/newsfirstlive-kannada/media/post_attachments/wp-content/uploads/2025/04/KARUN_NAIR-1.jpg)
ಕರುಣ್ ನಾಯರ್ ಮತ್ತು ಶ್ರೇಯಸ್ ಅಯ್ಯರ್. ಇಂಗ್ಲೆಂಡ್ ಪ್ರವಾಸಕ್ಕೆ ಯಾರು ಇರ್ತಾರೋ ಇಲ್ವೋ.. ಇವರಿಬ್ಬರ ಆಯ್ಕೆ ಬಹುತೇಕ ಫಿಕ್ಸ್ ಅಂತಾನೇ ಎಲ್ಲರ ನಿರೀಕ್ಷೆಯಾಗಿತ್ತು. ಈ ಪೈಕಿ ಒಬ್ಬರಿಗೆ ನ್ಯಾಯ ಮಾಡಿದ ಸೆಲೆಕ್ಷನ್ ಕಮಿಟಿ, ಮತ್ತೊಬ್ಬರಿಗೆ ಅನ್ಯಾಯ ಮಾಡಿದೆ.
ಟೆಸ್ಟ್ನಲ್ಲಿ ತ್ರಿಶತಕ ಸಿಡಿಸಿದ ಹೊರತಾಗಿಯೂ ದೇಶಿ ಕ್ರಿಕೆಟ್ನಲ್ಲಿ ರನ್ ಗಳಿಸಿದರು. ಸ್ಥಾನ ಸಿಗದ ಹತಾಶೆರಾಗಿದ್ದ ಕರುಣ್ ನಾಯರ್, ಡಿಯರ್ ಟೆಸ್ಟ್ ಕ್ರಿಕೆಟ್ ಗಿವ್ ಮಿ ಒನ್ ಮೋರ್ ಚಾನ್ಸ್ ಎಂದು ಅಂಗಲಾಚಿ ಮಾಡಿದ್ದ ಟ್ವೀಟ್. ಆದ್ರೀಗ ಅದೇ ಕರುಣ್ ನಾಯರ್ ಟ್ವೀಟ್ ಮತ್ತೆ ವೈರಲ್ ಆಗ್ತಿದೆ. ಇದಕ್ಕೆ ಕಾರಣ ಕರುಣ್ ನಾಯರ್ ಕಮ್ಬ್ಯಾಕ್.
ಇದನ್ನೂ ಓದಿ: ಟೀಂ ಇಂಡಿಯಾಗೆ ಗುಜರಾತ್ ತಂಡದಿಂದ 5 ಸ್ಟಾರ್ಗಳು ಆಯ್ಕೆ.. RCBಯಿಂದ ಎಷ್ಟು ಮಂದಿ ಸೆಲೆಕ್ಟ್..?
ಟೀಮ್ ಇಂಡಿಯಾಗೆ ಡೆಬ್ಯು ಮಾಡಿದ 3ನೇ ಇನ್ನಿಂಗ್ಸ್ನಲ್ಲೇ ತ್ರಿಶತಕ ಸಿಡಿಸಿದ್ರು. ದಿಗ್ಗಜ ಕ್ರಿಕೆಟರ್ಗಳೇ ಮಾಡದ ಸಾಧನೆಯನ್ನ ಮಾಡಿ ತೋರಿಸಿದ್ದ ಕರುಣ್ಗೆ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಫಿಕ್ಸ್ ಅನ್ನೋ ಭರವಸೆ ಇತ್ತು. ಈ ತ್ರಿಶತಕ ವೀರ ನಾಲ್ಕೇ ನಾಲ್ಕು ಇನ್ನಿಂಗ್ಸ್ಗಳ ನಂತರ ಟೀಮ್ ಇಂಡಿಯಾದಿಂದಲೇ ಆಗಿದ್ದು ಕಿಕ್ಔಟ್.
7 ವರ್ಷಗಳ ಬಳಿಕ ಕಮ್ಬ್ಯಾಕ್
ಕರುಣ್ ಟೀಮ್ ಇಂಡಿಯಾ ಪರ ಕೊನೆ ಪಂದ್ಯವನ್ನಾಡಿ ಬರೋಬ್ಬರಿ 7 ವರ್ಷಗಳೇ ಕಳೆದಿವೆ. ಇನ್ನೇನು ಕರಿಯರ್ ಮುಗುದೋಯ್ತು ಎಂಬ ಸ್ಥಿತಿಯಲ್ಲಿದ್ದ ಕರುಣ್ ನಾಯರ್ಗೆ ಮತ್ತೆ ಕ್ರಿಕೆಟ್ ಕೈ ಹಿಡಿದಿದೆ. ಕರಣ್, ಕಮ್ಬ್ಯಾಕ್ ಕನಸು ನನಸಾಗಿದೆ. ಕನ್ನಡಿಗ ಕೇವಲ ಕನಸನ್ನಷ್ಟೇ ಕಂಡಿರಲಿಲ್ಲ. ಇದಕ್ಕೆ ಬೇಕಾದ ಕಠಿಣ ಶ್ರಮದ ಜೊತೆ ನೂರರಷ್ಟು ಎಫರ್ಟ್.. ಕಲ್ಲು ಮುಳ್ಳಿನ ಹಾದಿಯೇ ಇದೆ.
ಇದನ್ನೂ ಓದಿ: SRH ವಿರುದ್ಧ ಸೋಲಿನಿಂದ ಅಂಕಪಟ್ಟಿಯಲ್ಲಿ ಕುಸಿತ.. ಬೆನ್ನಲ್ಲೇ ಆರ್ಸಿಬಿಗೆ ಮತ್ತೊಂದು ಶಾಕ್..!
ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದ ಕರುಣ್ಗೆ ಕರ್ನಾಟಕದ ತಂಡದಲ್ಲೂ ಸ್ಥಾನ ಸಿಗದಂತಾಯ್ತು. ಇದರಿಂದ ವಿದರ್ಭಕ್ಕೆ ವಲಸೆ ಹೋದ ಕರುಣ್, ನಂತರ ರನ್ಭೂಮಿಯಲ್ಲಿ ಸೃಷ್ಟಿಸಿದ್ದು ರನ್ ಶಿಖರ.. ಒಂದಲ್ಲ.. ಎರಡಲ್ಲ.. ರಣಜಿ ಟೂರ್ನಿ, ವಿಜಯ್ ಹಜಾರೆ, ಮುಷ್ತಾಕ್ ಅಲಿ ಟೂರ್ನಿಯಲ್ಲಿ ರನ್ ಹೊಳೆಯನ್ನೇ ಕರುಣ್ ನಾಯರ್ ಹರಿಸಿದ್ದರು.
ದೇಶಿ ಕ್ರಿಕೆಟ್ನಲ್ಲಿ ಕರುಣ್ ನಾಯರ್ ಆಟ
2023-24ರ ರಣಜಿಯಲ್ಲಿ 10 ಪಂದ್ಯಗಳನ್ನಾಡಿದ ಕರುಣ್, 40.58ರ ಬ್ಯಾಟಿಂಗ್ ಸರಾಸರಿಯಲ್ಲಿ 690 ರನ್ ಸಿಡಿಸಿದ್ದರು. 2 ಶತಕ, 3 ಅರ್ಧಶತಕ ದಾಖಲಿಸಿದ್ದ ಕರುಣ್, ವಿದರ್ಭ ಪರ ಟಾಪ್ ಸ್ಕೋರರ್ ಆಗಿ ಮರೆದಾಡಿದ್ದರು. ನಂತರದ 2024-25ರ ರಣಜಿ ಟ್ರೋಫಿಯಲ್ಲೂ ಅದ್ಬುತ ಆಟವಾಡಿದ್ದ ಕರುಣ್, 9 ಪಂದ್ಯಗಳಿಂದ 53.93 ಸರಾಸರಿಯಲ್ಲಿ 863 ರನ್ ಚಚ್ಚಿದ್ದರು. 4 ಶತಕ, 2 ಅರ್ಧಶತಕ ಸಿಡಿಸಿದ್ದ ಕರುಣ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ 8 ಪಂದ್ಯಗಳಿಂದ 389.5ರ ಬ್ಯಾಟಿಂಗ್ ಅವರೇಜ್ನಲ್ಲಿ 779 ರನ್ ಗಳಿಸಿದರು. ಅಷ್ಟೇ ಅಲ್ಲ.! 5 ಶತಕ, 1 ಅರ್ಧಶತಕ ಸಿಡಿಸಿದ ಮಿಂಚಿದ್ರು. ಕರುಣ್ ರನ್ ಪ್ರವಾಹ ಇಲ್ಲಿಗೆ ನಿಲ್ಲಲಿಲ್ಲ. ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್ಗೆ ತೆರಳಿದ ಕನ್ನಡಿಗ ನಾರ್ಥಾಂಪ್ಟನ್‌ಶೈರ್ ಪರ 2023 ಹಾಗೂ 2024ರ ಎರಡೂ ಸೀಸನ್ಗಳಲ್ಲೂ ರನ್ ಮಳೆ ಹರಿಸಿದರು.
ಕೌಂಟಿಯಲ್ಲಿ ಕರುಣ್ ನಾಯರ್ ಬ್ಯಾಟಿಂಗ್
2023ರ ಸೀಸನ್ನಲ್ಲಿ ಕೇವಲ 3 ಪಂದ್ಯಗಳನ್ನಾಡಿದ ಕರುಣ್ ನಾಯರ್, 83ರ ಸರಾಸರಿಯಲ್ಲಿ 249 ರನ್ ಕಲೆಹಾಕಿದ್ರೆ. ತಲಾ 1 ಶತಕ, 1 ಅರ್ಧಶತಕ ಸಿಡಿಸಿದ್ರು. ಇನ್ನು ಈ ವರ್ಷವೂ ಅದೇ ಫಾರ್ಮ್ ಮುಂದುವರಿಸಿದ ಕರುಣ್ , 7 ಪಂದ್ಯಗಳಿಂದ 49ರ ಸರಾಸರಿಯಲ್ಲಿ 487 ರನ್ ಕಲೆಹಾಕಿದ್ದರು. ಈ ಪೈಕಿ 1 ಶತಕ, 3 ಅರ್ಧಶತಕಗಳಿವೆ.
ಕರುಣ್ ನಾಯರ್ ರ ಈ ಅದ್ಬುತ ಆಟಕ್ಕೀಗ ಪ್ರತಿಫಲ ಸಿಕ್ಕಿದೆ. ಅಂದು ಯಾವ ಇಂಗ್ಲೆಂಡ್ ಎದುರು ಡೆಬ್ಯ ಮಾಡಿದ್ರೋ, ಅದೇ ತಂಡದ ಎದುರು ಕ್ರಿಕೆಟ್ನ ಪುನಜನ್ಮ ಸಿಕ್ಕಿದೆ.
ಇದನ್ನೂ ಓದಿ: ಇವತ್ತು ಗುಜರಾತ್ ಸೋತರೆ.. ಆರ್ಸಿಬಿಗೆ ಇದೆ ಇನ್ನೊಂದು ಚಾನ್ಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್