/newsfirstlive-kannada/media/post_attachments/wp-content/uploads/2025/06/Karun_Nair.jpg)
ಕರುಣ್ ನಾಯರ್ ಟೀಮ್ ಇಂಡಿಯಾದ ಕಮ್ಬ್ಯಾಕ್ ಸ್ಟಾರ್. 8 ವರ್ಷಗಳ ಬಳಿಕ ರೀ ಎಂಟ್ರಿ ನೀಡಿರುವ ಕರುಣ್, ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆದ್ರೆ, ಆ ನಿರೀಕ್ಷೆ ಹುಸಿಯಾಗಿಸಿರುವ ಕರುಣ್, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಗ್ಲೆಂಡ್ ಪ್ರವಾಸದೊಂದಿಗೆ ಕರುಣ್ ಕರಿಯರ್ಗೆ ಎಂಡ್ ಕಾರ್ಡ್ ಬಿದ್ದರು ಅಚ್ಚರಿ ಇಲ್ಲ.
ಕಮ್ಬ್ಯಾಕ್ ಹೀರೋ ಕರುಣ್ ನಾಯರ್, ಜೀರೋ ಫರ್ಪಾಮೆನ್ಸ್. ದೇಶಿ ಕ್ರಿಕೆಟ್ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ಕರುಣ್, ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ತಾರೆ ಎಂಬ ನಿರೀಕ್ಷೆ ಇತ್ತು. ಆದ್ರೆ, ಸಿಕ್ಕ ಒಂದೊಂದು ಅವಕಾಶ ಮಣ್ಣು ಪಾಲು ಮಾಡ್ತಿದ್ದಾರೆ.
ಚಾನ್ಸ್ ಸಿಕ್ಕರೂ ಕರುಣ್ ನಾಯರ್, ಮತ್ತದೇ ವೈಫಲ್ಯ..!
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಲಯನ್ಸ್ ವಿರುದ್ಧ ಡಬಲ್ ಸೆಂಚುರಿ ಸಿಡಿಸಿದ್ದ ಕರುಣ್, ಅಬ್ಬರಿಸುವ ಭರವಸೆ ಹುಟ್ಟಿಹಾಕಿದ್ದರು. ಆದ್ರೆ, ರಿಯಲ್ ಟೆಸ್ಟ್ನಲ್ಲಿ ಕನ್ನಡಿಗ ಕರುಣ್ ಮಾಡಿದ್ದೇ ಬೇರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ್ದ ಕರುಣ್, ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇದರೊಂದಿಗೆ 2ನೇ ಇನ್ನಿಂಗ್ಸ್ನಲ್ಲಿ ಆಡ್ತಾರೆ ಎಂಬ ನಿರೀಕ್ಷೆ ಇತ್ತು. ಆದ್ರೆ, 2ನೇ ಇನ್ನಿಂಗ್ಸ್ನಲ್ಲೂ ನಿರಾಸೆ ಮೂಡಿಸಿದ ಕರುಣ್, 20 ರನ್ ಸಿಡಿಸಲು ಸುಸ್ತಾದರು.
ಅಷ್ಟೇ ಅಲ್ಲ, ಲೀಡ್ಸ್ನಲ್ಲಿ ಫೇಲ್ಯೂರ್ ಆಗಿದ್ದ ಕರುಣ್, ಎಡ್ಜ್ಬಾಸ್ಟನ್ನಲ್ಲಿ ಬ್ಲಾಕ್ ಬಾಸ್ಟರ್ ಪರ್ಫಾಮೆನ್ಸ್ ನೀಡುವ ಚಾನ್ಸ್ ಇತ್ತು. ನೆಚ್ಚಿನ 3ನೇ ಕ್ರಮಾಂಕದಲ್ಲೇ ಕಣಕ್ಕಿಳಿದಿದ್ದ ಕರುಣ್ಗೆ ರನ್ ಗಳಿಸುವ ಸುವರ್ಣಾವಕಾಶವೂ ಇತ್ತು. ಆದ್ರೆ, ಉತ್ತಮ ಸ್ಟಾರ್ಟ್ ನಡುವೆಯೂ ಕರುಣ್, 31 ರನ್ಗೆ ವಿಕೆಟ್ ಒಪ್ಪಿಸಿ ಮತ್ತೆ ನಿರಾಸೆ ಮೂಡಿಸಿದರು. ಅವತ್ತು ಚಾನ್ಸ್ಗಾಗಿ ಅಂಗಲಾಚಿದ ಕರುಣ್, ಈಗ ಚಾನ್ಸ್ ಸಿಕ್ಕರೂ ಇಂಪ್ರೆಸ್ ಮಾಡುವಲ್ಲಿ ವಿಫಲರಾಗ್ತಿದ್ದಾರೆ.
ತ್ರಿಶತಕ ಹೊರತುಪಡಿಸಿ ಕರುಣ್ ಬ್ಯಾಟ್ನಿಂದ ಬಂದಿಲ್ಲ ‘ರನ್’!
ಕರುಣ್ ಟ್ಯಾಲೆಂಟೆಡ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ, ಕರುಣ್, ಸಿಕ್ಕ ಅವಕಾಶಗಳನ್ನ ಕರುಣ್ ಎನ್ಕ್ಯಾಶ್ ಮಾಡಿಕೊಳ್ಳಲ್ಲ. ಇದಕ್ಕೆ ಸಾಕ್ಷಿ ಕೇವಲ ಪ್ರಸಕ್ತ ಇಂಗ್ಲೆಂಡ್ ಪ್ರವಾಸ ಮಾತ್ರವೇ ಸಾಕ್ಷಿಯಲ್ಲ. ತ್ರಿಬಲ್ ಶತಕ ಸಿಡಿಸಿದ ಬಳಿಕ ಕರುಣ್, 7 ಇನ್ನಿಂಗ್ಸ್ಗಳಿಂದ 15ರ ಬ್ಯಾಟಿಂಗ್ ಆ್ಯವರೇಜ್ನಲ್ಲಿ ಗಳಿಸಿದ 105 ರನ್.
ಇದನ್ನೂ ಓದಿ:ಗುಡ್ನ್ಯೂಸ್ ಎಂದ ಭಾವನಾ ರಾಮಣ್ಣ.. 40ನೇ ವಯಸ್ಸಲ್ಲಿ ಅಮ್ಮ ಆಗ್ತಿದ್ದಾರೆ ಸ್ಯಾಂಡಲ್ವುಡ್ ನಟಿ
ಇಂಟ್ರೆಸ್ಟಿಂಗ್ ಅಂದ್ರೆ, ಈ 7 ಇನ್ನಿಂಗ್ಸ್ಗಳ ಪೈಕಿ ಕರುಣ್, ಗಳಿಸಿದ ಅತ್ಯಧಿಕ ರನ್ ಕೇವಲ 31 ಮಾತ್ರ. ತ್ರಿಬಲ್ ಸೆಂಚುರಿಗೂ ಮುನ್ನವೂ ಕರುಣ್, ಒಮ್ಮೆ 4 ರನ್, ಮತ್ತೊಮ್ಮೆ 13 ರನ್ ಮಾತ್ರ. ಅಂದ್ರೆ, ಒಂದೇ ಒಂದು ಇನ್ನಿಂಗ್ಸ್ನಲ್ಲಿ ಅಜೇಯ 303 ರನ್ ಗಳಿಸಿರೋ ಕರುಣ್, ಇನ್ನುಳಿದ 9 ಇನ್ನಿಂಗ್ಸ್ಗಳಿಂದ 122 ರನ್ ಗಳಿಸಿದ್ದಾರೆ. ಇದು ಸಹಜವಾಗೇ ಹೊಸ ಚರ್ಚೆಗೆ ನಾಂದಿಯಾಡಿದೆ.
2ನೇ ಇನ್ನಿಂಗ್ಸ್ ಆಡದಿದ್ರೆ ಇದೇ ಕೊನೆ ಪ್ರವಾಸ..?
ದೇಶಿ ಕ್ರಿಕೆಟ್ನಲ್ಲಿ ಕರುಣ್ ರನ್ ಗಳಿಸಿದ್ದಾರೆ. ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ. ಪ್ರತಿಫಲವಾಗಿ ಟೀಮ್ ಇಂಡಿಯಾಗೆ ಮರಳಿದ್ದಾರೆ. ಇದಕ್ಕೆ ತಕ್ಕಂತೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗ್ತಿದೆ. ಆದ್ರೆ, ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳುವಲ್ಲಿ ಕರುಣ್, ಎಡವಿದ್ದಾರೆ. ಇದು ರನ್ ಗಳಿಸದ ಕರುಣ್, ಟೀಮ್ ಇಂಡಿಯಾಗೆ ಯಾಕೆ ಎಂಬ ಪ್ರಶ್ನೆಯನ್ನು ಉದ್ಬವಿಸಿದೆ. ಸದ್ಯ ಡು ಆರ್ ಡೈ ಪರಿಸ್ಥಿತಿಗೆ ಸಿಲುಕಿರುವ ಕರುಣ್ ನಾಯರ್, 2ನೇ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಬಿಗ್ ಸ್ಕೋರ್ ಕಲೆಹಾಕಬೇಕಿದೆ. ಇಲ್ಲ ಕರುಣ್ ಪಾಲಿಗೆ ಇಂಗ್ಲೆಂಡ್ ಪ್ರವಾಸವೇ ಕೊನೆಯಾಗುವುದರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ