ಫ್ಯಾನ್ಸ್​ಗೆ ಗುಡ್​ನ್ಯೂಸ್​​ ಕೊಟ್ಟ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ ಮಹೇಶ್​; ಏನದು?

author-image
Veena Gangani
Updated On
ಫ್ಯಾನ್ಸ್​ಗೆ ಗುಡ್​ನ್ಯೂಸ್​​ ಕೊಟ್ಟ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ ಮಹೇಶ್​; ಏನದು?
Advertisment
  • ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಆಗಿ ಹೊರಹೊಮ್ಮಿದ ಕಾರ್ತಿಕ್ ಮಹೇಶ್​
  • ಹೀರೋ ಲಾಂಚ್​ಗೆ ಬಂದ ಕಿಚ್ಚ ಸುದೀಪ್​ ಬಗ್ಗೆ ಕಾರ್ತಿಕ್ ಭಾವುಕ, ಥ್ಯಾಂಕ್ಸ್
  • ದೊಡ್ಡ ಘೋಷಣೆ ಇದೆ ಎಂದು ಕಿವಿಗೆ ಹುಳು ಬಿಟ್ಟ ಕಾರ್ತಿಕ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್ 10​ರ ವಿನ್ನರ್​​ ಕಾರ್ತಿಕ್​ ಮಹೇಶ್​ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ‘BIG ANNOUNCEMENT TOMMORROW’ ಅಂತ ಹೊಸ ಫೋಟೋ ಶೇರ್​ ಮಾಡಿ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದರು.

ಇದನ್ನೂ ಓದಿ: ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?

publive-image

ಇದೀಗ ಕಾರ್ತಿಕ್​ ಮಹೇಶ್​ ಅವರು ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ. ಹೌದು, ಬಿಗ್​ಬಾಸ್​ 10 ವಿನ್ನರ್​ ಕಾರ್ತಿಕ್​ ಮಹೇಶ್​​ ಅವರು ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕಾರ್ತಿಕ್​ ಮಹೇಶ್ ನಟನೆಯ ‘ರಾಮರಸ’ ಸಿನಿಮಾದ ಸುದ್ದಿಗೋಷ್ಠಿಗೆ ನಟ ಕಿಚ್ಚ ಸುದೀಪ್​ ಅವರು ಅತಿಥಿಯಾಗಿ ಬಂದಿದ್ದರು.

ನೂತನ ‘ರಾಮರಸ’ ಸಿನಿಮಾದ ಹೀರೋ ಆಗಿ ಕಾರ್ತಿಕ್​ ಮಹೇಶ್​ ಅವರನ್ನು ಕಿಚ್ಚ ಸುದೀಪ್​ ಲಾಂಚ್​ ಮಾಡಿದ್ದಾರೆ. ಕಿಚ್ಚ ಸುದೀಪ್​ ಅವರಿಂದ ಹೀರೋ ಆಗಿ ಲಾಂಚ್​ ಆದ ಕಾರ್ತಿಕ್​ ಮಹೇಶ್​ ಅವರು ಫುಲ್ ಖುಷ್​ ಆಗಿದ್ದಾರೆ. ಜೊತೆಗೆ ಅಭಿಮಾನಿಗಳು ಕೂಡ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment