newsfirstkannada.com

ಹಾಸನದಲ್ಲಿ ಪೆನ್‌ಡ್ರೈವ್ ಹಂಚಿದ್ಯಾರು? ಸ್ಫೋಟಕ ಟ್ವಿಸ್ಟ್ ಕೊಟ್ಟ ಚಾಲಕ ಕಾರ್ತಿಕ್‌; ಬಿಜೆಪಿ ನಾಯಕ ಹೇಳಿದ್ದೇನು?

Share :

Published April 30, 2024 at 12:22pm

    ನನ್ನ ಹತ್ತಿರ ಬರೋದಕ್ಕೆ ಮುಂಚೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನವಾಣೆ

    ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಬಂದಿದ್ದಾನೆ

    ನ್ಯೂಸ್‌ ಫಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ದೇವರಾಜೇಗೌಡ

ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಶುರುವಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಮೇಲೆ ಈ ಕೇಸ್ ಹಲವು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಇಂದು ಪ್ರಜ್ವಲ್ ರೇವಣ್ಣ ಅವರ ಬಳಿ 15 ವರ್ಷ ಡ್ರೈವರ್ ಆಗಿದ್ದ ಕಾರ್ತಿಕ್ ಸ್ಫೋಟಕ ಹೇಳಿಕೆ ನೀಡಿದ್ದು, ಹಾಸನದಲ್ಲಿ ಪೆನ್‌ಡ್ರೈವ್ ರಿಲೀಸ್ ಮಾಡಿದ್ದು ಯಾರು ಅನ್ನೋದರ ಬಗ್ಗೆಯೇ ಚರ್ಚೆಯಾಗುತ್ತಿದೆ.

ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಕಾರು ಚಾಲಕನಾಗಿದ್ದ ಕಾರ್ತಿಕ್ ಇದೀಗ ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಎಸ್‌ಐಟಿ ವಿಚಾರಣೆಗೆ ತೆರಳುವ ಮುನ್ನ ಡ್ರೈವರ್ ಕಾರ್ತಿಕ್ ವಿಡಿಯೋ ಮಾಡಿದ್ದು, ಬಿಜೆಪಿ ಮುಖಂಡ ದೇವರಾಜೇಗೌಡ ಅವರ ಮೇಲೆ ಆರೋಪ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಸ್ಟೇ ತಂದ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೆ ವಕೀಲರೂ ಆದ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ಭೇಟಿ ಆಗಿದ್ದೆ. ಈ ವೇಳೆ ದೇವರಾಜೇಗೌಡ ಅವರಿಗೆ ಪೆನ್‌ಡ್ರೈವ್‌ನ ಒಂದು ಕಾಪಿ ಕೊಟ್ಟಿದ್ದೇನೆ. ಅವರು ಯಾವುದೇ ಸ್ವಾರ್ಥಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಹೇಳಿದ್ದೆ ನಂಬಿ ಕೊಟ್ಟಿದ್ದೇನೆ. ಕಾಂಗ್ರೆಸ್ ನಾಯಕರಿಗೆ ನಾನು ಪೆನ್‌ಡ್ರೈವ್ ಕೊಟ್ಟಿಲ್ಲ. ತಾವು ಬಚಾವ್ ಆಗುವುದಕ್ಕೋಸ್ಕರ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪೆನ್ ಡ್ರೈವ್ ಹಂಚಿಕೆ ವಿಚಾರವಾಗಿ ಹೆಚ್​ಡಿಕೆ ಗರಂ.. ಇದರ ಹಿಂದೆ ಮಹಾನ್ ನಾಯಕನ ಕೈವಾಡ ಎಂದ ಕುಮಾರಸ್ವಾಮಿ 

ಡ್ರೈವರ್ ಕಾರ್ತಿಕ್ ಅವರ ಹೇಳಿಕೆ ಬಿಡುಗಡೆಯಾದ ಮೇಲೆ ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ನ್ಯೂಸ್‌ ಫಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನೊಬ್ಬ ಬಿಜೆಪಿ ಮುಖಂಡ ಅನ್ನೋದಕ್ಕಿಂತ ನಾನು ವಕೀಲನಾಗಿದ್ದೇನೆ. ನನ್ನ ಕಕ್ಷಿದಾರ ಅವರು. ವಕೀಲರಿಗೆ ಏನು ಕೊಡಬೇಕೋ ಅದನ್ನು ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ.

ಇನ್ನು, ದೇವರಾಜೇಗೌಡ ಅವರು ಡ್ರೈವರ್ ಕಾರ್ತಿಕ್‌ ನನ್ನ ಹತ್ತಿರ ಬರೋದಕ್ಕೆ ಮುಂಚೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನವಾಣೆ ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದೇನೆ. ಡ್ರೈವರ್ ಕಾರ್ತಿಕ್ ಅವರ ಜೊತೆ ಪುಟ್ಟರಾಜು ಅಂತ ಮತ್ತೊಬ್ಬರಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದೇನೆ ಎಂದಿದ್ದಾರೆ. ಇದಾದ ಮೇಲೆ ರಾಜ್ಯ ಬಿಜೆಪಿ, ಕೇಂದ್ರ ನಾಯಕರಿಗೆ ನಾನು ಪತ್ರ ಬರೆದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಹಾಸನ ಪೆನ್‌ಡ್ರೈವ್ ಕೇಸ್‌ಗೆ ಬಿಗ್ ಟ್ವಿಸ್ಟ್; ಅಶ್ಲೀಲ ವಿಡಿಯೋ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಡ್ರೈವರ್‌ ಕಾರ್ತಿಕ್ 

ವಕೀಲನಾಗಿ ಕಕ್ಷಿದಾರನ ಬಳಿ ನಾನು ಸಾಕ್ಷಿ ಕೇಳಿದ್ದಾನೆ. ಕಾಂಗ್ರೆಸ್‌ನವರ ಬಳಿ ಆತ ಹೋಗಿದ್ದಾನೆ. ನಾನು ಚುನಾವಣೆಯಲ್ಲಿ ನಿಂತಾಗ ಪೆನ್‌ಡ್ರೈವ್ ಬಳಸಿಕೊಳ್ಳಬಹುದಿತ್ತು. ಇದೀಗ ಎಸ್‌ಐಟಿ ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ. ನನ್ನಿಂದ ಯಾರಿಗೆ ಪೆನ್‌ಡ್ರೈವ್ ಹೋಗಿದೆ ಅನ್ನೋ ಸತ್ಯ ಹೊರ ಬರಲಿ ಎಂದು ಹೊಳೆನರಸೀಪುರ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನದಲ್ಲಿ ಪೆನ್‌ಡ್ರೈವ್ ಹಂಚಿದ್ಯಾರು? ಸ್ಫೋಟಕ ಟ್ವಿಸ್ಟ್ ಕೊಟ್ಟ ಚಾಲಕ ಕಾರ್ತಿಕ್‌; ಬಿಜೆಪಿ ನಾಯಕ ಹೇಳಿದ್ದೇನು?

https://newsfirstlive.com/wp-content/uploads/2024/04/Hassan-Prajwal-Revanna-5.jpg

Load More