/newsfirstlive-kannada/media/post_attachments/wp-content/uploads/2025/02/karthik.jpg)
ಕನ್ನಡದ ಬಿಗ್​ಬಾಸ್​ ಸೀಸನ್​ 11 ಮೊನ್ನೆಯಷ್ಟೇ ಮುಕ್ತಾಗೊಂಡಿದೆ. ಆದ್ರೆ ಬಿಗ್​ಬಾಸ್​ ಸೀಸನ್ 10ರ ಸ್ಪರ್ಧಿಗಳನ್ನು ವೀಕ್ಷಕರು ಇನ್ನೂ ಮರೆತ್ತಿಲ್ಲ. ಅದರಲ್ಲೂ ಬಿಗ್​ಬಾಸ್​ ಸೀಸನ್ 10ರ ವಿನ್ನರ್​ ಆಗಿ ಹೊರ ಹೊಮ್ಮಿದ ಕಾರ್ತಿಕ್​ ಮಹೇಶ್ ಸಖತ್​ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಸರಿಗಮಪ ವೇದಿಕೆಗೆ ಶಿವಣ್ಣ ಸಡನ್ ಎಂಟ್ರಿ ಕೊಡಲು ಒಂದು ಬಹುಮುಖ್ಯ ಕಾರಣವಿತ್ತು; ಏನದು?
ಬಿಗ್​ಬಾಸ್​ನಿಂದ ಆಚೆ ಬಂದ ಬೆನ್ನಲ್ಲೇ ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದರು. ಇದೀಗ ನಟ ಕಾರ್ತಿಕ್ ಮಹೇಶ್ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಚಿತ್ರದ ಚಿತ್ರೀಕರಣಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಡೊಳ್ಳು ರಿಲೀಸ್ ಆದ ಬೆನ್ನಲ್ಲೇ ರಾಮರಸ ಸಿನಿಮಾ ಶೂಟಿಂಗ್​ನಲ್ಲಿ ಸಖತ್ ಬ್ಯುಸಿಯಾಗಿದ್ದರು. ಇನ್ನೂ ರಾಮರಸ ರಿಲೀಸ್ ಆಗುವ ಮುನ್ನವೇ ಮತ್ತೊಂದು ಸಿನಿಮಾದಲ್ಲಿ ನಟ ಕಾರ್ತಿಕ್ ಮಹೇಶ್​ ಅಭಿನಯಿಸುತ್ತಿದ್ದಾರೆ.
View this post on Instagram
ಹೌದು, ನಟ ಕಾರ್ತಿಕ್​ ಮಹೇಶ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಸಿನಿಮಾದ ಪೋಸ್ಟರ್‌ವೊಂದು ರಿಲೀಸ್ ಮಾಡಿದ್ದಾರೆ. ಅದರ ಜೊತೆಗೆ "ಎಲ್ಲರಿಗೂ ನಮಸ್ತೆ, ಒಳ್ಳೆ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಉದ್ದೇಶದಿಂದ ಹಾಗು ನಿಮ್ಮೆಲ್ಲರ ಆಶೀರ್ವಾದದೊಂದಿಗೆ AVR ENTERTAINER ಅನ್ನು ಅರವಿಂದ್ ವೆಂಕಟೇಶ್ ರೆಡ್ಡಿ ಶುಭಾರಂಭ ಮಾಡುತ್ತಿದ್ದಾರೆ. ಹಾಗೂ ಈ ಚಿತ್ರವನ್ನು ನಿಮ್ಮ ಮುಂದೆ ಮೊದಲು ಪ್ರಸ್ತುತಪಡಿಸುತ್ತಿದ್ದಾರೆ. ರಿಚಿ ರಿಚ್ (RICHIE RICH). ರಿದ್ದೇಶ್ ಚಿನ್ನಯ್ಯ (RICHIE) ಆದ ಇವನು ಶ್ರೀಮಂತ (RICH) ಆಗುವುದು ಹೇಗೆಂದು ಯೋಚಿಸುತ್ತಿದ್ದಾನೆ. ಗೊತ್ತಿದ್ದವರು ಇವನಿಗೆ ಸಹಾಯ ಮಾಡಬಲ್ಲಿರಾ?” ಎಂದು ಪ್ರೇಕ್ಷಕರಿಗೆ ಪ್ರಶ್ನೆ ಹಾಕಿದ್ದಾರೆ.
ಹೌದು, ಕಾರ್ತಿಕ್ ಮಹೇಶ್ ಮುಂದಿನ 'ರಿಚಿ ರಿಚ್' ಚಿತ್ರಕ್ಕೆ ಸಿಂಪಲ್ ಸುನಿ ಅವರು ನಿರ್ದೇಶಕರಾಗಿದ್ದಾರೆ. ಹೀಗಾಗಿ ಕನ್ನಡ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಈ ಹಿಂದೆ 'ಸಿಂಪಲ್ಲಾಗೊಂದು ಲವ್ ಸ್ಟೋರಿ, ಒಂದು ಸರಳ ಪ್ರೇಮ ಕಥೆ ಮೂಲಕವೇ ಪ್ರೇಕ್ಷಕರನ್ನು ಗೆದ್ದ ಸಿಂಪಲ್ ನಿರ್ದೇಶಕ, ಈಗ ಮತ್ತೊಂದು ವಿಭಿನ್ನ ಕಥಾಹಂದರ ಸಿನಿಮಾದಲ್ಲಿ ಕಾರ್ತಿಕ್ ಜತೆ ಕೈಜೋಡಿಸಿದ್ದಾರೆ. ವಿಶೇಷ ಎಂದರೆ ಇಂದು ಆತ್ಮೀಯ ಗೆಳೆಯರಾದ ವಿನಯ್​ ಗೌಡ ಹಾಗೂ ಕಾರ್ತಿಕ್ ಮಹೇಶ್​ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ. ಬಿಗ್​ಬಾಸ್​ ಮಾಜಿ ಸ್ಪರ್ಧಿ ವಿನಯ್​ ಗೌಡ ನಟ ದರ್ಶನ್​ ಅವರ ಆಪ್ತನ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸೋದಕ್ಕೆ ಸಜ್ಜಾಗಿದ್ದಾರೆ.
​ ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ