/newsfirstlive-kannada/media/post_attachments/wp-content/uploads/2024/07/sardaar-2.jpg)
ಕಾರ್ತಿ ನಟನೆಯ ‘ಸರ್ದಾರ್​​ 2’ ಸಿನಿಮಾದ ಸೆಟ್​ನಲ್ಲಿ ಅವಘಡ ಸಂಭವಿಸಿದೆ. ಚಿತ್ರೀಕರಣದ ವೇಳೆ ಸ್ಟಂಟ್​ಮ್ಯಾನ್​ ಸಾವನ್ನಪ್ಪಿದ ಘಟನೆ ನಡೆದಿದೆ. ಎಝುಮಲೈ ಎಂಬ ಸ್ಟಂಟ್​ಮ್ಯಾನ್​​​ ಆ್ಯಕ್ಷನ್​ ಸೀಕ್ವೆನ್ಸ್​ ಚಿತ್ರೀಕರಣದ ವೇಳೆ 20 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಮಾಹಿತಿಗಳ ಪ್ರಕಾರ, ಸ್ಟಂಟ್​ಮ್ಯಾನ್​​ ಎಝುಮಲೈ 20 ಅಡಿ ಎತ್ತರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಎದೆಯ ಬಳಿ ತೀವ್ರವಾದ ಗಾಯವಾಗಿತ್ತು. ಶ್ವಾಸಕೋಶದಲ್ಲಿ ರಕ್ತಸ್ರಾವ ಉಂಟಾಗಿತ್ತು. ಪರಿಣಾಮ ಸ್ಟಂಟ್​ ಮ್ಯಾನ್​ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದರ್ಶನ್ 14 ದಿನಗಳ ನ್ಯಾಯಾಂಗ ಬಂಧನ ಅಂತ್ಯ.. ಅಂದುಕೊಂಡಿದ್ದ ಬೇಡಿಕೆಗಳಿಂದು ಈಡೇರುತ್ತಾ?
ಕೂಡಲೇ ಎಝುಮಲೈ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಈ ಘಟನೆ ಬೆನ್ನಲ್ಲೇ ‘ಸರ್ದಾರ್​ 2’ ಸಿನಿಮಾ ಚಿತ್ರೀಕರಣ ನಿಲ್ಲಿಸಲಾಗಿದೆ.
/newsfirstlive-kannada/media/post_attachments/wp-content/uploads/2024/07/sardaar-2-1.jpg)
‘ಸರ್ದಾರ್​ 2’ ಸಿನಿಮಾದ ಚಿತ್ರೀಕರಣ ಕಳೆದ ವಾರದಿಂದ ಪ್ರಾರಂಭವಾಗಿದೆ. ಜುಲೈ 15ರಿಂದ ಚೆನ್ನೈ ಭಾಗದಲ್ಲಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಆದರೆ ಚಿತ್ರೀಕರಣ ಪ್ರಾರಂಭವಾದ 2 ದಿನಗಳ ನಂತರ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಮಳೆಯ ರಣಾರ್ಭಟ.. ಇಂದು ಈ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
‘ಸರ್ದಾರ್​ 2’ ಸಿನಿಮಾ ಆ್ಯಕ್ಷನ್​ ಥ್ರಿಲ್ಲರ್​​ ಸಿನಿಮಾವಾಗಿದೆ. ಇದು ‘ಸರ್ದಾರ್’​ ಸಿನಿಮಾದ ಮುಂದುವರಿದ ಭಾಗವಾಗಿದೆ. ಈ ಸಿನಿಮಾವನ್ನು ಪಿ ಎಸ್​ ಮಿತ್ರನ್​​ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಎಸ್​ ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us