕು ಅಂದ್ರೆ ಜಾಮೀನು ನೀಡ್ಬಾರದು ಅಂತ ನ್ಯಾಯಮೂರ್ತಿಗಳು ಹೇಳಿದರು. ಅದ್ರಂತೆ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್, ವ್ಹೀಲಿಂಗ್‌ ತಡೆಗೆ ಕಠಿಣ ಕಾನೂನು ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ದೆ ಈಗಿರೋ ಕಾನೂನುಗಳು ಸಾಲದು, ಅದಕ್ಕಾಗಿ ಬಿಎನ್‌ಎಸ್ ಮತ್ತು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಸೂಚಿಸಿದೆ.

ಇದನ್ನೂ ಓದಿ: ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ತಂಗಿ ಮದುವೆಗೆ ದುನಿಯಾ ವಿಜಯ್ ಸಹಾಯ.. ಏನಂದ್ರು?

ಬೆಂಗಳೂರು ಸಂಚಾರ ಪೊಲೀಸರ ಪ್ರಕಾರ, 2022 ರಲ್ಲಿ ವೀಲ್ಹಿಂಗ್​ ಸ್ಟಂಟ್​ ಮಾಡೋ ವ್ಯಕ್ತಿಗಳ ವಿರುದ್ಧ 283 ಪ್ರಕರಣಗಳು ದಾಖಲಿಸಲಾಗಿದೆ.. 2023ರಲ್ಲಿ ಈ ಸಂಖ್ಯೆ 219ಕ್ಕೆ ಇಳಿದಿದೆ.. ಆದರೆ 2024 ರಲ್ಲಿ ಇದ್ದಕ್ಕಿದ್ದಂತೆ 532ಕ್ಕೆ ಏರಿದೆ. ಒಟ್ಟಾರೆ, ಹೆಚ್ಚಾಗ್ತಿರೋ ‘ವ್ಹೀಲಿಂಗ್‌ ಪ್ರಕರಣಗಳನ್ನ ಕಂಡ ಹೈಕೋರ್ಟ್​ ವೀಲ್ಹಿಂಗ್​​ ತಡೆಗೆ ಕಠಿಣ ನಿಯಮ ಸೇರಿಸಿ’ ಅಂತ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸೋ ಇನ್ಮುಂದೆ ವೆಹಿಕಲ್​ ಹಿಡಿದು ರಸ್ತೆಗೆ ಬರೋ ಮುನ್ನ ಎಚ್ಚರವಾಗಿರಿ, ಇನ್ಮುಂದೆ ವೀಲ್ಹಿಂಗ್​ ಮಾಡಿ ಸಿಕ್ಕಿ ಬಿದ್ರೆ ಕಠಿಣ ಸಜೆ ಫಿಕ್ಸ್​.

ಇದನ್ನೂ ಓದಿ: ಸಿಂಧೂ ನದಿ ನೀರಿಗಾಗಿ ಮತ್ತೆ ಬೇಡಿದ್ದ ಪಾಕ್​ಗೆ ಖಡಕ್ ಉತ್ತರ.. ಏನಂದ್ರು ಜೈಶಂಕರ್​..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment