/newsfirstlive-kannada/media/post_attachments/wp-content/uploads/2025/06/Karun_Nair.jpg)
ಸುದೀರ್ಘ 8 ವರ್ಷದ ಹೋರಾಟಕ್ಕೆ ಕೊನೆಗೂ ಫಲ ಸಿಗೋ ದಿನ ಬಂದೆ ಬಿಟ್ಟಿದೆ. ಆಂಗ್ಲರ ನಾಡು ಇಂಗ್ಲೆಂಡ್​​ನಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ಕರುಣ್​ ನಾಯರ್​ ದರ್ಬಾರ್​ ನಡೆಸೋಕೆ ರೆಡಿಯಾಗಿದ್ದಾರೆ. ಅನುಭವಿಸಿದ ನೋವು, ಹತಾಶೆ, ಎದುರಿಸಿದ ಟೀಕೆ-ಟಿಪ್ಪಣಿಗಳಿಗೆ ತನ್ನ ಬ್ಯಾಟ್​​ನಿಂದಲೇ ಖಡಕ್​ ಆನ್ಸರ್​ ಕೊಡೋಕೆ ಕರುನಾಡ ಕುವರ ಸಜ್ಜಾಗಿದ್ದಾರೆ. ಡೌಟೇ ಬೇಡ. ಮೊದಲ ಟೆಸ್ಟ್​ನಿಂದಲೇ ಕರುಣ್​ ಕಮಾಲ್​ ನಡೆಸಲಿದ್ದಾರೆ.
ಇಂಡೋ- ಇಂಗ್ಲೆಂಡ್​ ಟೆಸ್ಟ್​ ಸರಣಿಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಪ್ರತಿಷ್ಠೆಯ ಫೈಟ್​ಗೆ ಇಳಿಯಲು ಟೀಮ್​ ಇಂಡಿಯಾ ಭರ್ಜರಿ ಸಮರಾಭ್ಯಾಸ ನಡೆಸಿ ಸಜ್ಜಾಗಿದೆ. ಜೂನ್​ 20ರಿಂದ ಆರಂಭವಾಗೋ ಮೊದಲ ಟೆಸ್ಟ್​ ಕದನಕ್ಕೆ ಪ್ಲೇಯಿಂಗ್​ ಇಲೆವೆನ್​ ಆಯ್ಕೆಯೂ ಬಹುತೇಕ ಫೈನಲ್​​ ಆಗಿದೆ. ಕಮ್​ಬ್ಯಾಕ್​ ಸ್ಟಾರ್​, ಕನ್ನಡಿಗ ಕರುಣ್​ ನಾಯರ್​​ ಕನಸು ನನಸಾಗೋ ಸಮಯ ಹತ್ತಿರ ಬಂದಿದೆ.
ಮಾರ್ಚ್​​ 28, 2017- ಭಾರತ-ಆಸ್ಟ್ರೇಲಿಯಾ ಟೆಸ್ಟ್​ ಪಂದ್ಯ
ಮಾರ್ಚ್​ 28, 2017 .. ಅಂದ್ರೆ, ಬರೋಬ್ಬರಿ 8 ವರ್ಷ, 2 ತಿಂಗಳುಗಳ ಹಿಂದೆ ಟೀಮ್​ ಇಂಡಿಯಾ ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಪಂದ್ಯವನ್ನಾಡಿತ್ತು. ಅದೇ ಕನ್ನಡಿಗ ಕರುಣ್​ ನಾಯರ್​​ ಆಡಿದ ಕೊನೆಯ ಪಂದ್ಯ. ಇಂಗ್ಲೆಂಡ್​​ ಎದುರು ತ್ರಿಶತಕ ಸಿಡಿಸಿ ಕ್ರಿಕೆಟ್​ ಜಗತ್ತಿನಿಂದ ಶಹಬ್ಬಾಸ್​​ಗಿರಿ ಗಿಟ್ಟಿಸಿಕೊಂಡಿದ್ದ ಕರುಣ್​ ​​ನಂತರದ 3 ಇನ್ನಿಂಗ್ಸ್​​ಗಳಲ್ಲಿ ಫೇಲ್​ ಆಗಿದ್ದೇ ತಡ ಡ್ರಾಪ್​ ಮಾಡಲಾಗಿತ್ತು. ಆ ಬಳಿಕ ಮತ್ತೊಮ್ಮೆ ವೈಟ್​​ ಜೆರ್ಸಿ ತೊಡಬೇಕು, ಭಾರತವನ್ನ ಪ್ರತಿನಿಧಿಸಬೇಕು ಅಂತಾ ಕರುಣ್​ ನಾಯರ್​ ಪಟ್ಟ ಪಾಡು ಅಷ್ಟಿಷ್ಟಲ್ಲ. ಆದ್ರೆ, ಟೀಮ್​ ಮ್ಯಾನೇಜ್​ಮೆಂಟ್​, ಸೆಲೆಕ್ಷನ್​ ಕಮಿಟಿಗೆ ಕರುಣೆ ಹುಟ್ಟಲೇ ಇಲ್ಲ. ಸುದೀರ್ಘ 8 ವರ್ಷಗಳ ಹೋರಾಟದ ಬಳಿಕ ಕೊನೆಗೂ ಮತ್ತೆ ವೈಟ್ ​​ಜೆರ್ಸಿ ತೊಡೋ ಅವಕಾಶ ಕರುಣ್​ ನಾಯರ್​ಗೆ ಬಂದಿದೆ.
ಮಿಡಲ್​ ಆರ್ಡರ್​​ನಲ್ಲಿ ಕನ್ನಡಿಗನ ಬ್ಯಾಟಿಂಗ್.!
ಇಂಗ್ಲೆಂಡ್​​ ಮೊದಲ ಟೆಸ್ಟ್​ ಪಂದ್ಯಕ್ಕೆ ಟೀಮ್​ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಬಹುತೇಕ ಫೈನಲ್​ ಆಗಿದೆ. ಹೆಡ್​ಕೋಚ್​​ ಗೌತಮ್​ ಗಂಭೀರ್​​, ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಯಾವ್ಯಾವ ಆಟಗಾರರು, ಯಾವ ಸ್ಲಾಟ್​ ಆಡಬೇಕು ಅನ್ನೋದನ್ನೂ ನಿರ್ಧರಿಸಿಯಾಗಿದೆ. ಅಭ್ಯಾಸದ ಕಣದಲ್ಲಿ ಇಂಪ್ರೆಸ್​ ಮಾಡಿರುವ ಕರುಣ್​ ನಾಯರ್​​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಫಿಕ್ಸ್​ ಆಗಿದೆ. ಮಿಡಲ್​ ಆರ್ಡರ್​ನಲ್ಲಿ ಕರುಣ್​ ನಾಯರ್​ ಬ್ಯಾಟಿಂಗ್​ ಮಾಡಲಿದ್ದಾರೆ.
ಇಂಗ್ಲೆಂಡ್​​ ಕಂಡಿಷನ್ಸ್​ನಲ್ಲಿ ಕರುಣ್​ ಕಮಾಲ್.!
ಕರುಣ್​ ನಾಯರ್​​ನ ಪ್ಲೇಯಿಂಗ್​ನಲ್ಲಿ ಫಿಟ್​​ ಮಾಡಲು ಮ್ಯಾನೇಜ್​ಮೆಂಟ್​ ಮುಂದಾಗಿರೋದ್ರ ಹಿಂದಿನ ಪ್ರಮುಖ ಕಾರಣವೇ ಇದು. ಬ್ಯಾಟಿಂಗ್​ಗೆ ಹೆಚ್ಚು ನೆರವಾಗದಿರೋ ಕಂಡಿಷನ್ಸ್​ನಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ಸಲೀಸಾಗಿ ರನ್​ಗಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇಂಡಿಯಾ-ಎ ಪರ ಕಣಕ್ಕಿಳಿದಿದ್ದ ಕರುಣ್​ ನಾಯರ್​ ಇಂಗ್ಲೆಂಡ್​ ಲಯನ್ಸ್​​ ವಿರುದ್ಧ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಕೌಂಟಿ ಕ್ರಿಕೆಟ್​​ನಲ್ಲೂ ಕನ್ನಡಿಗನ​ ಅಬ್ಬರ.!
ಇದೊಂದು ಪಂದ್ಯವಲ್ಲ, ಕಳೆದ 2 ಸೀಸನ್​ಗಳಿಂದ ಇಂಗ್ಲೆಂಡ್​ನಲ್ಲಿ ಕೌಂಟಿ ಕ್ರಿಕೆಟ್​ ಆಡಿದ ಅನುಭವವೂ ಕರುಣ್​ಗಿದೆ. ಬರೋಬ್ಬರಿ 56.61ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದಿದ್ದಾರೆ. ರೆಡ್​​ಬಾಲ್​ ಕ್ರಿಕೆಟ್​ನಲ್ಲಿ ಕರುಣ್​ ನಾಯರ್​ ಆಡಿರೋ ಈ ಆಟವೇ ಟೀಮ್​ ಮ್ಯಾನೇಜ್​ಮೆಂಟ್​​ ಮಣೆ ಹಾಕಲು ಮುಂದಾಗಿರೋದ್ರ ಹಿಂದಿನ ಮೇನ್​ ರೀಸನ್​.
ಕೌಂಟಿ ಕ್ರಿಕೆಟ್​​ನಲ್ಲಿ ಕರುಣ್​​ ಪ್ರದರ್ಶನ
ಕಳೆದ 2 ಸೀಸನ್​ಗಳಿಂದ 10 ಟೆಸ್ಟ್​ ಪಂದ್ಯಗಳನ್ನ ಆಡಿರುವ ಕರುಣ್​ ನಾಯರ್​​​, 736 ರನ್​ಗಳಿಸಿದ್ದಾರೆ. 56.61ರ ಸರಾಸರಿಯನ್ನ ಹೊಂದಿದ್ದು, ಅಜೇಯ 202 ರನ್​ಗಳಿಸಿದ್ದು ಕರುಣ್​ ನಾಯರ್​ ಬೆಸ್ಟ್​ ಸ್ಕೋರ್​ ಆಗಿದೆ.
ಡೊಮೆಸ್ಟಿಕ್​ ಕ್ರಿಕೆಟ್​​ನಲ್ಲೂ ಕರುಣ್​ ಕನ್ಸಿಸ್ಟೆಂಟ್.!
ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡೋ ಸ್ಪಷ್ಟ ಗುರಿ ಇಟ್ಟುಕೊಂಡು ಕರುಣ್​ ನಾಯರ್​ ಹೋರಾಟ ನಡೆಸಿದ್ದು ನಿನ್ನೆ, ಮೊನ್ನೆಯಿಂದಲ್ಲ. ಇದಕ್ಕಾಗಿ ಕಳೆದ ಕೆಲ ವರ್ಷಗಳಿಂದ ಡೊಮೆಸ್ಟಿಕ್​ ಕ್ರಿಕೆಟ್​​ನಲ್ಲಿ ಬೆವರು ಸುರಿಸಿದ್ದಾರೆ. ಕಳೆದ ಸೀಸನ್​​ನಲ್ಲಂತೂ ಕನ್ಸಿಸ್ಟೆಂಟ್​ ಆಗಿ ರನ್​ಗಳಿಸಿದ್ದಾರೆ. ವಿಜಯ್​ ಹಜಾರೆ, ರಣಜಿ ಟ್ರೋಫಿ, ಸೈಯದ್​ ಮುಷ್ತಾಕ್​ ಅಲಿ ಟ್ರೋಫಿಯಲ್ಲಿ ಅವಕಾಶ ಸಿಕ್ಕಲೆಲ್ಲಾ ಸಾಮರ್ಥ್ಯ ನಿರೂಪಿಸಿದ್ದಾರೆ.
ಇಂಗ್ಲೆಂಡ್​ ವಿರುದ್ಧವೇ ಟೆಸ್ಟ್​ ಕರಿಯರ್​​ ಆರಂಭಿಸಿದ್ದ ಕರುಣ್​, ಆಂಗ್ಲರ ವಿರುದ್ಧವೇ ಇದೀಗ ಕಮ್​ಬ್ಯಾಕ್​ ಮಾಡ್ತಿದ್ದಾರೆ. ಕೊನೆಗೂ ಕರುಣ್​ ನಾಯರ್​ ಸುರಿಸಿದ ಬೆವರು, ಛಲದ ಹೋರಾಟ, ಸಾಧಿಸಬೇಕು ಎನ್ನುವ ಹಠ, ಪರಿಶ್ರಮಕ್ಕೆ ಫಲ ಸಿಗೋ ಟೈಮ್​ ಹತ್ತಿರ ಬಂದಿದೆ. ಲೀಡ್ಸ್​​​ನಲ್ಲಿ ನಡೆಯೋ ಮೊದಲ ಟೆಸ್ಟ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿರೋ ಕನ್ನಡಿಗ ಅಬ್ಬರಿಸಲಿ. ತನ್ನನ್ನ ಕಡೆಗಣಿಸಿದವರಿಗೆ ಬ್ಯಾಟ್​​ನಿಂದಲೇ ಉತ್ತರ ಕೊಡಲಿ ಅನ್ನೋದು ನಮ್ಮ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ