newsfirstkannada.com

BBK10: ಸಣ್ಣ ಅವಕಾಶಕ್ಕಾಗಿ ಸೈಕಲ್ ಹೊಡೆಯುತ್ತಿದ್ದ.. ಕಷ್ಟದಲ್ಲೂ ಕಾರ್ತಿಕ್‌ ಲೈಫ್ ಚೇಂಚ್ ಆಗಿದ್ದು ಹೇಗೆ?

Share :

Published February 1, 2024 at 6:22pm

Update February 1, 2024 at 6:15pm

    ಕಾರ್ತಿಕ್​ ಮಹೇಶ್​ ಬದುಕಲ್ಲಿ ಅಮ್ಮ ಹಾಗೂ ತಂಗಿನೇ ದೊಡ್ಡ ಪ್ರಪಂಚ

    ಕಾರ್ತಿಕ್​​ ಮಹೇಶ್​ರ ಅದೃಷ್ಟದ ಬಾಗಿಲು ತೆರೆದಿದ್ದು ಬಿಗ್​ಬಾಸ್​ ಮನೆ

    ಸ್ಪರ್ಧಿಗಳ ಬದುಕನ್ನೇ ಅದಲು ಬದಲು ಮಾಡಿದ ಈ ಬಿಗ್​ಬಾಸ್​ ಶೋ

ಒಂದು ಶೋ ಹಿಂದೆ ಎಷ್ಟೋ ಕುಟುಂಬಗಳು ತುತ್ತು ಅನ್ನ ಕಂಡುಕೊಳ್ಳುತ್ತೆ. ಯಾವುದೇ ಶೋ ಆದ್ರೂ ವೀಕ್ಷಕರಿಗೆ ಮನರಂಜನೆ ಹಬ್ಬ ನೀಡಿದ್ರೆ ಆ ಶೋನಲ್ಲಿ ಸ್ಪರ್ಧಿಸಿದ ಸ್ಪರ್ಧಿಗಳಿಂದ ಹಿಡಿದು ತೆರೆ ಹಿಂದೆ ಕೆಲಸ ಮಾಡೋ ತಂತ್ರಜ್ಞ ವರ್ಗಕ್ಕೆ ಹೊಸ ಭರವಸೆ ಮೂಡಿಸುತ್ತೆ. ಸದ್ಯ ಬಿಗ್​​ಬಾಸ್​ನಿಂದ ಟ್ರೋಫಿ ಗೆದ್ದೋರು ಒಬ್ಬರೇ ಆದ್ರು ಎಷ್ಟೋ ಸ್ಪರ್ಧಿಗಳ ಲೈಫ್​ ತಿರುವು ಪಡೆದುಕೊಂಡಿದೆ. ಇದೀಗ ಅವರ ಬದುಕು ಬದಲಾಗಿದೆ.

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್ ಸೀಸನ್​​ ವಿನ್ನರ್​ ಆಗಿರೋ ಕಾರ್ತಿಕ್ ಮಹೇಶ್​ ಹೊರ ಹೊಮ್ಮಿದ್ದಾರೆ. ಕಾರ್ತಿಕ್​ ಮಹೇಶ್​ 9 ವರ್ಷಗಳಿಂದ ಸಿನಿಮಾ, ಸೀರಿಯಲ್​ ಇಂಡಸ್ಟ್ರಿಯಲ್ಲಿ ಸೈಕಲ್​ ಹೊಡೆಯುತ್ತಿದ್ದ ಪ್ರತಿಭಾವಂತ ನಟ. ಪ್ರತಿಭೆ ಇದ್ದರೆ ಸಾಕಾಗೋದಿಲ್ಲ. ಹಿಂದೆ ಬೆನ್ನು ತಟ್ಟೋ ಕೈ ಕೂಡ ಬೇಕು ಅನ್ನೋದು ಕಾರ್ತಿಕ್​ ಬದುಕಿನ ದಾರಿ ತಿಳಿದರೆ ಅರ್ಥ ಆಗುತ್ತೆ. ಜೇಬಲ್ಲಿ ಒಂದು ರೂಪಾಯಿ ದುಡ್ಡಿಲ್ಲದೇ ಅವಕಾಶಕ್ಕಾಗಿ ಹುಡುಕಾಟ ನಡೆಸಿದ ಹುಡುಗನಿಗೆ ಅದೃಷ್ಟದ ಬಾಗಿಲು ತೆರೆದಿದ್ದು ಬಿಗ್​ ಬಾಸ್​ ಮನೆ.

ಬದುಕಿನ ಆಧಾರಸ್ತಂಭವಾಗಿದ್ದ ಅಪ್ಪನನ್ನ ಕಳೆದುಕೊಂಡಿದ್ದ ಕಾರ್ತಿಕ್​ ಬದುಕಲ್ಲಿ ಅಮ್ಮ ಹಾಗೂ ತಂಗಿನೇ ಪ್ರಪಂಚ. ಬಿಗ್​ಬಾಸ್​ ಮನೆಯಿಂದ ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಖಾಲಿ ಜೇಬು ತುಂಬಿದೆ. ಅಮ್ಮನಿಗೆ ಮನೆ ಕಟ್ಟೋ ಭರವಸೆ ಮೂಡಿದೆ. ಓಡಾಡೋಕೆ ಹೊಸ ಕಾರು, ಬೈಕ್​ ಸಿಕ್ಕಿದೆ. ಬೇರೆ ಬೇರೆ ಮೂಲಗಳಿಂದ ಲಕ್ಷ್ಮೀ ಒಲಿದು ಬರುತ್ತಿದ್ದಾಳೆ. ಕಾರ್ತಿಕ್​ ಅವರ ಬದುಕಿನ ಭಾಗ್ಯದ ಬಾಗಿಲು ತೆರೆದಿದೆ ಬಿಗ್​ಬಾಸ್​.

ಇದನ್ನು ಓದಿ: BBK10: ಬಿಗ್​ಬಾಸ್​ ಬಳಿಕ ಮತ್ತೊಂದು ರಿಯಾಲಿಟಿ ಶೋಗೆ ರೆಡಿಯಾದ ಡ್ರೋನ್​ ಪ್ರತಾಪ್; ಯಾವುದು?

ಬಿಗ್​ಬಾಸ್​ ಮನೆಗೆ ಕಾರ್ತಿಕ್​ ಗ್ರ್ಯಾಂಡ್​​ ಆಗಿ ಎಂಟ್ರಿ ಕೊಟ್ಟಿದ್ದರು. ಬಿಗ್​ಬಾಸ್​ ಕೊಟ್ಟ ಎಲ್ಲಾ ಟಾಸ್ಕ್​ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಜೊತೆಗೆ ಬಿಗ್​​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಬಿಗ್​ಬಾಸ್​ ಶುರುವಾದಾಗಿನಿಂದ ಕೊನೆಯ ತನಕ ಚೆನ್ನಾಗಿ ಆಟವನ್ನು ಆಡಿ ವಿನ್ನರ್​ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಸಣ್ಣ ಅವಕಾಶಕ್ಕಾಗಿ ಸೈಕಲ್ ಹೊಡೆಯುತ್ತಿದ್ದ.. ಕಷ್ಟದಲ್ಲೂ ಕಾರ್ತಿಕ್‌ ಲೈಫ್ ಚೇಂಚ್ ಆಗಿದ್ದು ಹೇಗೆ?

https://newsfirstlive.com/wp-content/uploads/2024/02/kartik-bbk.jpg

Load More